ನಾನು ಸುಮ್ಮನೆ ಇದ್ದರೂ ಸಿಡಿ ಸಿಡಿ ಅಂತಾರೆ ಹುಡುಗ್ರು -ಡಿ.ಕೆ.ಶಿವಕುಮಾರ್ ಆರೋಪ

ನಾನು ಸುಮ್ಮನೆ ಇದ್ದರೂ ಸಿಡಿ ಸಿಡಿ ಅಂತಾರೆ ಹುಡುಗ್ರು -ಡಿ.ಕೆ.ಶಿವಕುಮಾರ್ ಆರೋಪ
ಡಿ.ಕೆ.ಶಿವಕುಮಾರ್ (ಸಂಗ್ರಹ ಚಿತ್ರ)

ಸಿಡಿ ಕೇಸ್‌ನಲ್ಲಿ ನನ್ನನ್ನು ಸಿಲುಕಿಸಲು ಬಹಳ ಪ್ರಯತ್ನ ನೀಡಿತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ನಾನು ಸುಮ್ಮನೆ ಇದ್ದರೂ ಸಿಡಿ ಸಿಡಿ ಅಂತಾರೆ ಹುಡುಗ್ರು ಎಂದು ಜನಾಕ್ರೋಶ ಕಾಂಗ್ರೆಸ್ ಸಮಾವೇಶದಲ್ಲಿ ಡಿಕೆಶಿ ಹೇಳಿದರು.

KUSHAL V

|

Mar 13, 2021 | 11:26 PM

ಶಿವಮೊಗ್ಗ: ಸಿಡಿ ಕೇಸ್‌ನಲ್ಲಿ ನನ್ನನ್ನು ಸಿಲುಕಿಸಲು ಬಹಳ ಪ್ರಯತ್ನ ನೀಡಿತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ನಾನು ಸುಮ್ಮನೆ ಇದ್ದರೂ ಸಿಡಿ ಸಿಡಿ ಅಂತಾರೆ ಹುಡುಗ್ರು ಎಂದು ಜನಾಕ್ರೋಶ ಕಾಂಗ್ರೆಸ್ ಸಮಾವೇಶದಲ್ಲಿ ಡಿಕೆಶಿ ಹೇಳಿದರು. ಏನಾದರೂ ಮಾಡಿ ಡಿಕೆನಾ ಸಿಕ್ಕಿಹಾಕಿಸಬೇಕೆಂದು ಸಂಚು ನಡೀತಿದೆ. ಇನ್ನೂ ಗೊತ್ತಿಲ್ಲ, ಇದರ ಹಿಂದೆ ಯಾಱರು ಇದ್ದಾರೆಂದು ಟೈಮ್‌ ಬಂದಾಗ ಎಲ್ಲ ಮಾತಾಡ್ತೀನಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಟೈಮ್‌ ಬಂದಾಗ ಎಲ್ಲವನ್ನೂ ನಾನೇ ಬಿಚ್ಚಿಡ್ತೀನಿ ಎಂದು ಹೇಳಿದರು.

‘ಈ ಡಿ.ಕೆ.ಶಿವಕುಮಾರ್ ಯಾರಿಗೂ ಹೆದರೋ ಮಗ ಅಲ್ಲ’ ಈ ಡಿ.ಕೆ.ಶಿವಕುಮಾರ್ ಯಾರಿಗೂ ಹೆದರೋ ಮಗ ಅಲ್ಲ. ಪೊಲೀಸರಿಗೆ ಒಂದು ಕಿವಿಮಾತು, ಅಧಿಕಾರ ಯಾವತ್ತೂ ಶಾಶ್ವತವಲ್ಲ. ನಿಮಗೆ ಯಾರೂ ಸ್ಟಾರ್ ಕೂಡುವುದಿಲ್ಲ. ವಿನಾಕಾರಣ ಶಾಸಕರ ಮೇಲೆ ಕೇಸ್ ದಾಖಲಿಸಿದ್ದಾರೆ ಎಂದು ಎಸ್.​ಪಿ ಶಾಂತರಾಜು ವಿರುದ್ಧ ಡಿಕೆಶಿ ಆಕ್ರೋಶ ಹೊರಹಾಕಿದರು. ಜೊತೆಗೆ, ಹಾಸಿಗೆ, ದಿಂಬಿನಲ್ಲಿ ಯಡಿಯೂರಪ್ಪ ಹಣ ಹೊಡೆದಿದ್ದಾರೆ. ಈ ಸರ್ಕಾರ 4000-5000 ಕೋಟಿ ಹಣ ಗುಳಂ ಮಾಡಿದೆ ಎಂದು ಶಿವಕುಮಾರ್​ ಹೇಳಿದರು.

ಇದನ್ನೂ ಓದಿ: BSY ಏನು ಸತ್ಯಹರಿಶ್ಚಂದ್ರನಾ?; ನಾವು ಮತ್ತೆ ಅಧಿಕಾರಕ್ಕೆ ಬರ್ತೇವೆ Be Careful -ಸಿದ್ದರಾಮಯ್ಯ ಗುಟುರು

Follow us on

Related Stories

Most Read Stories

Click on your DTH Provider to Add TV9 Kannada