AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Elimination: ಬಿಗ್​ ಬಾಸ್​ನಿಂದ ಹೊರಬಿದ್ದ ಗೀತಾ? ‘ಬ್ರಹ್ಮಗಂಟು’ ನಟಿಯ ಈ ಒಂದು ಗುಣ ಯಾರಿಗೂ ಇಷ್ಟ ಆಗಲಿಲ್ಲ!

ಬಿಗ್​ ಬಾಸ್​ ಮನೆಯಲ್ಲಿ ಎರಡನೇ ವಾರದ ಎಲಿಮಿನೇಷನ್​ ಗಂಟೆ ಬಾರಿಸಿದೆ. ಗೀತಾ ಭಾರತಿ ಭಟ್​ ಎಲಿಮಿನೇಟ್​ ಆಗಿದ್ದಾರೆ ಎಂಬ ಮಾಹಿತಿ ಹೇಳಿಬಂದಿದೆ.

Bigg Boss Elimination: ಬಿಗ್​ ಬಾಸ್​ನಿಂದ ಹೊರಬಿದ್ದ ಗೀತಾ?  ‘ಬ್ರಹ್ಮಗಂಟು’ ನಟಿಯ ಈ ಒಂದು ಗುಣ ಯಾರಿಗೂ ಇಷ್ಟ ಆಗಲಿಲ್ಲ!
ಬಿಗ್​ ಬಾಸ್​ನಲ್ಲಿ ಗೀತಾ ಭಾರತಿ ಭಟ್​
ಮದನ್​ ಕುಮಾರ್​
| Edited By: |

Updated on:Mar 14, 2021 | 2:45 PM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಅಳಿವು ಉಳಿವಿಗಾಗಿ ಸ್ಪರ್ಧಿಗಳ ನಡುವೆ ಹಣಾಹಣಿ ಮುಂದುವರಿದಿದೆ. ನೋಡನೋಡುತ್ತಿದ್ದಂತೆಯೇ ಎರಡು ವಾರ ಕಳೆದು ಹೋಗಿದೆ. ಎರಡನೇ ವಾರದ ಎಲಿಮಿನೇಷನ್​ ಪ್ರಕ್ರಿಯೆಯಲ್ಲಿ ‘ಬ್ರಹ್ಮಗಂಟು’ ಧಾರಾವಾಹಿ ನಟಿ ಗೀತಾ ಭಾರತಿ ಭಟ್ ಅವರು ಮನೆಯಿಂದ ಹೊರ ಬಿದ್ದಿದ್ದಾರೆ ಎನ್ನಲಾಗಿದೆ.

ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ದಿವ್ಯಾ ಸುರೇಶ್​, ನಿರ್ಮಲಾ ಚೆನ್ನಪ್ಪ, ವಿಶ್ವನಾಥ್​, ಗೀತಾ ಭಾರತಿ ಭಟ್​, ಚಂದ್ರಕಲಾ ಮೋಹನ್​ ಮತ್ತು ಪ್ರಶಾಂತ್​ ಸಂಬರಗಿ ಈ ವಾರ ನಾಮಿನೇಟ್​ ಆಗಿದ್ದರು. ಆದರೆ ಶನಿವಾರದ (ಮಾ.13) ‘ವಾರದ ಕಥೆ ಕಿಚ್ಚನ ಕಥೆ’ ಎಪಿಸೋಡ್​ನಲ್ಲಿ ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಮತ್ತು ದಿವ್ಯಾ ಸುರೇಶ್​ ಸೇಫ್​ ಆಗಿದ್ದಾರೆ ಎಂಬುದನ್ನು ಸುದೀಪ್​ ಘೋಷಿಸಿದರು. ಇನ್ನುಳಿದ ಸ್ಪರ್ಧಿಗಳಿಗೆ ಎಲಿಮಿನೇಷನ್​ ಭಯ ಮುಂದುವರಿದಿತ್ತು.

