JC Madhuswamy ‘ಸಿದ್ದರಾಮಯ್ಯನವ್ರು ಏನು‌ ಬೇಕಾದ್ರೂ ತಿನ್ನಬಹುದು; ಈ ದೇಶದಲ್ಲಿ ಪೂಜೆ, ಊಟ ವೈಯಕ್ತಿಕ ಹಕ್ಕು’

ಈ ದೇಶದಲ್ಲಿ ಪೂಜೆ ಹಾಗೂ ಊಟ ಅವರವರ ವೈಯಕ್ತಿಕ ಹಕ್ಕು. ಸಿದ್ರಾಮಯ್ಯನವರು ಏನು‌ ಬೇಕಾದ್ರೂ ತಿನ್ನಬಹುದು ಅದು ಅವರಿಗೆ ಬಿಟ್ಟಿದ್ದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಗೋಮಾಂಸ ಹೇಳಿಕೆಗೆ ನಗರದಲ್ಲಿ ಸಣ್ಣ ನೀರಾವರಿ ಇಲಾಖೆ ಸಚಿವ J.C. ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

JC Madhuswamy ‘ಸಿದ್ದರಾಮಯ್ಯನವ್ರು ಏನು‌ ಬೇಕಾದ್ರೂ ತಿನ್ನಬಹುದು; ಈ ದೇಶದಲ್ಲಿ ಪೂಜೆ, ಊಟ ವೈಯಕ್ತಿಕ ಹಕ್ಕು’
J.C. ಮಾಧುಸ್ವಾಮಿ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Feb 16, 2021 | 6:15 PM

ಬಾಗಲಕೋಟೆ: ಈ ದೇಶದಲ್ಲಿ ಪೂಜೆ ಹಾಗೂ ಊಟ ಅವರವರ ವೈಯಕ್ತಿಕ ಹಕ್ಕು. ಸಿದ್ರಾಮಯ್ಯನವರು ಏನು‌ ಬೇಕಾದ್ರೂ ತಿನ್ನಬಹುದು. ಅದು ಅವರಿಗೆ ಬಿಟ್ಟಿದ್ದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಗೋಮಾಂಸ ಹೇಳಿಕೆಗೆ ನಗರದಲ್ಲಿ ಸಣ್ಣ ನೀರಾವರಿ ಇಲಾಖೆ ಸಚಿವ J.C. ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ನಾವು ಗೋ ಹತ್ಯೆ ನಿಷೇಧ ಶಾಸನ ತಂದಿದ್ದು ಈಗಲ್ಲ. 1964ರಿಂದಲೇ ಈ ಕಾಯ್ದೆ ಜಾರಿಯಲ್ಲಿತ್ತು. 13 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಜಾನುವಾರುಗಳನ್ನು ಕೊಲ್ಲಬಹುದು ಅಂತಾ ಕಾಯ್ದೆ ಇತ್ತು. ಆದ್ರೆ, ಅದು ಅಮಾನುಷವಾಗಿದೆ. ಹಾಗಾಗಿ, ನಾವು ತಿದ್ದುಪಡಿ ಮಾಡಿದ್ದೀವಿ ಎಂದು ಮಾಧುಸ್ವಾಮಿ ಹೇಳಿದರು.

ಆದರೆ, ಬೇಕಾದ್ರೆ ಎಮ್ಮೆ ಮಾಂಸ ತಿನ್ನಲು ಬಳಸಿಕೊಳ್ಳಬಹುದು ಅಂತಾ ಮಾಡಿದ್ದೀವಿ. ಅಂದು, ಯಾರ ಮೇಲೂ ಲೀಗಲ್ ಆಗಿ ನಾವು ಆಕ್ಷನ್ ತಗೆದುಕೊಳ್ಳಲು ಆಗ್ತಿರಲಿಲ್ಲ. ಯಾರೋ ಹಸು ಕದಿಯೋದು ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದವು. ಹೀಗಾಗಿ, ತಾಲೂಕು ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಿಸಿ, ತಹಶೀಲ್ದಾರ್, ಪಶುಸಂಗೋಪನಾ ಇಲಾಖೆ ಅಧಿಕಾರಿ ಹಾಗೂ ಪೋಲಿಸರನ್ನ ನೇಮಿಸಿ ಅಂಥ ಪ್ರಕರಣಗಳನ್ನು ಇತ್ಯರ್ಥ ಮಾಡಲು ಕಾನೂನಿನಲ್ಲಿ ಅವಕಾಶ ಮಾಡಿಕೊಟ್ಟಿದ್ದೀವಿ. 13 ವರ್ಷದ ನಂತರದ ವಯಸ್ಸಿನ ಹಸುವನ್ನ ಕೊಲ್ಲಬೇಕೆಂಬುದನ್ನ ಬ್ಯಾನ್ ಮಾಡಿ, ತಿದ್ದುಪಡಿ ಮಾಡಿದ್ದೀವಿ ಅಷ್ಟೇ ಎಂದು ಮಾಧುಸ್ವಾಮಿ ಹೇಳಿದರು.

