Sign In

By signing in or creating an account, you agree with Associated Broadcasting Company's Terms & Conditions and Privacy Policy.

Health: ಲಿಂಬು ನೀರು ಕುಡಿಯುವುದರಿಂದ ಎಷ್ಟೆಲ್ಲ ಉಪಯೋಗಗಳಿವೆ ನೋಡಿ..

Health: ಲಿಂಬು ನೀರು ಕುಡಿಯುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವುದನ್ನು ತಡೆಯಬಹುದು. ಕಿಡ್ನಿ ಕಲ್ಲಿನಿಂದ ಬಳಲುತ್ತಿರುವವರು ದಿನಕ್ಕೆ 125 ಎಂಎಲ್​ನಷ್ಟು ಲಿಂಬು ನೀರು ಕುಡಿಯುವುದರಿಂದ ಸಮಸ್ಯೆಯಿಂದ ಶೀಘ್ರವೇ ಮುಕ್ತಿ ಪಡೆಯಬಹುದು.

Health: ಲಿಂಬು ನೀರು ಕುಡಿಯುವುದರಿಂದ ಎಷ್ಟೆಲ್ಲ ಉಪಯೋಗಗಳಿವೆ ನೋಡಿ..
ಲಿಂಬು ನೀರು (ಸಂಗ್ರಹ ಚಿತ್ರ)
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 16, 2021 | 7:30 PM

ಲಿಂಬು ನೀರು ಹಲವು ರೋಗಗಳಿಗೆ ಮದ್ದು. ಕೆಲವರು ಪ್ರತಿದಿನ ಒಂದು ಲೋಟ ಲಿಂಬು ನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಲಿಂಬು ನೀರು ಕುಡಿಯುವುದರಿಂದ ದಣಿವು ಹೋಗಿ, ಶಕ್ತಿ ಬರುತ್ತದೆ..ಅದಕ್ಕೂ ಮೀರಿ ಉತ್ಸಾಹ ಮೂಡುತ್ತದೆ ಎಂದೂ ಹೇಳಲಾಗುತ್ತದೆ. ಅದರಲ್ಲೂ ಬೇಸಿಗೆ ಬಂತೆಂದರೆ ಲಿಂಬು ನೀರಿಗೆ ಹೆಚ್ಚಿನ ಪ್ರಾಶಸ್ತ್ಯ.  ಈ ಲಿಂಬು ಎಂಬುದು ಎಲ್ಲ ಋತುಮಾನಗಳಲ್ಲೂ ಸಿಗುವ ಹಣ್ಣು.. ಅಪಾರ ಪೋಷಕಾಂಶಗಳನ್ನು ಹೊಂದಿದ್ದು, ವಿಟಮಿನ್​, ಖನಿಜಾಂಶ ಹೆಚ್ಚಾಗಿದೆ. ಹೀಗಾಗಿ ಲಿಂಬು ನೀರು ಸೇವನೆಯಿಂದ ಬಹು ಉಪಯೋಗ ಪಡೆಯಬಹುದು.

ಅದರಲ್ಲಿ ಪ್ರಮುಖವಾಗಿ ಲಿಂಬು ನೀರಿನಿಂದ ಸಿಗುವ ಉಪಯೋಗಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

ಜೀರ್ಣಕ್ರಿಯೆ ಮತ್ತು ತೂಕ ಇಳಿಸಿಕೊಳ್ಳಲು ಸಹಕಾರಿ ಹಸಿದ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಕುಡಿಯುವ ಪದ್ಧತಿ ನಮ್ಮಲ್ಲಿ ಅನಾದಿ ಕಾಲದಿಂದಲೂ ಇದೆ. ಹೀಗೆ ಬರೀ ನೀರು ಕುಡಿಯುವ ಬದಲು ಅದಕ್ಕೆ ಲಿಂಬೆ ರಸ ಬೆರೆಸಿ ಕುಡಿದರೆ ದೇಹಕ್ಕೆ ಇನ್ನಷ್ಟು ಸ್ವಾಸ್ಥ್ಯ ಸಿಗುತ್ತದೆ. ಖಾಲಿ ಹೊಟ್ಟೆಯಲ್ಲಿ ಲಿಂಬು ನೀರು ಕುಡಿದಾಗ ಅದು ನಮ್ಮ ದೇಹದೊಳಗೆ ಆಮ್ಲದ ಹಿಮ್ಮುಖ ಹರಿವನ್ನು ತಡೆಯುತ್ತದೆ. ಜೀರ್ಣಕ್ರಿಯೆಯನ್ನು ಸರಾಗ ಮಾಡುವುದಲ್ಲದೆ, ಮಲಬದ್ಧತೆಯಾಗದಂತೆ ತಡೆಯುತ್ತದೆ. ದೇಹದೊಳಗಿನ ತ್ಯಾಜ್ಯವನ್ನು ಹೊರಹಾಕಲು ತುಂಬ ಸಹಕಾರಿ.