ಭಾನುವಾರದ ಎಲಿಮಿನೇಷನ್​ನಲ್ಲಿ ಗೀತಾ ಭಾರತಿ ಭಟ್​ ಅವರಿಗೆ ಅದೃಷ್ಟ ಕೈ ಕೊಟ್ಟಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಅಷ್ಟಕ್ಕೂ ಗೀತಾ ಅವರಿಗೆ ಈ ಪರಿಸ್ಥಿತಿ ಯಾಕೆ ಬಂತು? ಜನರಿಂದ ಹೆಚ್ಚು ವೋಟ್​ ಗಳಿಸುವಲ್ಲಿ ಗೀತಾ ವಿಫಲರಾಗಿರಬಹುದು. ಅದಕ್ಕಿಂತಲೂ ಮುಖ್ಯವಾಗಿ ಬಿಗ್​ ಬಾಸ್​ ಮನೆಯಲ್ಲಿ ಅವರ ವರ್ತನೆ ಹೆಚ್ಚು ಜನರಿಗೆ ಇಷ್ಟ ಆಗಿಲ್ಲ. ಅದನ್ನು ಕೆಲವರು ಬಾಯಿ ಬಿಟ್ಟು ಹೇಳಿದ್ದಾರೆ ಕೂಡ. ಗೀತಾ ಮೊಸಳೆ ಕಣ್ಣೀರು ಹಾಕುತ್ತಾರೆ ಎಂಬುದು ಅನೇಕರ ಆರೋಪ.

ಚಿಕ್ಕ ಚಿಕ್ಕ ವಿಚಾರಗಳಿಗೂ ಗೀತಾ ಎಮೋಷನಲ್ ಆಗುತ್ತಾರೆ. ಕ್ಷಣಾರ್ಧದಲ್ಲೇ ಕಣ್ಣೀರು ಸುರಿಸುತ್ತಾರೆ. ಒಂದು ರೀತಿಯಲ್ಲಿ ಭಾವನಾತ್ಮಕವಾಗಿ ಎಲ್ಲರನ್ನೂ ಮೋಸಗೊಳಿಸಲು ಅವರು ಪ್ರಯತ್ನಿಸುತ್ತಾರೆ ಎನ್ನಲಾಗುತ್ತಿತ್ತು. ಮನೆಯೊಳಗಿನ ಯಾರಿಗೂ ಅವರ ಈ ಬುದ್ಧಿ ಹಿಡಿಸಲಿಲ್ಲ. ಅಲ್ಲದೆ, ಟಾಸ್ಕ್​ ವಿಚಾರದಲ್ಲಿಯೂ ಅವರು ಹಿಂದೆ ಬೀಳುತ್ತಿದ್ದರು. ಜನರನ್ನು ಎಂಟರ್​ಟೇನ್​ ಮಾಡುವುದರಲ್ಲಿ ಗೀತಾ ಹಿನ್ನಡೆ ಸಾಧಿಸಿದರು. ಹಾಗಾಗಿ ಎರಡನೇ ವಾರ ಮನೆಯಿಂದ ಹೊರಬರುವ ಸ್ಪರ್ಧಿ ಅವರೇ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ,  ಗೀತಾ ಸೇಫ್​ ಆಗಿದ್ದಾರೆ. ಮನೆಯಲ್ಲಿ ಚಿತ್ರವಿಚಿತ್ರವಾಗಿ ಆಡುತ್ತಿದ್ದ ನಿರ್ಮಲಾ ಹೊರ ಬಿದ್ದಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ. ಇದಕ್ಕೆ ಬಿಗ್​ ಬಾಸ್​ ಕಡೆಯಿಂದ ಇಂದು ರಾತ್ರಿ ಉತ್ತರ ಸಿಗಲಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಹೆಣ್ಮಕ್ಳನ್ನು ಟೈಟ್​ ಆಗಿ ತಬ್ಬಿಕೊಳ್ಳುವ ಪ್ರಶಾಂತ್​ ಸಂಬರಗಿಗೆ ಸುದೀಪ್​ ಖಡಕ್​ ವಾರ್ನಿಂಗ್​

BBK8: ಬಿಗ್​ ಬಾಸ್​ 8 ವಿನ್ನರ್​ ರಾಜೀವ್​, ರನ್ನರ್​ ಅಪ್​ ಮಂಜು; ಹೀಗೆ ಭವಿಷ್ಯ ನುಡಿದವರಾರು?

Published On - 12:14 pm, Sun, 14 March 21