AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada Elimination: ಈ ವಾರ ಬಿಗ್​ ಬಾಸ್​​ ಮನೆಯಿಂದ ಹೊರಹೋಗುತ್ತಿರುವ ಸ್ಪರ್ಧಿ ಯಾರು?

ಕಳೆದ ಬಾರಿ ನೇರವಾಗಿ ನಾಮಿನೇಟ್​ ಆಗಿದ್ದ ನಿರ್ಮಲಾ ಈ ಬಾರಿಯೂ ಅತಿ ಹೆಚ್ಚು ಮತ ಪಡೆದು ನಾಮಿನೇಟ್​ ಸಾಲಿನಲ್ಲಿದ್ದಾರೆ. ಭಿನ್ನಾಭಿಪ್ರಾಯ, ಎಲ್ಲರ ಜತೆ ಹೊಂದುಕೊಳ್ಳುತ್ತಿಲ್ಲ, ಅವರು ತೆಗೆದುಕೊಳ್ಳುವ ನಿರ್ಧಾರ ಸರಿ ಇರುವುದಿಲ್ಲ ಎಂದು ಮನೆಯ ಸದಸ್ಯರು ಕಾರಣ ನೀಡಿದ್ದರು.

Bigg Boss Kannada Elimination: ಈ ವಾರ ಬಿಗ್​ ಬಾಸ್​​ ಮನೆಯಿಂದ ಹೊರಹೋಗುತ್ತಿರುವ ಸ್ಪರ್ಧಿ ಯಾರು?
ಸುದೀಪ್​
ರಾಜೇಶ್ ದುಗ್ಗುಮನೆ
|

Updated on: Mar 13, 2021 | 7:55 PM

Share

ಕನ್ನಡ ಬಿಗ್​ ಬಾಸ್​ ಎಂಟನೇ ಸೀಸನ್​ನ ಮೊದಲೇ ವಾರದಲ್ಲಿ ಧನುಶ್ರೀ ನಾಮಿನೇಟ್​ ಆಗಿ ಮನೆಯಿಂದ ಹೊರಹೋಗಿದ್ದರು. ಈಗ ಎರಡನೇ ವಾರದ ಎಲಿಮಿನೇಷನ್​ಗೆ ಕ್ಷಣಗಣನೆ ಆರಂಭವಾಗಿದೆ. ಎರಡನೇ ವಾರದಲ್ಲಿ ಎಲಿಮಿನೇಷನ್​ಗೆ ಎಂಟು ಜನರು ನಾಮಿನೇಟ್​ ಆಗಿದ್ದಾರೆ. ಇವರಲ್ಲಿ ಯಾರು ಮನೆಯಿಂದ ಹೊರಹೋಗುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಕಳೆದ ಬಾರಿ ನೇರವಾಗಿ ನಾಮಿನೇಟ್​ ಆಗಿದ್ದ ನಿರ್ಮಲಾ ಈ ಬಾರಿಯೂ ಅತಿ ಹೆಚ್ಚು ಮತ ಪಡೆದು ನಾಮಿನೇಟ್​ ಸಾಲಿನಲ್ಲಿದ್ದಾರೆ. ಭಿನ್ನಾಭಿಪ್ರಾಯ, ಎಲ್ಲರ ಜತೆ ಹೊಂದುಕೊಳ್ಳುತ್ತಿಲ್ಲ, ಅವರು ತೆಗೆದುಕೊಳ್ಳುವ ನಿರ್ಧಾರ ಸರಿ ಇರುವುದಿಲ್ಲ, ಅವರಿಂದ ಮನೆಯ ವಾತಾವರಣ ಬದಲಾಗಿದೆ ಎಂದು ಮನೆಯ ಸದಸ್ಯರು ಕಾರಣ ನೀಡಿದ್ದರು. ಪ್ರಶಾಂತ್​ ಸಂಬರಗಿ ಕೂಡ ಈ ಬಾರಿ ನಾಮಿನೇಟ್​ ಆದರು. ಪ್ರಶಾಂತ್​ ಡಾಮಿನೇಟ್​ ಮಾಡುತ್ತಾರೆ. ಎಲ್ಲರನ್ನೂ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ಮಾತನಾಡುತ್ತಾರೆ ಎನ್ನುವ ಕಾರಣ ನೀಡಿ ಅವರನ್ನು ಮನೆಯ ಸದಸ್ಯರು ನಾಮಿನೇಟ್​ ಮಾಡಿದ್ದರು. ಎಲ್ಲರ ಜತೆ ಸರಿಯಾಗಿ ಬೆರೆಯುತ್ತಿಲ್ಲ, ಒಂಟಿಯಾಗಿ ಇರುತ್ತಾರೆ ಎನ್ನುವ ಕಾರಣ ನೀಡಿ ದಿವ್ಯಾ ಸುರೇಶ್​ ನಾಮಿನೇಟ್​ ಆಗಿದ್ದರು. ಇವರ ಜತೆಗೆ ಗೀತಾ, ನಿಧಿ ಸುಬ್ಬಯ್ಯ, ವಿಶ್ವನಾಥ್, ಶುಭಾ ಪೂಂಜಾ ​ ಮತ್ತು ಚಂದ್ರಕಲಾ ಅವರ ಮೇಲೂ ಈ ಬಾರಿಯ ನಾಮಿನೇಟ್​ ಕತ್ತಿ ತೂಗಾಡುತ್ತಿದೆ.

