BBK8: ಬಿಗ್​ ಬಾಸ್​ 8 ವಿನ್ನರ್​ ರಾಜೀವ್​, ರನ್ನರ್​ ಅಪ್​ ಮಂಜು; ಹೀಗೆ ಭವಿಷ್ಯ ನುಡಿದವರಾರು?

ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ದೃಢತೆಯಿಂದ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಈಗ ಅವರು ಬಿಗ್​ ಬಾಸ್​ ಮನೆಯ ಕ್ಯಾಪ್ಟನ್​ ಕೂಡ ಹೌದು.

BBK8: ಬಿಗ್​ ಬಾಸ್​ 8 ವಿನ್ನರ್​ ರಾಜೀವ್​, ರನ್ನರ್​ ಅಪ್​ ಮಂಜು; ಹೀಗೆ ಭವಿಷ್ಯ ನುಡಿದವರಾರು?
Follow us
ರಾಜೇಶ್ ದುಗ್ಗುಮನೆ
|

Updated on: Mar 13, 2021 | 6:03 PM

ಬಿಗ್​ ಬಾಸ್​ 8ರ ಮನೆಯಿಂದ ಧನುಶ್ರೀ ಹೊರ ಹೋಗಿದ್ದಾರೆ. 16 ಸದಸ್ಯರು ಮನೆಯಲ್ಲಿದ್ದಾರೆ. ಈ ವಾರ ಮತ್ತೋರ್ವ ಸದಸ್ಯ ಬಿಗ್​ ಬಾಸ್​ ಮನೆಯಿಂದ ಹೊರ ಬೀಳಲಿದ್ದಾರೆ. ಬಿಗ್​ ಬಾಸ್ ಪೂರ್ಣಗೊಳ್ಳೋಕೆ ಇನ್ನೂ ಮೂರು ತಿಂಗಳು ಬಾಕಿ ಇರುವಾಗಲೇ ವಿನ್ನರ್​ಗಳ ಬಗ್ಗೆ ಚರ್ಚೆ ಆಗುತ್ತಿದೆ. ಬಿಗ್​ ಬಾಸ್ ಕನ್ನಡ​ 8 ವಿನ್ನರ್​ ರಾಜೀವ್​, ರನ್ನರ್​ ಅಪ್​ ಮಂಜು ಅಂತೆ! ಹೀಗೊಂದು ಚರ್ಚೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮೂಲಕವೇ ಹೆಚ್ಚು ಗುರುತಿಸಿಕೊಂಡಿರುವ ರಾಜೀವ್. CCLನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಂಡದಲ್ಲಿ ಕಾಣಿಸಿಕೊಂಡವರು. ರಾಜೀವ್ ಕ್ರಿಕೆಟ್ ಆಟಗಾರ ಎಂಬ ಕಾರಣದಿಂದ ಅವರ ಸ್ಪರ್ಧಾತ್ಮಕ ವ್ಯಕ್ತಿತ್ವ ಬಿಗ್​ ಬಾಸ್​ ಮನೆಯಲ್ಲಿ ಅನಾವರಣಗೊಂಡಿದೆ. ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ದೃಢತೆಯಿಂದ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಈಗ ಅವರು ಬಿಗ್​ ಬಾಸ್​ ಮನೆಯ ಕ್ಯಾಪ್ಟನ್​ ಕೂಡ ಹೌದು. ಯಂಗ್ ಆ್ಯಂಡ್​ ಎನರ್ಜಿಟಿಕ್ ಕಂಟೆಸ್ಟೆಂಟ್ ಆಗಿರುವ ರಾಜೀವ್, ಬಿಗ್ ಬಾಸ್ ಪಟ್ಟ ಗೆಲ್ಲುತ್ತಾರಂತೆ!

ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್​ ಆಗಿರುವ ರಾಜೀವ್​ ಬಗ್ಗೆ ಕಲರ್ಸ್​ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿತ್ತು. ಈ ಪೋಸ್ಟ್​ನಲ್ಲಿ, ಕ್ಯಾಪ್ಟನ್ ರಾಜೀವ್‍ಗೆ ಸಲಹೆ ಕೊಡೋದಾದ್ರೆ ಏನು ಕೊಡ್ತೀರಾ ಎಂದು ಕೇಳಲಾಗಿತ್ತು. ಇದಕ್ಕೆ ವೀಕ್ಷಕರು ಉತ್ತರ ನೀಡಿದ್ದಾರೆ. ಕೆಲವರು ರಾಜೀವ್​ಗೆ ಯಾವುದೇ ಸಲಹೆ ಸೂಚನೆ ಬೇಡ, ಅವರು ತುಂಬಾನೇ ಉತ್ತಮವಾಗಿದ್ದಾರೆ ಎಂದು ಹೇಳಿದ್ದರು. ಇನ್ನೂ ಕೆಲವರು, ಸಲಹೆ ಏನೂ ಇಲ್ಲ. ಅಚರು ಚೆನ್ನಾಗಿಯೇ ಆಟ ನಿಭಾಯಿಸುತ್ತಾರೆ ಎಂದು ಗೊತ್ತು ಎಂದಿದ್ದಾರೆ. ಕೆಲವರು, ಬಿಗ್​ ಬಾಸ್ ಸೀಸನ್ ಎಂಟರ ವಿನ್ನರ್ ರಾಜೀವ್ ಹಾಗೂ ರನ್ನರ್ ಅಪ್ ಮಂಜು ಪಾವಗಡ ಎಂದು ಬರೆದುಕೊಂಡಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ಬಂದ ಕಮೆಂಟ್​..

ಇದನ್ನೂ ಓದಿ: Divya Suresh: ಬಿಗ್​ ಬಾಸ್​ ಮನೆ ಸೇರಿರುವ ದಿವ್ಯಾ ಸುರೇಶ್​ ಹಳೆಯ ಮಾದಕ​ ವಿಡಿಯೋ ವೈರಲ್​!