AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಲ್ಲಿ ಹೆಣ್ಮಕ್ಳನ್ನು ಟೈಟ್​ ಆಗಿ ತಬ್ಬಿಕೊಳ್ಳುವ ಪ್ರಶಾಂತ್​ ಸಂಬರಗಿಗೆ ಸುದೀಪ್​ ಖಡಕ್​ ವಾರ್ನಿಂಗ್​

ವೈರಸ್​ ಟಾಸ್ಕ್​ ನಡೆಯುವಾಗ ರಾತ್ರಿ ಕೆಲವರನ್ನು ಪ್ರಶಾಂತ್​ ಗಟ್ಟಿಯಾಗಿ ಹಗ್​ ಮಾಡಿಕೊಂಡಿದ್ದರು. ಈ ಫೋಟೋಗಳು ಸಾಕಷ್ಟು ವೈರಲ್​ ಆಗಿತ್ತು.

ಬಿಗ್​ ಬಾಸ್​ ಮನೆಯಲ್ಲಿ ಹೆಣ್ಮಕ್ಳನ್ನು ಟೈಟ್​ ಆಗಿ ತಬ್ಬಿಕೊಳ್ಳುವ ಪ್ರಶಾಂತ್​ ಸಂಬರಗಿಗೆ ಸುದೀಪ್​ ಖಡಕ್​ ವಾರ್ನಿಂಗ್​
ಪ್ರಶಾಂತ್​ ಸಂಬರಗಿ-ಸುದೀಪ್​
ರಾಜೇಶ್ ದುಗ್ಗುಮನೆ
| Edited By: ಆಯೇಷಾ ಬಾನು|

Updated on:Mar 14, 2021 | 9:27 AM

Share

ಬಿಗ್​ ಬಾಸ್​ ಮನೆ ಸೇರಿರುವ ಪ್ರಶಾಂತ್​ ಸಂಬರಗಿ ತುಂಬಾನೇ ಚರ್ಚೆಗೆ ಕಾರಣರಾಗಿದ್ದರು. ಇದಕ್ಕೆ ಕಾರಣ ಅವರು ಎಲ್ಲಾ ಸ್ಪರ್ಧಿಗಳ ಬಗ್ಗೆ ರೇಗೋದು. ಮತ್ತೊಂದು ಎಂದರೆ, ಪ್ರಶಾಂತ್​ ಸಂಬರಗಿ ಹೆಣ್ಣುಮಕ್ಕಳನ್ನು ಟೈಟ್​ ಆಗಿ ಹಗ್​ ಮಾಡಿಕೊಳ್ಳುವುದು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಟ್ರೋಲ್​ ಕೂಡ ಹರಿದಾಡಿತ್ತು. ಈಗ ಈ ವಿಚಾರದಲ್ಲಿ ಪ್ರಶಾಂತ್​ಗೆ ಸುದೀಪ್​ ಖಡಕ್​ ಆಗಿ ವಾರ್ನಿಂಗ್​ ನೀಡಿದ್ದಾರೆ. ವೈರಸ್​ ಟಾಸ್ಕ್​ ನಡೆಯುವಾಗ ರಾತ್ರಿ ಕೆಲವರನ್ನು ಪ್ರಶಾಂತ್​ ಗಟ್ಟಿಯಾಗಿ ಹಗ್​ ಮಾಡಿಕೊಂಡಿದ್ದರು. ಈ ಫೋಟೋಗಳು ಸಾಕಷ್ಟು ವೈರಲ್​ ಆಗಿತ್ತು. ಇದನ್ನು ನೋಡಿದ ಅನೇಕರು ಪ್ರಶಾಂತ್​ ಸಂಬರಗಿ ಹೀಗೆಕೆ ಮಾಡ್ತಾರಪ್ಪ ಎಂದುಕೊಂಡಿದ್ದರು! ಈಗ ಈ ವಿಚಾರದಲ್ಲಿ ಸುದೀಪ್​ ಅವರೇ ಮಧ್ಯಪ್ರವೇಶಿಸಿದ್ದಾರೆ.

ವೀಕೆಂಡ್​ನಲ್ಲಿ ಸ್ಪರ್ಧಿಗಳ ಜತೆ ಕಿಚ್ಚ ಮಾತನಾಡಿದ್ದಾರೆ. ಆಗ ಸುದೀಪ್​ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಪ್ರಶಾಂತ್​ ಅವರೇ ನೀವು ಎಲ್ಲರನ್ನೂ ತಬ್ಬಿಕೊಳ್ಳುತ್ತೀರಿ. ಕೆಲವರನ್ನು ತುಂಬಾನೇ ಟೈಟ್​ ಆಗಿ ತಬ್ಬಿಕೊಳ್ಳುತ್ತೀರಿ. ನೀವು ತಬ್ಬಿಕೊಳ್ಳುತ್ತೀರಲ್ಲ ಅದು ಸಮಸ್ಯೆ ಅಲ್ಲ. ಆದರೆ ತಬ್ಬಿಕೊಂಡಾಗ ಮಾತನಾಡುತ್ತೀರಲ್ಲ ಅದು ಸಮಸ್ಯೆ. ನೀವು ತಬ್ಬಿಕೊಂಡಾಗ ಮೈಕ್​ ಒತ್ತಿಕೊಂಡಿರುತ್ತದೆ. ಹಾಗಾಗಿ ನೀವು ಮಾತನಾಡಿದ್ದು ಬೇರೆಯದೇ ರೀತಿ ಕೇಳುತ್ತದೆ ಎಂದಿದ್ದಾರೆ ಸುದೀಪ್​.

ನೀವು ಒಬ್ಬೊಬ್ಬರನ್ನು ತುಂಬಾ ದೀರ್ಘಕಾಲ ತಬ್ಬಿಕೊಳ್ಳುತ್ತೀರಿ. ಅದು ತಪ್ಪು ಎಂದು ನಾನು ಹೇಳುತ್ತಿಲ್ಲ. ತಬ್ಬಿಸಿಕೊಳ್ಳುವವರಿಗೆ ಅಭ್ಯಂತರವಿಲ್ಲ ಎಂದರೆ ನಮ್ಮದೇನು ಅಭ್ಯಂತರ? 2 ಸೆಕೆಂಡ್​ಗಿಂತ ಹೆಚ್ಚು ಕಾಲ ತಬ್ಬಿಕೊಳ್ಳಬಾರದು ಎಂದು ಬಿಗ್​ ಬಾಸ್​ ನಿಯಮ ಹಾಕಿಲ್ಲ. ಆದರೆ, ಬಿಗ್​ ಬಾಸ್​ ಈ ರೀತಿ ನಿಯಮ ತರೋ ತರ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ ಸುದೀಪ್​.

ಇದನ್ನೂ ಓದಿ: Bigg Boss Kannada Elimination: ಈ ವಾರ ಬಿಗ್​ ಬಾಸ್​​ ಮನೆಯಿಂದ ಹೊರಹೋಗುತ್ತಿರುವ ಸ್ಪರ್ಧಿ ಯಾರು?

Published On - 7:44 am, Sun, 14 March 21

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More