1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
Hardik Pandya fan: ಒಡಿಶಾದ 18 ವರ್ಷದ ದೀಪಕ್, ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯರನ್ನು ನೋಡಲು 1800 ಕಿ.ಮೀ ಸೈಕಲ್ನಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ಈ ಅಪಾರ ಅಭಿಮಾನಕ್ಕೆ ಮನಸೋತ ಹಾರ್ದಿಕ್, ದೀಪಕ್ಗೆ 1.5 ಲಕ್ಷ ರೂ. ಆರ್ಥಿಕ ಸಹಾಯ, ಸಹಿ ಮಾಡಿದ ಜೆರ್ಸಿ, ವಿರಾಟ್ ಕೊಹ್ಲಿ ಶೂಗಳು ಮತ್ತು ತವರು ಮರಳಲು ರೈಲು ಟಿಕೆಟ್ ನೀಡಿದ್ದಾರೆ. ದೀಪಕ್ ಅವರ ಭವಿಷ್ಯದ ಅಗತ್ಯತೆಗಳಿಗೆ ನೆರವಾಗಿದ್ದಾರೆ.
ಒಡಿಶಾದ 18 ವರ್ಷದ ದೀಪಕ್ ಎಂಬ ಯುವಕನೊಬ್ಬ ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನೋಡುವ ಸಲುವಾಗಿ 1,800 ಕಿ.ಮೀ ಸೈಕಲ್ ಸವಾರಿ ಮಾಡಿ ಬೆಂಗಳೂರಿಗೆ ಬಂದಿದ್ದಾನೆ. ಈ ಅಭಿಮಾನಿಯ ಅಭಿಮಾನಕ್ಕೆ ಮನಸೋತ ಹಾರ್ದಿಕ್ ಯಾರೂ ನಿರೀಕ್ಷಿಸದ ಕೆಲವು ಅದ್ಭುತ ಉಡುಗೊರೆಗಳನ್ನು ನೀಡಿ ಆ ಯುವಕನ ಸಂತಸವನ್ನು ಇಮ್ಮಡಿಗೊಳಿಸಿದ್ದಾರೆ. ಹಾರ್ದಿಕ್ ಆ ಯುವಕನ ಪ್ರಯಾಣ ವೆಚ್ಚ ಮತ್ತು ಭವಿಷ್ಯದ ಅಗತ್ಯಗಳಿಗಾಗಿ ಸುಮಾರು 1.5 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡಿದ್ದಾರೆ. ಇದಲ್ಲದೆ, ಅವರು ಸಹಿ ಮಾಡಿದ ಟೀಂ ಇಂಡಿಯಾ ಜೆರ್ಸಿ ಮತ್ತು ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರ ಒಂದು ಜೋಡಿ ಶೂಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲ, ದೀಪಕ್ ತನ್ನ ಹಿಂದಿರುಗುವ ಪ್ರಯಾಣದಲ್ಲಿ ಯಾವುದೇ ತೊಂದರೆ ಎದುರಿಸದಂತೆ ಒಡಿಶಾಗೆ ಸುರಕ್ಷಿತವಾಗಿ ಮರಳಲು ಹಾರ್ದಿಕ್ ರೈಲು ಟಿಕೆಟ್ ಅನ್ನು ಸಹ ಬುಕ್ ಮಾಡಿಸಿ ಕೊಟ್ಟಿದ್ದಾರೆ.
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್ಐಟಿಯಿಂದ ಹೈವೋಲ್ಟೇಜ್ ಸಭೆ

