Simple Tips: ಆಫೀಸಿನಲ್ಲಿ ಖುಷ್ ಖುಷಿಯಾಗಿ ಕೆಲಸ ಮಾಡೋದು ಹೇಗೆ?

Simple Tips: ಆಫೀಸಿನಲ್ಲಿ ಖುಷ್ ಖುಷಿಯಾಗಿ ಕೆಲಸ ಮಾಡೋದು ಹೇಗೆ?
ಆಫೀಸು ಎಂಬ ಕೆಲಸದ ತಾಣ ಮನಸಿಗೆ ಸಂತಸ ನೀಡಲಿ

Simple tips to stay happy: ಒಂದು ವೇಳೆ ಆಫೀಸಿನಲ್ಲಿ ಯಾವುದೋ ಒಂದು ಕೆಲಸ ಮಾಡಲು ಸಾಧ್ಯವಾಗಲಿಲ್ಲವೇ ನಿಮ್ಮ ನಿಮ್ಮ ಸಹೋದ್ಯೋಗಿಗಳಿಗೆ ತಿಳಿಸಿ, ಅವರು ನಿಮಗೆ ನೆರವಾಗಬಹುದು. ಹಾಗಂತ ನಿಮ್ಮ ಎಲ್ಲಾ ಕೆಲಸವನ್ನು ಅವರ ಹೆಗಲ ಮೇಲೆ ಹೋರಿಸಬೇಡಿ. ಪಾಪ..ಅವರೂ ನಿಮ್ಮಂತೆಯೇ ಹುಲು ಮಾನವರು!

guruganesh bhat

| Edited By: Ayesha Banu

Mar 14, 2021 | 6:57 AM

ಆಫೀಸು ಅಂದ್ರೆ ಸಾಕು, ಮುಖ ಸಿಂಡರಿಸುವವರ ಸಂಖ್ಯೆಯೇ ಜಾಸ್ತಿ. ಆಫೀಸಿನಲ್ಲಿ ಖುಷಿ ಖುಷಿಯಾಗಿ ಕೆಲಸ ಮಾಡುತ್ತಾ ಇರುವವರು ನೂರಕ್ಕೆ ಹತ್ತೋ ಹನ್ನೆರಡೋ ಅಷ್ಟೇ. ಆಫೀಸು ಕೆಲಸ ಜತೆಜತೆಗೆ ವೈಯಕ್ತಿಕ ಜಿವನವನ್ನೂ ಚೆಂದಾಗಿ ಇಟ್ಟುಕೊಳ್ಳುವುದು ಹೇಗೆ ಎಂದು ಒಂದು ವೆಬಿನಾರ್ ಇಟ್ಟರೆ ಖಂಡಿತ ಜನರು ಕ್ಯೂ ನಿಲ್ತಾರೆ. ಎರಡನ್ನೂ ಒಟ್ಟೊಟ್ಟಿಗೆ ನಿಭಾಯಿಸಲಾಗದೇ ಯಾಕಪ್ಪಾ ಬಳಲುತ್ತೀರಾ? ಎರಡನ್ನು ಪ್ರೀತಿಸಿ ಸಂತೋಷದಿಂದ ಅನುಭವಿಸುತ್ತಾ ಜೀವಿಸಿ.

ಹಾಗಾದರೆ ಆಫೀಸಿನಲ್ಲಿ ಖುಷಿಯಿಂದ ಇರೋದು ಹೇಗೆ, ಸಂತಸದಿಂದ ಕೆಲಸ ಮಾಡುವುದು ಹೇಗೆ ಎಂದಿರಾ? ನಿಮ್ಮ ಅಕ್ಕಪಕ್ಕದಲ್ಲಿ ಕುಳಿತು ಕೆಲಸ ಮಾಡುವವರು ನಿಮ್ಮಂತೆಯೇ ಕೆಲಸಗಾರರು ಎಂಬುದನ್ನು ಅರಿತುಕೊಳ್ಳಿ. ಆಫೀಸಿನ ಬಾಸ್ ಸಹ ನಿಮ್ಮಂತೆಯೇ ಓರ್ವ ಉದ್ಯೋಗಿ,. ಅವರಿಗೂ ನಿಮ್ಮಂತೆಯೇ ಹೆಂಡತಿ, ಮಕ್ಕಳು, ಕುಟುಂಬ ಸಂಸಾರದ ರಗಳೆಗಳು ಇದ್ದೇ ಇವೆ. ನಿಮ್ಮಂತೆಯೇ ಅವರೂ ಹುಲುಮಾನವರೇ. ಅವರಿಗೂ ಸುಖ ದುಃಖಗಳಿರುತ್ತವೆ. ಅವರೂ ನಿಮ್ಮಂತೆಯೇ ಟಿಫಿನ್ ಬಾಕ್ಸ್ ತರುತ್ತಾರೆ. ಅವರು ನಿಮಗೆ ಬೈದಂತೆ ಅವರಿಗೂ ಬೈಯುವವರು ಇರುತ್ತಾರೆ.ಇದನ್ನೇ ನೀವು ನೆನಪಿಡಬೇಕಾದದ್ದು.

