Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar: ಯುವರತ್ನ ಟೀಮ್​ ಜೊತೆ ಪುನೀತ್​ ನಿಮ್ಮೂರಿಗೆ ಬರೋದು ಯಾವತ್ತು? ಇಲ್ಲಿದೆ ಫುಲ್​ ವೇಳಾಪಟ್ಟಿ!

Yuvarathnaa: ಬಹುನಿರೀಕ್ಷಿತ ‘ಯುವರತ್ನ’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ. ಆ ಸಲುವಾಗಿ ಪುನೀತ್​ ರಾಜ್​ಕುಮಾರ್​ ಅವರು ರಾಜ್ಯಾದ್ಯಂತ ಸಂಚರಿಸಿ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

Puneeth Rajkumar: ಯುವರತ್ನ ಟೀಮ್​ ಜೊತೆ ಪುನೀತ್​ ನಿಮ್ಮೂರಿಗೆ ಬರೋದು ಯಾವತ್ತು? ಇಲ್ಲಿದೆ ಫುಲ್​ ವೇಳಾಪಟ್ಟಿ!
ಯುವರತ್ನ ಸಿನಿಮಾದಲ್ಲಿ ಪುನೀತ್​ - ಧನಂಜಯ
Follow us
ಮದನ್​ ಕುಮಾರ್​
|

Updated on:Mar 21, 2021 | 8:11 AM

ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಮತ್ತು ನಟ ಪುನೀತ್​ ರಾಜ್​ಕುಮಾರ್​ ಕಾಂಬಿನೇಷನ್​ನ ಯುವರತ್ನ ಸಿನಿಮಾ ಏ.1ರಂದು ತೆರೆಕಾಣಲು ಸಜ್ಜಾಗಿದೆ. ಅದಕ್ಕೂ ಮುನ್ನ ಇಡೀ ಯುವರತ್ನ ತಂಡ ರಾಜ್ಯಾದ್ಯಂತ ಸಂಚಾರ ಮಾಡಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲು ಪ್ಲ್ಯಾನ್​ ಮಾಡಿಕೊಂಡಿದೆ. ಪುನೀತ್​ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ, ಅಲ್ಲಿರುವ ತಮ್ಮ ಅಭಿಮಾನಿಗಳ ಜೊತೆ ಕಾಲ ಕಳೆಯಲಿದ್ದಾರೆ. ಹಾಗಾದರೆ ಯಾವ ಯಾವ ಊರಿಗೆ ಅಪ್ಪು ಭೇಟಿ ನೀಡಲಿದ್ದಾರೆ? ಅವರು ನಿಮ್ಮ ಊರಿಗೆ ಬರುವ ದಿನಾಂಕ ಯಾವುದು? ಇಲ್ಲಿದೆ ವೇಳಾ ಪಟ್ಟಿ.

ಈ ಬಾರಿ ಹುಟ್ಟುಹಬ್ಬದ ದಿನ ಪುನೀತ್​ ತಮ್ಮ ಮನೆ ಬಳಿ ಯಾವುದೇ ಅಭಿಮಾನಿಗಳನ್ನೂ ಭೇಟಿ ಆಗಿರಲಿಲ್ಲ. ಅದರ ಬದಲಿಗೆ ತಾವೇ ತಮ್ಮ ಅಭಿಮಾನಿಗಳ ಊರಿಗೆ ತೆರಳಬೇಕು ಎಂದು ನಿರ್ಧರಿಸಿದ್ದರು. ಅದಕ್ಕಾಗಿ ಮೈಸೂರಿನಲ್ಲಿ ನಡೆಯಬೇಕಿದ್ದ ಯುವಸಂಭ್ರಮ (ಪ್ರೀ-ರಿಲೀಸ್​) ಕಾರ್ಯಕ್ರಮವನ್ನು ರದ್ದು ಮಾಡಿಕೊಂಡು, ರಾಜ್ಯದ ಪ್ರತಿ ಜಿಲ್ಲೆಗೂ ತಾವೇ ಭೇಟಿ ನೀಡುವುದಾಗಿ ತಿಳಿಸಿದ್ದರು. ಈಗ ಅವರ ಶೆಡ್ಯೂಲ್​ ಹೇಗಿದೆ ಎಂಬ ಮಾಹಿತಿ ಕೂಡ ಹೊರ ಬಿದ್ದಿದೆ.

ಮೊದಲ ಹಂತವಾಗಿ ಮಾ.21ರಿಂದ 23ರವರೆಗೆ ಯುವಸಂಭ್ರಮ ಯಾತ್ರೆ ಶುರು ಆಗಲಿದೆ. 21ರಂದು ಕಲಬುರಗಿ, ಬೆಳಗಾವಿ ಮತ್ತು ಹುಬ್ಬಳಿಗೆ ಅಪ್ಪು ಭೇಟಿ ನೀಡಲಿದ್ದಾರೆ. ಕಲಬುರಗಿಯ ಏಷಿಯನ್​ ಮಾಲ್​ ಪಕ್ಕ ಬೆಳಗ್ಗೆ 10.30ಕ್ಕೆ, ಬೆಳಗಾವಿಯಲ್ಲಿ ಐನಾಕ್ಸ್​ ಚಂದನ್​ ಪಾರ್ಕಿಂಗ್​ನಲ್ಲಿ​ ಮಧ್ಯಾಹ್ನ 1 ಗಂಟೆಗೆ ಹಾಗೂ ಹುಬ್ಬಳಿಯ ಅರ್ಬನ್​ ಓಯಾಸಿಸ್​ ಮಾಲ್​ ಹತ್ತಿರ ಸಂಜೆ 4.30ಕ್ಕೆ ಪುನೀತ್​ ಅಭಿಮಾನಿಗಳಿಗೆ ಸಿಗಲಿದ್ದಾರೆ.

