ಮಹಿಳೆಯರೇ.., ಈ ಸಮಸ್ಯೆಗಳು ನಿಮ್ಮನ್ನು ಹೈರಾಣಾಗಿಸಿಬಿಡಬಹದು; ಆರೋಗ್ಯದತ್ತ ಗಮನ ಇರಲಿ

ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಎರಡನೆಯ ಸಾಮಾನ್ಯ ಕ್ಯಾನ್ಸರ್ ಆಗಿದೆ. ಮುಟ್ಟಿನ ಅವಧಿಯ ನಡುವೆ ಅಥವಾ ಲೈಂಗಿಕತೆಯ ನಂತರ ರಕ್ತಸ್ರಾವ, ದುರ್ವಾಸನೆ ಹೊರಸೂಸುವುದು ಇದರ ಲಕ್ಷಣಗಳಾಗಿವೆ.

ಮಹಿಳೆಯರೇ.., ಈ ಸಮಸ್ಯೆಗಳು ನಿಮ್ಮನ್ನು ಹೈರಾಣಾಗಿಸಿಬಿಡಬಹದು; ಆರೋಗ್ಯದತ್ತ ಗಮನ ಇರಲಿ
ಸಾಂದರ್ಭಿಕ ಚಿತ್ರ
Follow us
preethi shettigar
| Updated By: Lakshmi Hegde

Updated on: Mar 09, 2021 | 8:17 PM

ಮಹಿಳೆಯರು ತಮ್ಮ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಾರೆ ಮತ್ತು ಅನೇಕ ಪಾತ್ರಗಳು ಹಾಗೂ ಜವಾಬ್ದಾರಿಗಳನ್ನು ಕುಶಲತೆಯಿಂದ ನಿರ್ವಹಿಸುತ್ತಿರುತ್ತಾಳೆ. ಆದರೆ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮಾತ್ರ ಆಕೆ ಮರೆತುಬಿಡುತ್ತಾಳೆ.   ಆಗಾಗ ಕಾಣಿಸಿಕೊಳ್ಳುವ ಸಣ್ಣಪುಟ್ಟ ಸಮಸ್ಯೆಗಳನ್ನೆಲ್ಲ ನಿರ್ಲಕ್ಷಿಸಿ ಬಿಡುತ್ತಾಳೆ. ಆದರೆ ಮಹಿಳೆಯರು ಮೊದಲು ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಸ್ತ್ರೀಯರಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಗಳು ಯಾವವು? ಎಂಬುದನ್ನು ಬೆಂಗಳೂರಿನ ರಿಚ್ಮಂಡ್ ರಸ್ತೆಯ ಫೋರ್ಟಿಸ್ ಲಾ ಫೆಮ್ಮೆ ಆಸ್ಪತ್ರೆಯ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ದೀಪ್ತಿ ಅಶ್ವಿನ್ ತಿಳಿಸಿದ್ದಾರೆ. 

ಎಂಡೊಮೆಟ್ರಿಯೊಸಿಸ್ ಗರ್ಭಾಶಯದ ಒಳಪದರದ ಗ್ರಂಥಿಗಳು, ಗರ್ಭಕೋಶದ ಹೊರಗೆ, ಅಂಡಾಶಯ, ಮೂತ್ರಕೋಶ ಹಾಗೂ ಗುದನಾಳದ ಮೇಲೆ ಬೆಳವಣಿಗೆಯಾದಾಗ ಎಂಡೊಮೆಟ್ರಿಯೊಸಿಸ್ ಉಂಟಾಗುತ್ತದೆ. ಇದರಿಂದ ಮುಟ್ಟಿನ ಸಂದರ್ಭದಲ್ಲಿ ತುಂಬ ನೋವು ಬರುತ್ತದೆ. ಸಂಭೋಗದ ಸಮಯದಲ್ಲೂ ವಿಪರೀತ ನೋವು ಇರುವುದರೊಂದಿಗೆ ಬಂಜೆತನಕ್ಕೂ ಕಾರಣ ಆಗಬಹುದು.