ನಾಮಿನೇಟ್​ ಸಾಲಿನಲ್ಲಿರುವವರ ಸಣ್ಣ ವಿಮರ್ಷೆ ಮಾಡಿದರೆ ಪ್ರಶಾಂತ್​ ಸಂಬರಗಿ, ದಿವ್ಯಾ ಸುರೇಶ್​, ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಮೆಲ್ನೋಟಕ್ಕೆ ಸೇಫ್​ ಆಗಿರುವ ಹಾಗೆ ಕಾಣುತ್ತಿದ್ದಾರೆ. ಏಕೆಂದರೆ, ಈ ನಾಲ್ಕೂ ಜನರು ಪ್ರೇಕ್ಷಕರಿಗೆ ಇಷ್ಟವಾಗಿದ್ದಾರೆ. ದಿವ್ಯಾ-ಶುಭಾ ಪ್ರೇಕ್ಷಕರನ್ನು ಹೆಚ್ಚು ಎಂಟರ್​ಟೇನ್​ ಮಾಡುತ್ತಿದ್ದಾರೆ. ಪ್ರಶಾಂತ್​ ಸ್ಪೋರ್ಟಿವ್​ ಆಗಿ ಆಡುತ್ತಿದ್ದಾರೆ. ಈ ಕಾರಣಕ್ಕೆ ಈ ನಾಲ್ವರು ಸೇಫ್​ ಆಗುವ ಸಾಧ್ಯತೆ ಹೆಚ್ಚು.

ನಿರ್ಮಲಾ, ಗೀತಾ ಬಗ್ಗೆ ದೂರುಗಳು ತುಂಬಾನೇ ಇದೆ. ಗೀತಾ ಮೊಸಳೆ ಕಣ್ಣೀರು ಸುರಿಸುತ್ತಾರೆ ಎನ್ನುವ ಮಾತಿದೆ. ನಿರ್ಮಲಾ ವಿರುದ್ಧ ಮನೆ ಸದಸ್ಯರೇ ತಿರುಗಿ ಬಿದ್ದಿದ್ದಾರೆ. ವಿಶ್ವ ತುಂಬಾನೇ ಸಣ್ಣವನಾಗಿದ್ದರಿಂದ ಈ ಮೂವರಿಗೆ ಕಷ್ಟವಿದೆ ಎನ್ನಲಾಗುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗಲಿದೆ.

ಇದನ್ನೂ ಓದಿ: BBK8: ಬಿಗ್​ ಬಾಸ್​ 8 ವಿನ್ನರ್​ ರಾಜೀವ್​, ರನ್ನರ್​ ಅಪ್​ ಮಂಜು; ಹೀಗೆ ಭವಿಷ್ಯ ನುಡಿದವರಾರು?

Follow Us
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