AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

ಗಣಪತಿ ಶರ್ಮಾ
|

Updated on: Jul 02, 2026 | 7:04 PM

Share

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಖಾಸಗಿ ರಸ್ತೆಗಳನ್ನು ಸರ್ಕಾರಿ ರಸ್ತೆಗಳೆಂದು ಘೋಷಿಸುವ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಇದರ ಜೊತೆಗೆ, ಅಂಗವಿಕಲರಿಗೆ ಕೆಡಿಬಿ ಭೂಮಿ ಹಂಚಿಕೆ ಮತ್ತು 60-40 ಯೋಜನೆಯ ಅನುಷ್ಠಾನದ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ರಾಜ್ಯದಾದ್ಯಂತ ಭೂ ದಾಖಲೆಗಳ ಶುದ್ಧೀಕರಣ ಹಾಗೂ ಪ್ರಜಾಸೇವೆ ಇಲಾಖೆ ರಚನೆ ಕುರಿತು ಸಚಿವ ಸಂಪುಟ ಸಭೆಯ ಬಳಿಕ ಅವರು ಮಾತನಾಡಿದರು.

ಬೆಂಗಳೂರು, ಜುಲೈ 2: ಇನ್ನು ಮುಂದೆ ಖಾಸಗಿ ಲೇಔಟ್​​ಗಳಲ್ಲಿರುವ ರಸ್ತೆಗಳನ್ನೂ ಸರ್ಕಾರಿ ರಸ್ತೆಗಳೆಂದು ಪರಿವರ್ತಿಸಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ ಮಾಡಿದರು. ಸಚಿವ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದ ಅವರು, ಬೆಂಗಳೂರು ನಗರದಲ್ಲಿ ಈ ಹಿಂದೆ ಜಾರಿಯಲ್ಲಿದ್ದಂತೆ, ಸೈಟ್ ಹಂಚಿದ ನಂತರ ರಸ್ತೆಗಳು ಖಾಸಗಿ ಆಸ್ತಿಯಾಗಿ ಉಳಿಯುವುದಿಲ್ಲ, ಬದಲಿಗೆ ಸರ್ಕಾರದ ಸ್ವತ್ತಾಗುತ್ತವೆ. ಇದಕ್ಕೆ ಅಗತ್ಯ ಕಾನೂನು ತರಲಾಗುವುದು ಎಂದರು. ರಾಜ್ಯದ ರಸ್ತೆಗಳು, ಭೂ ದಾಖಲೆಗಳು ಮತ್ತು ಸಾರ್ವಜನಿಕ ಸೇವೆಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು.

ಅಂಗವಿಕಲರಿಗೆ ಕೆಡಿಬಿ ಭೂಮಿ ಹಂಚಿಕೆಯಲ್ಲಿ ಶೇ 5 ರಿಸರ್ವೇಶನ್ ಮುಂದುವರಿಸಿ, ಅದರ ಮೌಲ್ಯದ ಶೇ 10 ರಿಯಾಯಿತಿ ಅಥವಾ ಗರಿಷ್ಠ 20 ಲಕ್ಷ ರೂಪಾಯಿ ಸೀಲಿಂಗ್ ಅಡಿಯಲ್ಲಿ ಪ್ರಯೋಜನಗಳನ್ನು ನೀಡಲಾಗುವುದು. ಪಂಚಾಯಿತಿ ಮಟ್ಟದಲ್ಲಿ ಭೂ ದಾಖಲೆಗಳನ್ನು ಶುದ್ಧೀಕರಿಸುವ ಭೂ ಗ್ಯಾರಂಟಿ ಕಾರ್ಯಕ್ರಮಕ್ಕೂ ಒತ್ತು ನೀಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us