ಎರಡರನೇ ದಿನ (ಮಾ.22) ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರಿಗೆ ಪುನೀತ್​ ಬರಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಬಳ್ಳಾರಿಯ ದುರ್ಗಾಂಬ ದೇವಸ್ಥಾನ, ಮಧ್ಯಾಹ್ನ 1 ಗಂಟೆಗೆ ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಆವರಣ ಮತ್ತು ಸಂಜೆ 4.30ಕ್ಕೆ ತುಮಕೂರಿನ ಎಸ್​ಐಟಿ ಇಂಜಿನಿಯರಿಂಗ್​ ಕಾಲೇಜು ಮೈದಾನದಲ್ಲಿ ಅಭಿಮಾನಿಗಳನ್ನು ಪುನೀತ್​ ಭೇಟಿ ಆಗಲಿದ್ದಾರೆ.

ಮಾ.23ರಂದು ಮೈಸೂರು ಮತ್ತು ಮಂಡ್ಯದಲ್ಲಿ ಯುವರತ್ನ ಟೀಮ್​ ಹಾಜರಿ ಹಾಕಲಿದೆ. ಮೈಸೂರು ಮಾನಸ ಗಂಗೋತ್ರಿ ಕ್ಯಾಂಪಸ್​ನ ಓಪನ್​ ಏರ್​ ಥಿಯೇಟರ್​ನಲ್ಲಿ ಬೆಳಗ್ಗೆ 10 ಗಂಟೆಗೆ ಪುನೀತ್​ ಆಗಮಿಸಲಿದ್ದಾರೆ. ಮಂಡ್ಯದ ಸಿಲ್ವರ್​ ಬ್ಯುಬ್ಲಿ ಮೈದಾನದಲ್ಲಿ ಮಧ್ಯಾಹ್ನ 1.30ಕ್ಕೆ ‘ಪವರ್​ ಸ್ಟಾರ್​’ ತಮ್ಮ ಅಭಿಮಾನಿಗಳ ಜೊತೆ ಬೆರೆಯಲಿದ್ದಾರೆ ಎಂದು ಹೊಂಬಾಳೆ ಫಿಲ್ಮ್ಸ್​ ಮಾಹಿತಿ ನೀಡಿದೆ.

ಇಷ್ಟೇ ಅಲ್ಲದೆ, ಇನ್ನಷ್ಟು ಜಿಲ್ಲೆಗಳಿಗೆ ಯುವರತ್ನ ತಂಡದ ಜೊತೆ ಪುನೀತ್​ ರಾಜ್​ಕುಮಾರ್ ಭೇಟಿ ನೀಡಲಿದ್ದಾರೆ. ಅವರ ವೇಳಾಪಟ್ಟಿಯನ್ನು ಚಿತ್ರತಂಡ ಶೀಘ್ರವೇ ಬಿಡುಗಡೆ ಮಾಡಲಿದೆ.

ಇದನ್ನೂ ಓದಿ: ನನ್ನನ್ನು ಪ್ರೀತಿಸಬೇಡಿ, ನನಗೆ ಮದ್ವೆ ಆಗಿದೆ; ಪುನೀತ್​ ರಾಜ್​ಕುಮಾರ್​ ಹೀಗೆ ಅಂದಿದ್ಯಾಕೆ?

Yuvarathnaa Trailer: ಕೌಂಟರ್​ ಕೊಟ್ರೆ ಎನ್​ಕೌಂಟರ್​​; ಯುವರತ್ನ ಟ್ರೇಲರ್​ನಲ್ಲಿ ಮಿಂಚಿದ ಪುನೀತ್​ ರಾಜ್​ಕುಮಾರ್​

Published On - 8:08 am, Sun, 21 March 21

ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು
ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು
6 ತಿಂಗಳ ಮಗುವನ್ನೆತ್ತಿಕೊಂಡು ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತ
6 ತಿಂಗಳ ಮಗುವನ್ನೆತ್ತಿಕೊಂಡು ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತ
‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್
‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್
ಬೆಂಗಳೂರು ಹೊರವಲಯಗಳಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ
ಬೆಂಗಳೂರು ಹೊರವಲಯಗಳಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ
ಚಾಮರಾಜನಗರ: ಹಳ್ಳದ ನೀರಿನಲ್ಲಿ ಗಜಪಡೆ ಜಲಕ್ರೀಡೆ, ವಿಡಿಯೋ ವೈರಲ್
ಚಾಮರಾಜನಗರ: ಹಳ್ಳದ ನೀರಿನಲ್ಲಿ ಗಜಪಡೆ ಜಲಕ್ರೀಡೆ, ವಿಡಿಯೋ ವೈರಲ್
Daily Devotional: ಉದ್ಯೋಗ ಸಿಗುತ್ತಿಲ್ಲವಾ? ಇಲ್ಲಿದೆ ಪರಿಹಾರ ಮಂತ್ರ
Daily Devotional: ಉದ್ಯೋಗ ಸಿಗುತ್ತಿಲ್ಲವಾ? ಇಲ್ಲಿದೆ ಪರಿಹಾರ ಮಂತ್ರ