AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳಿನ ಯುವ ಹೀರೋಗೆ ಜೋಡಿಯಾಗಲಿರುವ ರುಕ್ಮಿಣಿ ವಸಂತ್

Rukmini Vasanth: ‘ಸಪ್ತ ಸಾಗರದಾಚೆ ಎಲ್ಲೊ’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳು ರುಕ್ಮಿಣಿ ವಸಂತ್ ಅವರಿಗೆ ದೊಡ್ಡ ಮಟ್ಟಿಗಿನ ಗುರುತು, ಜನಪ್ರಿಯತೆ ತಂದುಕೊಟ್ಟಿರುವ ಜೊತೆಗೆ ಹಲವಾರು ಹೊಸ ಅವಕಾಶಗಳನ್ನು ಸಹ ತಂದುಕೊಟ್ಟಿದೆ. ಈಗಾಗಲೇ ಪರ ಭಾಷೆಯ ಕೆಲ ದೊಡ್ಡ ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದು, ಇದೀಗ ತಮಿಳಿನ ಸ್ಟಾರ್ ಯುವ ನಾಯಕನ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸಲು ಸಜ್ಜಾಗಿದ್ದಾರೆ.

ತಮಿಳಿನ ಯುವ ಹೀರೋಗೆ ಜೋಡಿಯಾಗಲಿರುವ ರುಕ್ಮಿಣಿ ವಸಂತ್
Rukmini Vasanth
ಮಂಜುನಾಥ ಸಿ.
|

Updated on: Mar 03, 2026 | 3:34 PM

Share

ರುಕ್ಮಿಣಿ ವಸಂತ್ (Rukmini Vasanth), ತಮ್ಮ ಪ್ರತಿಭೆ ಮತ್ತು ಸೌಂದರ್ಯದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗುವತ್ತ ಹೆಜ್ಜೆ ಇರಿಸಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೊ’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳು ರುಕ್ಮಿಣಿ ವಸಂತ್ ಅವರಿಗೆ ದೊಡ್ಡ ಮಟ್ಟಿಗಿನ ಗುರುತು, ಜನಪ್ರಿಯತೆ ತಂದುಕೊಟ್ಟಿರುವ ಜೊತೆಗೆ ಹಲವಾರು ಹೊಸ ಅವಕಾಶಗಳನ್ನು ಸಹ ತಂದುಕೊಟ್ಟಿದೆ. ಈಗಾಗಲೇ ಪರ ಭಾಷೆಯ ಕೆಲ ದೊಡ್ಡ ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದು, ಇದೀಗ ತಮಿಳಿನ ಸ್ಟಾರ್ ಯುವ ನಾಯಕನ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸಲು ಸಜ್ಜಾಗಿದ್ದಾರೆ.

ರುಕ್ಮಿಣಿ ವಸಂತ್ ಅವರು, ತಮಿಳಿನ ಸ್ಟಾರ್ ಹಿರೋ ಚಿಯಾನ್ ವಿಕ್ರಂ ಅವರ ಪುತ್ರ ಧ್ರುವ ವಿಕ್ರಮ್ ಅವರೊಟ್ಟಿಗೆ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಇದು ಧ್ರುವ ವಿಕ್ರಂ ಅವರ ನಾಲ್ಕನೇ ಸಿನಿಮಾ ಆಗಿದ್ದು, ಸಿನಿಮಾವನ್ನು ಹೊಸ ನಿರ್ದೇಶಕ ದೀಪಕ್ ರೆಡ್ಡಿ ನಿರ್ದೇಶನ ಮಾಡಲಿದ್ದಾರೆ. ಕಿರು ಚಿತ್ರವೊಂದನ್ನು ನಿರ್ದೇಶಿಸಿ ಗಮನ ಸೆಳೆದಿರುವ ದೀಪಕ್ ರೆಡ್ಡಿ ಈ ಸಿನಿಮಾ ಮೂಲಕ ಸಿನಿಮಾ ನಿರ್ದೇಶಕ ಎನಿಸಿಕೊಳ್ಳಲಿದ್ದಾರೆ.

ಧ್ರುವ್ ವಿಕ್ರಂ ಹಾಗೂ ರುಕ್ಮಿಣಿ ವಸಂತ್ ನಟಿಸಲಿರುವ ಈ ಸಿನಿಮಾ ಅಪ್ಪಟ ಪ್ರೇಮಕಥಾ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಮತ್ತೊಬ್ಬ ನಾಯಕಿಯೂ ಇರಲಿದ್ದಾರಂತೆ. ಸಿನಿಮಾದ ಚಿತ್ರೀಕರಣ ಏಪ್ರಿಲ್ ತಿಂಗಳಲ್ಲಿ ಪ್ರಾರಂಭ ಆಗಲಿದ್ದು, ಸಿನಿಮಾಕ್ಕೆ ಖ್ಯಾತ ನಿರ್ಮಾಣ ಸಂಸ್ಥೆ ಆಗಿರುವ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡುತ್ತಿದ್ದಾರೆ. ಧ್ರುವ್, ಪ್ರಸ್ತುತ ತಮಿಳು ಚಿತ್ರರಂಗದ ಬಲು ಜನಪ್ರಿಯ ಯುವ ನಟರಾಗಿದ್ದು, ಇದು ಅವರ ನಾಲ್ಕನೇ ಸಿನಿಮಾ ಆಗಲಿದೆ.

ಇದನ್ನೂ ಓದಿ:ಟಾಲಿವುಡ್​ನ ಮತ್ತೋರ್ವ ಸ್ಟಾರ್ ಹೀರೋಗೆ ನಾಯಕಿ ಆದ ರುಕ್ಮಿಣಿ ವಸಂತ್

ರುಕ್ಮಿಣಿ ವಸಂತ್ ಪ್ರಸ್ತುತ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರುಕ್ಮಿಣಿ ವಸಂತ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಜೂ ಎನ್​​ಟಿಆರ್ ನಟನೆಯ ಹೊಸ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಪ್ರಶಾಂತ್ ನೀಲ್ ನಿರ್ದೇಶಕ. ಇತ್ತೀಚೆಗೆ ಅವರೇ ಹೇಳಿಕೊಂಡಿದ್ದಂತೆ ಅವರಿಗೆ ಹಿಂದಿಯಿಂದ ಒಂದು ಆಫರ್ ಬಂದಿದ್ದು, ಆ ಸಿನಿಮಾ ಸಹ ಶೀಘ್ರವೇ ಪ್ರಾರಂಭ ಆಗಲಿದೆ. ಇವುಗಳ ಜೊತೆಗೆ ತಮಿಳಿನಲ್ಲಿ ಹೊಸ ಸಿನಿಮಾ ಒಂದನ್ನು ರುಕ್ಮಿಣಿ ವಸಂತ್ ಒಪ್ಪಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us