ಬಿಗ್​ ಬಾಸ್​ ಅಭ್ಯರ್ಥಿಗಳ ಕುತಂತ್ರ ಬುದ್ಧಿ ಬಗ್ಗೆ ಸುದೀಪ್​ ಬಳಿ ಅಳಲು ತೋಡಿಕೊಂಡ ಶಂಕರ್​ ಅಶ್ವತ್ಥ್​ ​

ಬಿಗ್​ ಬಾಸ್​ ಮನೆ ಸೇರಿದ ಪ್ರತಿ ಅಭ್ಯರ್ಥಿಗೂ ಗೆಲ್ಲಬೇಕು ಎನ್ನುವ ಛಲ ಇರುತ್ತದೆ. ಇದೇ ಕಾರಣಕ್ಕೆ ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಮಸೆಯುತ್ತಲೇ ಇರುತ್ತಾರೆ.

ಬಿಗ್​ ಬಾಸ್​ ಅಭ್ಯರ್ಥಿಗಳ ಕುತಂತ್ರ ಬುದ್ಧಿ ಬಗ್ಗೆ ಸುದೀಪ್​ ಬಳಿ ಅಳಲು ತೋಡಿಕೊಂಡ ಶಂಕರ್​ ಅಶ್ವತ್ಥ್​  ​
ಶಂಕರ್​ ಅಶ್ವತ್ಥ್​
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Mar 14, 2021 | 3:23 PM

ಕನ್ನಡ ಬಿಗ್​ ಬಾಸ್​ ಎರಡನೇ ವಾರದ ಎಲಿಮಿನೇಷನ್​ಗೆ ಕ್ಷಣಗಣನೆ ಆರಂಭವಾಗಿದೆ. ಗೀತಾ ಅಥವಾ ನಿರ್ಮಾಲಾ ಇವರಲ್ಲಿ ಒಬ್ಬರು ಮನೆಯಿಂದ ಹೊರ ಹೋಗೋದು ಬಹುತೇಕ ಖಚಿತವಾಗಿದೆ. ಈ ಎಲ್ಲ ಪ್ರಶ್ನೆಗಳಿಗೆ ಇಂದು ರಾತ್ರಿ ಉತ್ತರ ಸಿಗಲಿದೆ. ಈ ಮಧ್ಯೆ ಮನೆಯಲ್ಲಿ ನಡೆಯುತ್ತಿರುವ ಕುತಂತ್ರ ಬುದ್ಧಿ ಬಗ್ಗೆ ಶಂಕರ್​ ಅಶ್ವತ್ಥ್​​ ಮೌನ ಮುರಿದಿದ್ದಾರೆ. ಯಾರು ಹೇಗೆ ಎನ್ನುವ ವಿಚಾರದ ಬಗ್ಗೆ ‘ಸೂಪರ್ ಸಂಡೆ ವಿತ್ ಸುದೀಪ’​ದಲ್ಲಿ ಹೇಳಿಕೊಂಡಿದ್ದಾರೆ. ಬಿಗ್​ ಬಾಸ್​ ಮನೆ ಸೇರಿದ ಪ್ರತಿ ಅಭ್ಯರ್ಥಿಗೂ ಗೆಲ್ಲಬೇಕು ಎನ್ನುವ ಛಲ ಇರುತ್ತದೆ. ಇದೇ ಕಾರಣಕ್ಕೆ ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಮಸೆಯುತ್ತಲೇ ಇರುತ್ತಾರೆ. ಗೆಳೆಯರಂತೆ ಕಂಡವರೂ ಹಿಂದಿನಿಂದ ಚಾಕು ಹಾಕುತ್ತಾರೆ. ಇದು ಇಂದು ನಿನ್ನೆಯ ಕಥೆಯಲ್ಲ. ಬಿಗ್​ ಬಾಸ್​ ಆರಂಭವಾದಾಗಿನಿಂದಲೂ ಇದು ಮನೆಯಲ್ಲಿ ನಡೆದೇ ಇದೆ.

