BBK8: ತಂದೆ-ಮಗಳ ಪ್ರೀತಿ ಮೇಲೆಯೇ ಶಂಕರ್​ ಅಶ್ವತ್ಥ್​ಗೆ ಅನುಮಾನ! ಮಾನವೀಯತೆಗೆ ಬೆಲೆ ಇಲ್ವಾ?

Bigg Boss Kannada : ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಹೊಸ ಹೊಸ ಟ್ವಿಸ್ಟ್​ಗಳು ಸಿಗುತ್ತಿವೆ. ಎಲ್ಲರ ಮುಖವಾಡ ನಿಧಾನಕ್ಕೆ ಬಯಲಾಗುತ್ತಿದೆ. ಈ ಮಾತಿಗೆ ಶಂಕರ್​ ಅಶ್ವತ್ಥ್​ ಕೂಡ ಹೊರತಲ್ಲ.

BBK8: ತಂದೆ-ಮಗಳ ಪ್ರೀತಿ ಮೇಲೆಯೇ ಶಂಕರ್​ ಅಶ್ವತ್ಥ್​ಗೆ ಅನುಮಾನ! ಮಾನವೀಯತೆಗೆ ಬೆಲೆ ಇಲ್ವಾ?
ಬಿಗ್​ ಬಾಸ್​ನಲ್ಲಿ ಶಂಕರ್​ ಅಶ್ವತ್ಥ್​
Follow us
ಮದನ್​ ಕುಮಾರ್​
| Updated By: guruganesh bhat

Updated on: Mar 21, 2021 | 12:44 PM

ಸದ್ಯ ಬಿಗ್​ ಬಾಸ್​ ಮನೆಯಲ್ಲಿ ಮೂರು ವಾರಗಳು ಕಳೆದಿವೆ. ನಾಲ್ಕನೇ ವಾರದ ಆಟಕ್ಕೆ ಎಲ್ಲ ಸ್ಪರ್ಧಿಗಳು ಸಜ್ಜಾಗುತ್ತಿದ್ದಾರೆ. ಈ ನಡುವೆ ಎಲ್ಲರೂ ತಮ್ಮ ಆಟದ ವೈಖರಿಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ನಟ ಶಂಕರ್​ ಅಶ್ವತ್ಥ್​ ಕೂಡ ನೇರ ನಡೆನುಡಿಯಿಂದ ಸದ್ದು ಮಾಡುತ್ತಿದ್ದಾರೆ. ಆದರೆ ಅವರು ತಂದೆ-ಮಗಳ ಪ್ರೀತಿ ಮೇಲೆ ಅನುಮಾನ ಪಟ್ಟಿರುವುದು ಈಗ ಚರ್ಚೆಗೆ ಕಾರಣ ಆಗಿದೆ!

ಹೌದು, ಡೊಡ್ಮನೆಯಲ್ಲಿ ಇರುವ ಇರುವ ಅತಿ ಹಿರಿಯ ಸ್ಪರ್ಧಿ ಎಂದರೆ ಅದು ಶಂಕರ್​ ಅಶ್ವತ್ಥ್​. ಎಲ್ಲರೂ ಅವರನ್ನು ತಂದೆಯ ರೀತಿ ನೋಡುತ್ತಿದ್ದಾರೆ. ಸಾಧ್ಯವಾದಾಗಲೆಲ್ಲ ಅವರಿಗೆ ಎಲ್ಲರೂ ಸಹಾಯ ಮಾಡುತ್ತಾರೆ. ನೀವು ನಮ್ಮ ತಂದೆ ಸಮಾನರು ಎಂದು ರಾಜೀವ್​, ಶಮಂತ್​, ಗೀತಾ ಭಾರತಿ​ ಭಟ್​ ಕೂಡ ಬಾಯಿ ಬಿಟ್ಟು ಹೇಳಿದ್ದಾರೆ. ಆದರೆ ಇದೇ ವಿಚಾರ ಶಂಕರ್​ಗೆ ಮುಳುವಾಗಿದೆ! ಅಚ್ಚರಿ ಎನಿಸಿದರೂ ಇದು ನಿಜ.

ಮೂರನೇ ವಾರದಲ್ಲಿ ಶಂಕರ್​ ಅವರ ಪರ್ಫಾಮೆನ್ಸ್​ ಚೆನ್ನಾಗಿಲ್ಲ ಎಂದು ಹೇಳಿ ಅವರಿಗೆ ಕಳಪೆ ಹಣೆಪಟ್ಟಿ ಕಟ್ಟಲಾಯಿತು. ಹಾಗಾಗಿ ಅವರನ್ನು ಜೈಲಿಗೆ ಕೂಡ ಕಳಿಸಲಾಯಿತು. ಯಾಕೆ ಇಂಥ ಪರಿಸ್ಥಿತಿ ಬಂತು ಎಂದು ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್​ನಲ್ಲಿ ಶಂಕರ್​ಗೆ ಸುದೀಪ್​ ಪ್ರಶ್ನೆ ಮಾಡಿದರು. ಅದಕ್ಕೆ ಶಂಕರ್​ ನೀಡಿದ ಉತ್ತರ ಕೇಳಿ ಎಲ್ಲರಿಗೂ ಒಂದು ಕ್ಷಣ ಅಚ್ಚರಿ ಆಯಿತು. ತಂದೆ ಸಮಾನರು ಎಂದು ಗೀತಾ ಭಾರತಿ ಭಟ್​ ಅವರು ಕಾಫಿ ಮಾಡಿಕೊಟ್ಟಿದ್ದರ ಹಿಂದೆಯೂ ಸ್ಟ್ರ್ಯಾಟಜಿ ಇತ್ತು ಎಂದು ಶಂಕರ್​ ಅನುಮಾನ ವ್ಯಕ್ತಪಡಿಸಿದ್ದಾರೆ!

