Gold Rate: ಚಿನ್ನದ ಬೆಲೆ ಮತ್ತೆ ಗಗನಕ್ಕೆ, ಬೆಳ್ಳಿ ಬೆಲೆಯೂ ಏರಿದೆ.. ಬೆಂಗಳೂರಲ್ಲಿ ಚಿನ್ನದ ದರ ಎಷ್ಟಿದೆ ಗೊತ್ತಾ?
Gold Rate: ಬೆಂಗಳೂರಿನಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದ್ದು, 22 ಕ್ಯಾರೆಟ್ನ 10 ಗ್ರಾಂ ಚಿನ್ನ 44,290 ರೂ. ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು 47,890 ರೂ. ಗೆ ತಲುಪಿದೆ.
ಬೆಂಗಳೂರು: ಭಾರತದಲ್ಲಿ ಎರಡು ದಿನಗಳ ಹಿಂದೆ ಇಳಿಕೆಯತ್ತ ಮುಖ ಮಾಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಕೊಂಚ ಏರಿಕೆಯಾಗಿದೆ. ದೇಶದ ನಾನಾ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 50,000 ರೂ. ದಾಟಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದ್ದು, 22 ಕ್ಯಾರೆಟ್ನ 10 ಗ್ರಾಂ ಚಿನ್ನ 44,290 ರೂ. ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು 47,890 ರೂ. ಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದ್ದು, 10 ಗ್ರಾಂ ಬೆಳ್ಳಿ ಬೆಲೆ ಇಂದು 710 ರೂ ಆಗಿದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ. ಬೇರೆಲ್ಲ ನಗರಗಳಿಗೆ ಹೋಲಿಸಿದರೆ, ಮಧುರೈ, ಜೈಪುರ, ಅಹಮದಾಬಾದ್, ಚೆನ್ನೈ, ದೆಹಲಿ, ಕೊಲ್ಕತ್ತಾ, ಲಕ್ನೋ, ಕೊಯಮತ್ತೂರು, ಚಂಡೀಗಢದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆಯಾಗಿದೆ. ಈ ನಗರಗಳಲ್ಲಿ ಚಿನ್ನದ ಬೆಲೆ 50,000 ರೂ. ದಾಟಿದೆ.
ಭಾರತದಲ್ಲಿ ಬೆಳ್ಳಿ ಬೆಲೆ ಮತ್ತೆ ಏರಿಕೆಯಾಗಿದ್ದು, ನಿನ್ನೆ 695 ಇದ್ದ 10 ಗ್ರಾಂ ಬೆಳ್ಳಿ ಬೆಲೆ ಇಂದು 710 ರೂ. ಆಗಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಬೆಳ್ಳಿಯ ಬೆಲೆಯಲ್ಲಿಯೂ ಏರಿಕೆಯಾಗಿದ್ದು, ಇಂದು 710 ರೂ. ಆಗಿದೆ. ಉಳಿದಂತೆ ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಭುವನೇಶ್ವರ, ಮಧುರೈ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ 740 ರೂ. ದಾಟಿದೆ.
ಕೊರೊನಾ ಮಹಾಮಾರಿಯ ನಂತರ ಎಲ್ಲಾ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಹಾಗಾಗಿ ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಲಾಕ್ಡೌನ್ ತೆರವಾಗುತ್ತಿದ್ದಂತೆ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ.
ಇಂದಿನ ಚಿನ್ನದ ದರ..
ಲಾಕ್ಡೌನ್ ತೆರವಾಗುತ್ತಿದ್ದಂತೆ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ.
Published On - 6:36 pm, Tue, 16 February 21