‘ದಿಶಾ ರವಿ ಬಂಧನಕ್ಕೆ ನಮ್ಮದು ಯಾವುದೇ ಆಕ್ರೋಶವಿಲ್ಲ’ ದಿಶಾ ರವಿ ಬಂಧನಕ್ಕೆ ನಮ್ಮದು ಯಾವುದೇ ಆಕ್ರೋಶವಿಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ. ಯಾವುದೋ ಮೂಲ ಸಿಕ್ಕಾಗ ತನಿಖೆ ನಡೆಸುವುದು ಸಹಜ. ತನಿಖಾ ಸಂಸ್ಥೆಗಳು ವಶಕ್ಕೆ ಪಡೆದು ವಿಚಾರಣೆ ಸಹಜ. ದಿಶಾ ರವಿ ಯಾರು ಅಂತಾ ಅಮಿತ್ ಶಾಗೆ ಗೊತ್ತಿತ್ತಾ? ಏನೋ ಒಂದು ಮಾಹಿತಿ ಮೇಲೆ ತನಿಖೆ ನಡೆಯುತ್ತಿದೆ. ಕಾಂಗ್ರೆಸ್​ನವರು ಏಕೆ ರಾಜಕಾರಣ ಮಾಡ್ತಿದ್ದಾರೋ ಗೊತ್ತಿಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

‘ಯಾರೇ ಮೀಸಲಾತಿ ಕೇಳಿದರೂ ಆಯೋಗಕ್ಕೆ ಶಿಫಾರಸು’ ಮೀಸಲಾತಿಗಾಗಿ ವಿವಿಧ ಸಮುದಾಯಗಳ ಹೋರಾಟ ವಿಚಾರವಾಗಿ ಮೀಸಲಾತಿ ಯಾರಿಗೆ ಕೊಡ್ಬೇಕು, ಕೊಡ್ಬಾರದೆಂದು ತೀರ್ಮಾನ ಕೈಗೊಳ್ಳಲು ಹಿಂದುಳಿದ ವರ್ಗಗಳ ಆಯೋಗವಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಯಾರೇ ಮೀಸಲಾತಿ ಕೇಳಿದರೂ ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸು ಹೋಗುತ್ತದೆ. ಸಾಧಕ ಬಾಧಕ ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಿಲಿದೆ. ಆಯೋಗ ವರದಿ ನೀಡಿದ ನಂತರ ನಾವು ನೋಡಬಹುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

‘3 ಬಾರಿ ನನ್ನ ಖಾತೆ ಬದಲಿದರೂ ನನಗೆ ನನ್ನ ಖಾತೆ ಸಿಕ್ಕಿತು..’ ಒಂದು ವಾರದಲ್ಲೇ ಮೂರು ಬಾರಿ ನನ್ನ ಖಾತೆ ಬದಲಿಸಿದ್ರು. ಹೀಗಾಗಿ ಖಾತೆ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ನಂತರ ನನಗೆ ನನ್ನ ಖಾತೆ ಸಿಕ್ಕಿತು ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಾಮಿ ಹೇಳಿದರು.

ಇದನ್ನೂ ಓದಿ: ವಿವಾದಿತ ರಾಮ ಮಂದಿರಕ್ಕೆ ದೇಣಿಗೆ ಕೊಡುವುದಿಲ್ಲ: ವಿವಾದಿತ ಹೇಳಿಕೆ ನೀಡಿದ ಸಿದ್ದರಾಮಯ್ಯ!

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