ಫೈಬ್ರಾಯ್ಡ್‌ಗಳು ಮುಟ್ಟಾಗಲು ಪ್ರಾರಂಭಿಸಿದ ಯುವತಿಯರಲ್ಲಿ ಯಾರಲ್ಲಾದರೂ ಈ ಫ್ರೈಬ್ರಾಯ್ಡ್​ಗಳು ಉಂಟಾಗಬಹುದು. ಇದು ಕ್ಯಾನ್ಸರ್​ಕಾರಕ ಆಗಿರುವುದಿಲ್ಲ. ಆದರೆ ಗರ್ಭಕೋಶದಲ್ಲಿ ಫೈಬ್ರಾಯ್ಡ್ ಹೊಂದಿರುವ ಮಹಿಳೆಯರಲ್ಲಿ ಬಂಜೆತನ ಕಾಣಿಸಿಕೊಳ್ಳಬಹುದು. ಗರ್ಭ ಧರಿಸಿದರೂ ಅದು ನಿಲ್ಲುವ ಸಾಧ್ಯತೆ ಕಡಿಮೆ ಇರುತ್ತದೆ. ಇನ್ನು ಮುಟ್ಟಾದಾಗ ನೋವು ತರುವುದಲ್ಲದೆ, ಹೆಚ್ಚು ರಕ್ತಸ್ರಾವವೂ ಆಗುತ್ತದೆ.

ಯೋನಿ ಸೋಂಕುಗಳು ಮತ್ತು ಎಸ್‌ಟಿಐ ಬ್ಯಾಕ್ಟೀರಿಯಾ, ಶಿಲೀಂಧ್ರ, ಪರಾವಲಂಬಿ, ವೈರಸ್‌ಗಳು ಮುಂತಾದ ವಿವಿಧ ಕಾರಣಗಳಿಂದ ಇವು ಸಂಭವಿಸುತ್ತವೆ. ವೈದ್ಯರ ಸರಳ ಪರೀಕ್ಷೆಯು ಈ ಸೋಂಕುಗಳನ್ನು ಪತ್ತೆ ಮಾಡುತ್ತದೆ ಮತ್ತು ಸೂಕ್ತ ಚಿಕಿತ್ಸೆಯನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ.ಇನ್ನು ಈ ತೊಡಕುಗಳನ್ನು ತಡೆಗಟ್ಟಲು ಸೋಂಕುಗಳಿಗೆ ಬೇಗನೆ ಚಿಕಿತ್ಸೆ ನೀಡುವುದು ಅತ್ಯಗತ್ಯ.

ಮೂತ್ರನಾಳದ ಸೋಂಕು ಇದು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತವೆ.  ಇದು ಮಿತಿಮೀರಿದರೆ ತುರ್ತುಸ್ಥಿತಿಗೆ ಕಾರಣವಾಗಬಹುದು. ಹೆಚ್ಚು ತೀವ್ರವಾದ ಸಂದರ್ಭಗಳಲ್ಲಿ, ಮೂತ್ರದಲ್ಲಿ ರಕ್ತ, ಹೊಟ್ಟೆಯ ಕೆಳಭಾಗದಲ್ಲಿ ನೋವು ಮತ್ತು ಜ್ವರವೂ ಉಂಟಾಗಬಹುದು. ಇದಕ್ಕೆ ಕಾರಣವಾಗುವ ಜೀವಿ ಮತ್ತು ಅದಕ್ಕೆ ಚಿಕಿತ್ಸೆ ನೀಡಲು ಅಗತ್ಯವಾದ ಪ್ರತಿಜೀವಕಗಳನ್ನು ತಿಳಿಯಲು ಮೂತ್ರದ ಸೂಕ್ಷ್ಮತೆಯನ್ನು ನಿರ್ವಹಿಸಬೇಕಾಗಿದೆ. ಇದನ್ನು ತಡೆಗಟ್ಟಲು ಹೆಚ್ಚು ದ್ರವ ರೂಪದ ಆಹಾರ ಸೇವಿಸುವುದು ಅಗತ್ಯವಾಗಿದೆ.

ಗರ್ಭಧಾರಣೆಯ ಸಮಸ್ಯೆಗಳು: ಮಧುಮೇಹ, ಅಧಿಕ ರಕ್ತದೊತ್ತಡ, ಅವಧಿ ಪೂರ್ವ ಮುಟ್ಟು, ಗರ್ಭಪಾತವು ಈ ಗರ್ಭಧಾರಣೆಯನ್ನು ಸಂಕೀರ್ಣಗೊಳಿಸುವ ಕಾಯಿಲೆಗಳಾಗಿದ್ದು, ಈ ಬಗ್ಗೆ ಮಹಿಳೆಯರು ಎಚ್ಚರಿಕೆಯಿಂದ ಇರಬೇಕು.