ಈ ಬಾರಿಯೂ ಹಾಗೆಯೇ ಆಗಿದೆ. ಶುಭಾ ಪೂಂಜಾ ಹಾಗೂ ನಿಧಿ ಸುಬ್ಬಯ್ಯ ತುಂಬಾನೇ ಕ್ಲೋಸ್​ ಫ್ರೆಂಡ್ಸ್​​​ ಆಗಿದ್ದರು. ಆದರೆ, ವೈರಸ್​ ಟಾಸ್ಕ್​ ನಂತರ ಇಬ್ಬರ ಗೆಳೆತನದಲ್ಲಿ ಬಿರುಕು ಮೂಡಿದೆ. ಹೀಗೆ ಅನೇಕರ ನಡುವೆ ವೈಷಮ್ಯ ಮೂಡಿದೆ. ಈಗ ಅಶ್ವತ್ಥ್​ ನಾರಾಯಣ್​ ಮನೆಯಲ್ಲಿ ಇರುವ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿ ಇಂದು ಪ್ರೋಮೋ ಒಂದನ್ನು ತನ್ನ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಸುದೀಪ್​ ನೇರವಾಗಿ ಮಾತನಾಡುವ ಒಂದು ಟಾಸ್ಕ್​ ನೀಡಿದ್ದರು. ಇದರನ್ವಯ ಪ್ರತಿ ಅಭ್ಯರ್ಥಿ ಯಾರು ಫೇಕ್​, ಯಾರು ಒಳ್ಳೆಯವರು ಎಂದು ಹೇಳಬೇಕು. ಕೆಲವರು ಗೀತಾ ಅವರ ಹೆಸರನ್ನು ಆಯ್ಕೆ ಮಾಡಿಕೊಂಡರೆ ಇನ್ನೂ ಕೆಲವರು ಚಂದ್ರಕಲಾ ಹೆಸರನ್ನು ಸೂಚಿಸಿದರು.

ಶಂಕರ್​ ಅಶ್ವತ್ಥ್​ ಮಾತ್ರ ಸಂಪೂರ್ಣ ಭಿನ್ನವಾಗಿ ಮಾತನಾಡಿದರು. ಇಲ್ಲಿರುವ ಅಷ್ಟೂ ಅಭ್ಯರ್ಥಿಗಳು ಫೇಕ್​. ನೇರವಾಗಿ ಹೇಳಬೇಕು ಎಂದು ನೀವು ಕೇಳುತ್ತಿದ್ದೀರಿ. ಆದರೆ, ಯಾರು ಒಳ್ಳೆಯವರು ಯಾರು ಫೇಕ್​ ಎಂದು ಹೇಳೋಕೆ ಆಗಲ್ಲ. ಹೇಳಿದ್ರೆ ಪಕ್ಕದಲ್ಲಿದ್ದವರು ಯಾರು ಚುಚ್ಚುತ್ತಾರೋ ಎನ್ನುವ ಭಯ ಇರತ್ತದೆ. ಇಲ್ಲವೇ, ಕುತಂತ್ರದ ಬುದ್ಧಿ ತಲೆಯಲ್ಲಿ ಓಡುತ್ತಿರುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ಅಭಿಮಾನಿಗಳು ಕಮೆಂಟ್​ ಮಾಡಿದ್ದು, ಶಂಕರ್​ ಅಶ್ವಥ್ ಸರ್ ಸರಿಯಾಗಿ ಹೇಳಿದ್ದೀರಿ ಎಂದು ಮೆಚ್ಚುಗೆ ಹೊರ ಹಾಕಿದ್ದಾರೆ.

ಇದನ್ನೂ ಓದಿ: Bigg Boss Elimination: ಬಿಗ್​ ಬಾಸ್​ನಿಂದ ಹೊರಬಿದ್ದ ಗೀತಾ? ‘ಬ್ರಹ್ಮಗಂಟು’ ನಟಿಯ ಈ ಒಂದು ಗುಣ ಯಾರಿಗೂ ಇಷ್ಟ ಆಗಲಿಲ್ಲ!

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