AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಮುನಾ ಎಕ್ಸ್​​ಪ್ರೆಸ್​​ವೇನಲ್ಲಿ ವ್ಯಾನ್​ಗೆ ಗುದ್ದಿದ ಸ್ಲೀಪರ್ ಬಸ್, 6 ಮಂದಿ ಸಾವು

ಯಮುನಾ ಎಕ್ಸ್​​ಪ್ರೆಸ್​​ವೇನಲ್ಲಿ ವ್ಯಾನ್​ಗೆ ಗುದ್ದಿದ ಸ್ಲೀಪರ್ ಬಸ್, 6 ಮಂದಿ ಸಾವು

ನಯನಾ ರಾಜೀವ್
|

Updated on: Mar 03, 2026 | 11:07 AM

Share

ಉತ್ತರ ಪ್ರದೇಶದ ಯಮುನಾ ಎಕ್ಸ್​ಪ್ರೆಸ್​ ವೇಯಲ್ಲಿ ವ್ಯಾನ್​​ಗೆ ಸ್ಲೀಪರ್ ಬಸ್ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಮೃತಪಟ್ಟಿದ್ದಾರೆ. ಬೆಳಗಿನ ಜಾವ 4.20 ರ ಸುಮಾರಿಗೆ ಸದಾಬಾದ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. 13 ಪ್ರಯಾಣಿಕರನ್ನು ಹೊತ್ತ ವ್ಯಾನ್ ದೆಹಲಿಯ ಪ್ರೇಮ್ ನಗರದಿಂದ ರಾಜಸ್ಥಾನದ ಧೋಲ್ಪುರಕ್ಕೆ ತೆರಳುತ್ತಿದ್ದಾಗ ನೋಯ್ಡಾದಿಂದ ಗೋರಖ್ಪುರಕ್ಕೆ ಪ್ರಯಾಣಿಸುತ್ತಿದ್ದ ಸ್ಲೀಪರ್ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಆನಂದ್ ಕುಶ್ವಾಹ ತಿಳಿಸಿದ್ದಾರೆ.

ಲಕ್ನೋ, ಮಾರ್ಚ್​ 03: ಉತ್ತರ ಪ್ರದೇಶದ ಯಮುನಾ ಎಕ್ಸ್​ಪ್ರೆಸ್​ ವೇಯಲ್ಲಿ ವ್ಯಾನ್​​ಗೆ ಸ್ಲೀಪರ್ ಬಸ್ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಮೃತಪಟ್ಟಿದ್ದಾರೆ. ಬೆಳಗಿನ ಜಾವ 4.20 ರ ಸುಮಾರಿಗೆ ಸದಾಬಾದ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. 13 ಪ್ರಯಾಣಿಕರನ್ನು ಹೊತ್ತ ವ್ಯಾನ್ ದೆಹಲಿಯ ಪ್ರೇಮ್ ನಗರದಿಂದ ರಾಜಸ್ಥಾನದ ಧೋಲ್ಪುರಕ್ಕೆ ತೆರಳುತ್ತಿದ್ದಾಗ ನೋಯ್ಡಾದಿಂದ ಗೋರಖ್ಪುರಕ್ಕೆ ಪ್ರಯಾಣಿಸುತ್ತಿದ್ದ ಸ್ಲೀಪರ್ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಆನಂದ್ ಕುಶ್ವಾಹ ತಿಳಿಸಿದ್ದಾರೆ.

ವ್ಯಾನ್‌ನಲ್ಲಿದ್ದವರೆಲ್ಲರೂ ದೆಹಲಿಯ ಪ್ರೇಮ್ ನಗರದ ನಿವಾಸಿಗಳಾಗಿದ್ದು, ಧೋಲ್‌ಪುರಕ್ಕೆ ಪ್ರಯಾಣಿಸುತ್ತಿದ್ದ ಬೇರೆ ಬೇರೆ ಕುಟುಂಬಗಳಿಗೆ ಸೇರಿದವರಾಗಿದ್ದರು. ಈ ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ. ವ್ಯಾನ್ ಚಾಲಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us