AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Skincare: ಆರೋಗ್ಯ ಜೋಪಾನವಾಗಿರಲು ಮಾಡುತ್ತಲೇ ಇರಿ ಬಿಸಿಲಲ್ಲಿ ಸ್ನಾನ!

ಚರ್ಮವನ್ನು ನಾವು ರಕ್ಷಿಸಿದರೆ ಚರ್ಮ ನಮ್ಮನ್ನು ರಕ್ಷಿಸುತ್ತದೆ. ಚರ್ಮವೇ ಪ್ರಧಾನವಾಗಿರುವ ನಮ್ಮ ದೇಹದ ಮೇಲೆಅತಿ ಹೆಚ್ಚು ಕಾಳಜಿ ನಮಗಿರಬೇಕು. ಹಾಗಾದರೆ ಯಾವ ವಿದಾನಗಳ ಮೂಲಕ ಚರ್ಮ ಕಾಳಜಿ ಮಾಡಬಹುದು ಎಂದಿರೆ? ಮುಂದೆ ಓದಿ..

Skincare: ಆರೋಗ್ಯ ಜೋಪಾನವಾಗಿರಲು ಮಾಡುತ್ತಲೇ ಇರಿ ಬಿಸಿಲಲ್ಲಿ ಸ್ನಾನ!
ರಕ್ಷಕ ರಕ್ಷಕ..ಆಪ್ತರಕ್ಷಕ ಎಂದು ಚರ್ಮಕ್ಕೆ ಹೇಳೋಣವೇ..!
guruganesh bhat
| Edited By: |

Updated on: Mar 10, 2021 | 6:40 AM

Share

ನಮ್ಮ ದೇಹದ ಅತಿ ಮುಖ್ಯ ಭಾಗವೇ ಚರ್ಮ. ಬಿಸಿಲು, ಧೂಳು, ಶಾಖ, ಚಳಿ ಸೇರಿದಂತೆ ದೇಹ ಎದುರಿಸುವ ಎಲ್ಲಾ ಪ್ರತಿರೋಧಗಳನ್ನು ಚರ್ಮವೇ ನೇರವಾಗಿ ಎದುರಿಸುತ್ತದೆ. ಒಂದು ರೀತಿ ಗಡಿ ಕಾಯುವ ಯೋಧನಂತೆ. ಹೀಗಿರುವಾಗ ಚರ್ಮವನ್ನು ಕಾಪಾಡಿಕೊಳ್ಳಲು ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಲ್ಲವೇ? ಚರ್ಮ ನಮ್ಮ ದೆಹದ ಅತಿ ದೊಡ್ಡ ಭಾಗವೂ ಹೌದು. ಬಿಸಿಲಿಗೂ ಸೈ ಚಳಿಗೂ ಜೈ ಎಂಬಂತೆ ನಮ್ಮ ಚರ್ಮ ಇದ್ದರೆ ಯಾವುದೇ ಪರಿಸ್ಥಿತಿಗೂ ಹೆದರಬೇಕಿಲ್ಲ. ಹಾಗಾದರೆ, ಚರ್ಮವನ್ನು ಕ್ಷೇಮದಿಂದ ಕಾಪಾಡುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿ ಅತ್ಯಂತ ಸುಲಭ ವಿಧಾನಗಳಿವೆ.

ಚರ್ಮದ ಜೋಪಾನಕ್ಕೆ 5 ವಿಧಾನಗಳು ಚರ್ಮವನ್ನು ನಾವು ರಕ್ಷಿಸಿದರೆ ಚರ್ಮ ನಮ್ಮನ್ನು ರಕ್ಷಿಸುತ್ತದೆ. ಚರ್ಮವೇ ಪ್ರಧಾನವಾಗಿರುವ ನಮ್ಮ ದೇಹದ ಮೇಲೆಅತಿ ಹೆಚ್ಚು ಕಾಳಜಿ ನಮಗಿರಬೇಕು. ಹಾಗಾದರೆ ಯಾವ ವಿದಾನಗಳ ಮೂಲಕ ಚರ್ಮ ಕಾಳಜಿ ಮಾಡಬಹುದು ಎಂದಿರೆ? ಮುಂದೆ ಓದಿ..