ಪಾಲಿಸಿಸ್ಟಿಕ್ ಅಂಡಾಶಯದ ಸಿಂಡ್ರೋಮ್: ಪುರುಷ ಹಾರ್ಮೋನುಗಳ ಅಧಿಕ ಉತ್ಪಾದನೆ ಇದ್ದಾಗ ಇದು ಸಂಭವಿಸುತ್ತದೆ. ಇದು ಅನಿಯಮಿತ ಮುಟ್ಟು, ಮುಟ್ಟಿನ ಸಮಯದಲ್ಲಿ ಹರಿವು ಕಡಿಮೆಯಾಗುವುದು, ತೂಕ ಹೆಚ್ಚಾಗುವುದು, ಮುಖ ಮತ್ತು ಎದೆಯ ಮೇಲೆ ಅಸಹಜ ಕೂದಲು ಬೆಳವಣಿಗೆಗೆ ಕಾರಣವಾಗಬಹುದು. ಹಾರ್ಮೋನುಗಳನ್ನು ನಿಗ್ರಹಿಸಲು ತೂಕವನ್ನು ನಿಯಂತ್ರಣದಲ್ಲಿಡುವುದು ಮುಖ್ಯವಾಗಿರುತ್ತದೆ.

ಮುಟ್ಟು ನಿಲ್ಲುವಾಗಿನ ಸಮಸ್ಯೆಗಳು ಮಹಿಳೆಯರಲ್ಲಿ ಮುಟ್ಟು ನಿಲ್ಲುವಾಗ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಗಳೆಂದರೆ ಮೂತ್ರದ ಅಸಂಯಮ. ಅಂದರೆ ಮೂತ್ರ ವಿಸರ್ಜನೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಅಲ್ಲದೆ, ಯೋನಿ ಶುಷ್ಕತೆ, ಹಿಗ್ಗುವಿಕೆಯಂಥ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಈ ಸಮಯದಲ್ಲಿ ಮಹಿಳೆಯರು ಹೆಚ್ಚಾಗಿ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಅಲ್ಲದೆ, ನಿಯಮಿತವಾಗಿ ವ್ಯಾಯಾಮ ಮಾಡಬೇಕು.

ಕ್ಯಾನ್ಸರ್  ಮಹಿಳೆಯರು ಎದುರಿಸುವ ಕ್ಯಾನ್ಸರ್​ಗಳಲ್ಲಿ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಪ್ರಮುಖವಾಗಿದೆ. ಸ್ತನ ಕ್ಯಾನ್ಸರ್ ಸ್ತನದಲ್ಲಿ ಗಡ್ಡೆಗಳಾಗುವುದು, ಸ್ತನದ ಚರ್ಮದ ಮಂದವಾಗುವಿಕೆ, ಮೊಲೆ ತೊಟ್ಟುಗಳ ದ್ರವ ವಿಸರ್ಜನೆ (ಕ್ಷೀರ ಹೊರತುಪಡಿಸಿ) ಮೂಲಕ ಕ್ಯಾನ್ಸರ್​ ಕಂಡುಬರುತ್ತದೆ. ಆರಂಭಿಕ ಹಂತದಲ್ಲಿ ರೋಗದ ಲಕ್ಷಣಗಳು ಕಂಡು ಬಂದರೆ ಸರಿಪಡಿಸಿಕೊಳ್ಲಲು ಅವಕಾಶಗಳಿರುತ್ತದೆ.

ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಎರಡನೆಯ ಸಾಮಾನ್ಯ ಕ್ಯಾನ್ಸರ್ ಆಗಿದೆ. ಮುಟ್ಟಿನ ಅವಧಿಯ ನಡುವೆ ಅಥವಾ ಲೈಂಗಿಕತೆಯ ನಂತರ ರಕ್ತಸ್ರಾವ, ದುರ್ವಾಸನೆ ಹೊರಸೂಸುವುದು ಇದರ ಲಕ್ಷಣಗಳಾಗಿವೆ. ಲೈಂಗಿಕವಾಗಿ ಸಕ್ರಿಯವಾಗಿರುವ ಎಲ್ಲಾ ಮಹಿಳೆಯರು ಬೇಗನೆ ಪತ್ತೆಹಚ್ಚಲು ನಿಯಮಿತ ಪರೀಕ್ಷೆಗೆ ಒಳಗಾಗುವುದು ಅತ್ಯಗತ್ಯ.

ಇದನ್ನೂ ಓದಿ: Women’s Day Special: ಟೇಬಲ್​ ಟೆನ್ನಿಸ್​​ನ ಮಿನುಗುತಾರೆ ಅರ್ಚನಾ ಕಾಮತ್​; ಬೆನ್ನೆಲುಬಾಗಿ ನಿಂತ ತಾಯಿಯ ಹೆಮ್ಮೆಯ ನುಡಿಗಳಿವು..

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್