ಜೀರ್ಣಾಂಗ ವ್ಯವಸ್ಥೆಯಲ್ಲಿನ ವಿಷಕಾರಿ ಅಂಶವನ್ನು ಲಿಂಬು ರಸ ತೊಡೆದುಹಾಕುತ್ತದೆ. ಅಜೀರ್ಣದೊಂದಿಗೆ ಬರುವ ಹೊಟ್ಟೆ ಉಬ್ಬರ, ನೋವನ್ನು ಕಡಿಮೆ ಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ಸರಿ ಮಾಡಿ, ಕೆಟ್ಟ ಕೊಬ್ಬನ್ನು ಕರಗಿಸುತ್ತದೆ. ಈ ಮೂಲಕ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಚರ್ಮದ ಆರೋಗ್ಯ ಲಿಂಬುನೀರು ಒಂದು ಹಿತವಾದ ಸುವಾಸನೆಯುಳ್ಳ, ತಾಜಾತನ ನೀಡುವ ಪಾನೀಯ ಎಂಬುದರಲ್ಲಿ ಅನುಮಾನವಿಲ್ಲ. ಈ ಪಾನೀಯ ಕುಡಿದರೆ ದೇಹದ ದಣಿವು ನಿವಾರಣೆಯಾಗುವ ಜತೆ, ಮನಸಿಗೂ ಮುದ ಸಿಗುತ್ತದೆ. ಇದರೊಂದಿಗೆ ಚರ್ಮದ ಆರೋಗ್ಯಕ್ಕೂ ತುಂಬ ಸಹಕಾರಿಯಾಗಿದೆ. ಪ್ರತಿದಿನ ಬೆಳಗ್ಗೆ ಬೆಚ್ಚಗಿನ ಲಿಂಬು ನೀರು ಕುಡಿಯುವುದರಿಂದ ದೇಹದೊಳಗಿನ ನಂಜು ಹೊರಹೋಗಿ, ಚರ್ಮದ ಹೊಳಪು ಹೆಚ್ಚುತ್ತದೆ. ಆರೋಗ್ಯಯುತ ಚರ್ಮವನ್ನು ಪಡೆಯಬಹುದು.

ಉರಿಯೂತ, ಅನೀಮಿಯಾದಿಂದ ಮುಕ್ತಿ ಲಿಂಬು ಆ್ಯಂಟಿಆ್ಯಕ್ಸಿಡೆಂಟ್ಸ್​, ಪೊಟ್ಯಾಷಿಯಂ, ಫೋಲೇಟ್, ಫ್ಲೇವನಾಯ್ಡ್​ಗಳನ್ನು ಒಳಗೊಂಡಿದೆ. ಹಾಗೇ, ವಿಟಮಿನ್ ಬಿ ಕೂಡ ಇದರಲ್ಲಿದೆ. ಈ ಅಂಶಗಳು ನಮ್ಮ ದೇಹದಲ್ಲಿ ಆಕ್ಸಿಡೇಟಿವ್​ ಒತ್ತಡದಿಂದ ಉಂಟಾದ ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡುತ್ತವೆ. ಇನ್ನು ಲಿಂಬುವಿನಲ್ಲಿರುವ ವಿಟಮಿನ್​ ಸಿ ಆಹಾರದಲ್ಲಿರುವ ಕಬ್ಬಿಣದ ಅಂಶಗಳನ್ನು ನಮ್ಮ ದೇಹ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ರಕ್ತಹೀನತೆಯಿಂದ ಪಾರಾಗಬಹುದು.

ಮೂತ್ರಪಿಂಡದಲ್ಲಿ ಕಲ್ಲಾಗುವುದನ್ನು ತಡೆಯುತ್ತದೆ ಲಿಂಬು ನೀರು ಕುಡಿಯುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವುದನ್ನು ತಡೆಯಬಹುದು. ಕಿಡ್ನಿ ಕಲ್ಲಿನಿಂದ ಬಳಲುತ್ತಿರುವವರು ದಿನಕ್ಕೆ 125 ಎಂಎಲ್​ನಷ್ಟು ಲಿಂಬು ನೀರು ಕುಡಿಯುವುದರಿಂದ ಸಮಸ್ಯೆಯಿಂದ ಶೀಘ್ರವೇ ಮುಕ್ತಿ ಪಡೆಯಬಹುದು. ಲಿಂಬು ನೀರು ಮೂತ್ರದಲ್ಲಿ ಪಿಎಚ್​ ಮಟ್ಟವನ್ನು ಹೆಚ್ಚಿಸುವ ಮೂಲಕ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡುತ್ತದೆ.

ಇನ್ನಷ್ಟು..

Motherhood; ನಾನೆಂಬ ಪರಿಮಳದ ಹಾದಿಯಲಿ: ನಡೆಯಬೇಕಾದ ಹಾದಿ ತುಂಬಾ ದೂರವಿದೆ, ಒಟ್ಟಿಗೇ ನಡೆಯುತ್ತಿದ್ದೇವೆ…

ಕೆಲವರು ಎಷ್ಟೇ ಬುದ್ಧಿವಂತರಾದರೂ.. ಜೀವನದಲ್ಲಿ ಸಕ್ಸಸ್ ಕಾಣಲ್ಲ, ಯಾಕೆ?

Published On - 7:20 pm, Tue, 16 February 21

ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