ಬಾಸ್ ಬೈದ ಮಾತ್ರಕ್ಕೆ ಅವರಿಗೆ ಸಿಟ್ಟಿದೆ ಎಂದಲ್ಲ  ಒಂದು ದಿನ ಆಫೀಸಿನಲ್ಲಿ ಬಾಸ್ ನಿಮ್ಮನ್ನು ಬೈಯುತ್ತಾರೆ. ಹಾಗೆಂದ ಮಾತ್ರಕ್ಕೆ ಬಾಸ್​ಗೆ ನಿಮ್ಮ ಮೇಲೆ ಸಿಟ್ಟಿದೆ ಎಂದರ್ಥವಲ್ಲ. ಅದು ಆ ಕ್ಷಣ, ಆ ಕ್ಷಣಕ್ಕೆ ಮುಗಿದುಹೋಗುವಂತಹ ಭಾವನೆ. ನಿಮಗೂ ಅಷ್ಟೇ ಬಾಸ್​ ಮೇಲೋ, ಸಹೋದ್ಯೋಗಿಗಳ ಮೇಲೋ ಒಮ್ಮೆ ಸಿಟ್ಟು ಬರುತ್ತದೆ. ಆ ಸಿಟ್ಟನ್ನೇ ಗಟ್ಟಿಯಾಗಿ ಹಿಡಿದುಕೊಂಡು ಕುಳಿತರೆ ಏನು ಉಪಯೋಗ ನೀವೇ ಹೇಳಿ? ನೀವು ಸಿಟ್ಟು ಜಗಳಗಳನ್ನೇ ಇಟ್ಟುಕೊಂಡರೆ ಪ್ರತಿದಿನ ಬೆಳಗೆದ್ದು ಹೋಗುವ ಆಫೀಸು ಬೇಸರ ತರಿಸುತ್ತದೆ. ನಂತರ ನಿಮ್ಮ ಜೀವನವೇ ಕಿರಿಕಿರಿ ಅನಿಸಲಿಕ್ಕೆ ಶುರುವಾಗುತ್ತದೆ. ಇದೆಲ್ಲ ನಮಗೆ ಬೇಕಾ? ಇಂತಹ ರಗಳೆಗಳ ಅಗತ್ಯವಾದರೂ ಏನು?

ಮನೆ ಮನೆಯೇ, ಆಫೀಸ್ ಆಫೀಸೇ. ಅಲ್ಲಿಯ ಕೆಲಸ ಇಲ್ಲಿ, ಇಲ್ಲಿಯ ಕೆಲಸ ಇಲ್ಲಿ ಎಂಬ ಪರಿಪಾಠ ಇಟ್ಟುಕೊಳ್ಳಬೇಡಿ. ಚೆನ್ನಾಗಿ ಪೌಷ್ಠಿಕ ಆಹಾರ ಸೇವಿಸಿ. ಅದು ನಿಮ್ಮ ಮನಸ್ಸನ್ನು ಕ್ರಿಯಾಶೀಲವಾಗಿ ಇಡಬಲ್ಲದು.

ನಿಮ್ಮ ಕುರಿತು ನಿಮಗೆ ಹೆಮ್ಮೆ ಇರಲಿ ನಿಮ್ಮನ್ನು ನೀವು ಪ್ರಶಂಸೆ ಮಾಡಿಕೊಳ್ಳಿ. ನಿಮ್ಮ ಪ್ರಾಮಾಣಿಕ ಕೆಲಸದ ಬಗ್ಗೆ ನಿಮಗೆ ಹೆಮ್ಮೆ ಇರಲಿ. ಖುಷಿ ಇರಲಿ. ಇದೆಲ್ಲದಕ್ಕಿಂತ ಇನ್ನು ಕೆಲವರಿರುತ್ತಾರೆ. ಅವರಾಯಿತು ಅವರ ಕೆಲಸವಾಯಿತು. ಅವರು ಅಫೀಸಿಗೆ ಬಂದರೋ ಬಿಟ್ಟರೊ ಎಂಬುದೂ ತಿಳಿಯುವುದಿಲ್ಲ. ಆದರೆ ಕೆಲಸವನ್ನು ಚಾಚೂತಪ್ಪದೇ ಕಟ್ಟುನಿಟ್ಟಾಗಿ ಎಳ್ಳಷ್ಟೂ ಭಂಗ ಬರದೇ ಮಾಡುತ್ತಾರೆ. ಇವರಿಂದ ಯಾರಿಗೂ ಹಾನಿಯಲ್ಲ. ಆಫೀಸಿನಲ್ಲಿ ಅಂತಹವರ ಗೆಳೆತನ ಮಾಡಿಕೊಂಡರೆ ನಿಮ್ಮ ಮನಸ್ಸಿನ ಕಷ್ಟಗಳೂ ಹಗುರಾಗುತ್ತವೆ.