‘ಪ್ರಶಾಂತ್​ ಅವರು ಬಹಳಷ್ಟು ಸಲ ನನಗೆ ಕಾಫಿ, ಟೀ ಮಾಡಿಕೊಟ್ಟಿದ್ದಾರೆ. ಗೀತಾ ಕೂಡ ಡ್ಯಾಡಿ ನಿಮಗೆ ಊಟಕ್ಕೆ ಹಾಕ್ಲಾ ಎಂದು ಸಹಾಯ ಮಾಡಿದ್ದಾರೆ. ಅದರ ಬಗ್ಗೆ ಜೈಲಲ್ಲಿ ಕುಳಿತು ಯೋಚನೆ ಮಾಡಿದೆ. ಯಾವಾಗಲೂ ನಾನು ಸೋಫಾ ಮೇಲೆ ಕೂತಿರುತ್ತೇನೆ ಎಂದು ಪ್ರಶಾಂತ್​ ಆರೋಪ ಮಾಡಿದರು. ನಾನು ಕೆಲಸ ಮಾಡದೇ ಸೋಮಾರಿ ಆಗಿದ್ದೇನೆ ಎಂಬುದನ್ನು ಬಿಂಬಿಸುವ ಸಲುವಾಗಿಯೇ ಇವರೆಲ್ಲ ಹೀಗೆ ಸ್ಟ್ರ್ಯಾಟಜಿ ಮಾಡಿದ್ರೇನೋ ಅಂತ ಅನಿಸಿತು. ನಾನು ಮಾಡಬೇಕಾಗಿದ್ದ ಕೆಲಸವನ್ನು ಅವರೇ ತಡೆದು, ಬೇರೆಯವರ ಕಣ್ಣಲ್ಲಿ ಒಳ್ಳೆಯವರು ಅನಿಸಿಕೊಳ್ಳುತ್ತಿದ್ದಾರಾ ಎಂಬ ಯೋಚನೆ ನನಗೆ ಬಂತು’ ಎಂದು ಸುದೀಪ್​ ಬಳಿ ಶಂಕರ್​ ಹೇಳಿದ್ದಾರೆ.

‘ಆದರೆ ನಾವು ಯಾರೂ ಇಲ್ಲಿ ಸ್ಟ್ರ್ಯಾಟಜಿ ಮಾಡುತ್ತಿಲ್ಲ ಅನಿಸುತ್ತೆ ಸರ್. ಶಂಕರ್​ ಬಗ್ಗೆ ನಾವು ತೋರಿಸುತ್ತಿರುವ ಕಾಳಜಿ ನಿಜವಾದ್ದು. ಆದರೆ ಜೈಲಿನಿಂದ ಹೊರಬಂದಾಗ ಊಟ ಹಾಕಿಕೊಡ್ಲಾ ಎಂದು ಕೇಳಿದಾಗ ಯಾರ ಸಹವಾಸನೂ ಬೇಡ ಎಂದು ಅವರು ಹೇಳಿದ್ದು ನನಗೆ ಬೇಸರವಾಯಿತು’ ಎಂದು ಗೀತಾ ಭಾರತಿ ಭಟ್​ ಹೇಳಿದ್ದಾರೆ.

ಇದನ್ನೂ ಓದಿ: ನಿನ್ನೆ-ಮೊನ್ನೆ ಬಚ್ಚಾ ನನ್ನನ್ನು ಜಡ್ಜ್​ ಮಾಡ್ಬೇಕಾ? ಜೈಲಿನಿಂದ ಹೊರಬಂದು ಸಂಬರಗಿಗೆ ಎಚ್ಚರಿಕೆ ನೀಡಿದ ಶಂಕರ್​ ಅಶ್ವತ್ಥ್​

ಬಿಗ್​ ಬಾಸ್​ ಅಭ್ಯರ್ಥಿಗಳ ಕುತಂತ್ರ ಬುದ್ಧಿ ಬಗ್ಗೆ ಸುದೀಪ್​ ಬಳಿ ಅಳಲು ತೋಡಿಕೊಂಡ ಶಂಕರ್​ ಅಶ್ವತ್ಥ್​ ​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