ಹಾಯ್ ಎಂಬ ಮ್ಯಾಜಿಕ್! ಪಕ್ಕದ ಚೇರಿನಲ್ಲಿ ಕುಳಿತುಕೊಳ್ಳುವವರಲ್ಲಿ ಪ್ರೀತಿಯಿಡಿ. ದಿನ ಬೆಳಗ್ಗೆ ಸಹೋದ್ಯೋಗಿಗಳನ್ನು ಮಾತಾಡಿಸಿ ಒಂದು ಹಾಯ್ ಮಾಡಿ ಬನ್ನಿ. ಒಂದು ಹಾಯ್ ಸಂಜೆ ಬಾಯ್ ಎನ್ನುವವರೆಗೂ ನಿಮ್ಮಲ್ಲಿ ಮುಗುಳುನಗೆ ಮೂಡಿಸಲು ಸಹಾಯ ಮಾಡುತ್ತದೆ. ಹಾಯ್ ಎಂಬ ಮ್ಯಾಜಿಕ್ ಆಫೀಸಿನ ಕೆಲಸದಲ್ಲಿ ನಿಮಗೆ ಗೆಲುವು ತಂದುಕೊಡಬಲ್ಲದು.

ಊಟ ಹಂಚಿಕೊಳ್ಳಿ ತಂದ ಊಟವನ್ನು ಹಂಚಿಕೊಳ್ಳಿ, ಒಂದು ದಿನ ನಿಮ್ಮ ಬಳಿ ಬಾಕ್ಸ್ ತರಲು ಆಗಲಿಲ್ಲ ಎಂದರೂ ನಿಮ್ಮ ಸಹೋದ್ಯೋಗಿಗಳಿಂದ ನಿಮ್ಮ ಹಸಿವು ತಣಿಯುತ್ತದೆ. ಬ್ಯಾಚುಲರ್​ಗಳಿಗಂತೂ ಇದು ತುಂಬಾ ಉಪಯೋಗಕಾರಿ. ನಿಮ್ಮ ಆಫೀಸಿನ ಕಲೀಗ್​ಗಳೇ ನಿಮ್ಮ ಮಧ್ಯಾಹ್ನದ ಊಟ ನಿಭಾಯಿಸುತ್ತಾರೆ. ಎಷ್ಟು ಒಳ್ಳೆಯದು ಅಲ್ಲವೇ!

ಇದ್ದ ಕೆಲಸವನ್ನು ಮಾಡಿ ಮುಗಿಸಿ, ಒಂದು ವೇಳೆ ಯಾವುದೋ ಒಂದು ಕೆಲಸ ಮಾಡಲು ಸಾಧ್ಯವಾಗಲಿಲ್ಲವೇ ನಿಮ್ಮ ನಿಮ್ಮ ಸಹೋದ್ಯೋಗಿಗಳಿಗೆ ತಿಳಿಸಿ, ಅವರು ನಿಮಗೆ ನೆರವಾಗಬಹುದು. ಹಾಗಂತ ನಿಮ್ಮ ಎಲ್ಲಾ ಕೆಲಸವನ್ನು ಅವರ ಹೆಗಲ ಮೇಲೆ ಹೋರಿಸಬೇಡಿ. ಪಾಪ..ಅವರೂ ನಿಮ್ಮಂತೆಯೇ ಹುಲು ಮಾನವರು!

ಇದನ್ನೂ ಓದಿ: Health: ಲಿಂಬು ನೀರು ಕುಡಿಯುವುದರಿಂದ ಎಷ್ಟೆಲ್ಲ ಉಪಯೋಗಗಳಿವೆ ನೋಡಿ..

ಮಹಿಳೆಯರೇ.., ಈ ಸಮಸ್ಯೆಗಳು ನಿಮ್ಮನ್ನು ಹೈರಾಣಾಗಿಸಿಬಿಡಬಹದು; ಆರೋಗ್ಯದತ್ತ ಗಮನ ಇರಲಿ

Follow us on

Related Stories

Most Read Stories

Click on your DTH Provider to Add TV9 Kannada