ಚರ್ಮದ ಮೇಲೆ ಪ್ರಯೋಗ ಬೇಡ ಚರ್ಮವನ್ನು ಸ್ವಚ್ಛಗೊಳಿಸುವ ಸೋಪ್/ ಶಾಂಪೂ ಮುಂತಾದವುಗಳನ್ನು ಕೊಳ್ಳುವಾಗ ಜಾಗೃತೆಯಲ್ಲಿರಿ. ಕಡಿಮೆ ಮೊತ್ತದ್ದು ಎಂದು ಸಿಕ್ಕಿದ್ದನ್ನೆಲ್ಲಾ ಉಪಯೋಗಿಸಬೇಡಿ. ಸಿಕ್ಕಸಿಕ್ಕದ್ದನ್ನೆಲ್ಲಾ ತಿನ್ನಲು ಆಗುವುದಿಲ್ಲವಲ್ಲಾ, ಹಾಗೇ ಸಿಕ್ಕಸಿಕ್ಕದ್ದನ್ನೆಲ್ಲಾ ಚರ್ಮದ ಮೇಲೆ ಪ್ರಯೋಗಿಸಲೂಬಾರದು.

ಮುನ್ನೂರರವತ್ತೈದು ದಿನವೂ ಅಗತ್ಯ ತೇವಾಂಶ ಚರ್ಮ ನಮ್ಮ ಮಿತ್ರ, ಬಿಸಿಲು, ಮಳೆ, ಚಳಿಯಿಂದ ನಮ್ಮನ್ನು ರಕ್ಷಿಸುವ ಆಪ್ತರಕ್ಷಕ. ನಮಗೆ ಕುಡಿಯಲು ನಿರು ಬೇಕೇ ಬೇಕಲ್ಲ, ಹಾಗೇ ಚರ್ಮಕ್ಕೂ ತೇವಾಂಶ ಅಗತ್ಯವಿದೆ. ಚರ್ಮವನ್ನು ಒರಟು ಒರಟಾಗಿ ಇಟ್ಟುಕೊಳ್ಳುವುದು ಕಿಂಚಿತ್ತೂ ಒಳ್ಳೆಯದಲ್ಲ. ಅಂದಹಾಗೆ ಸಾಮಾನ್ಯವಾಗಿ ಇರುವ ಒಂದು ತಪ್ಪು ನಂಬಿಕೆಯೆಂದರೆ, ಚಳಿಗಾಲದಲ್ಲಿ ಒಂದೇ ಚರ್ಮದಲ್ಲಿ ತೇವಾಂಶ ಇದ್ದರೆ ಸಾಕು ಎಂದು. ಇದು ಸತ್ಯಕ್ಕೆ ದೂರವಾದ ಸಂಗತಿ. ನಮ್ಮ ಚರ್ಮಕ್ಕೆ ವರ್ಷದ ಮುನ್ನೂರರವತ್ತೈದು ದಿನವೂ ತೇವಾಂಶದ ಅಗತ್ಯವಿದೆ, ಅನಿವಾರ್ಯತೆಯಿದೆ. ಇದನ್ನು ನಾವು ಅನುದಿನ ನೆನಪಿಡಬೇಕು.

ಬಿಸಿಲಲ್ಲಿ ಮಾಡಿ ಸ್ನಾನ! ಇದೇನಿದು, ಪ್ರತಿದಿನ ಮಾಡುವ ನೀರಿನ ಸ್ನಾನ ಗೊತ್ತು, ಹೆಚ್ಚೆಂದರೆ ಪುರಾಣಗಳಲ್ಲಿ ಕೇಳುವ ಕ್ಷೀರಸ್ನಾನ ಗೊತ್ತು. ಬಿಸಿಲಲ್ಲಿ ಮೀಯುವುದು ಎಂದರೇನು ಎಂದು ಯೋಚಿಸಿದಿರಾ? ಪ್ರತಿದಿನ ಸಾಧ್ಯವಾದಷ್ಟು ಸಮಯವನ್ನು ಬಿಸಿಲಲ್ಲಿ ಕಳೆಯಿರಿ. ಅದೂ ಬೆಳಗಿನ ಎಳೆಯ ಬಿಸಿಲಲ್ಲಿ ಕೆಲ ಕಾಲ ನಿಲ್ಲಿ, ಬರಿ ಮೈಯಲ್ಲಿ ನಿಂತರೆ ಇನ್ನೂ ಒಳಿತು. ಬಿಸಿಲಲ್ಲಿ ನಿಂತರೆ ಸಾಕು, ಬಿಸಿಲು ಸ್ನಾನ ಮಾಡಿದಂತೆ ಆಗುತ್ತದೆ. ಸಾಬೂನು, ಶಾಂಪೂಗಳ ಹಂಗಿಲ್ಲ!

ಇದನ್ನೂ ಓದಿ: Diabetes: ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ಕೂಡಲೇ ಶುಗರ್ ಟೆಸ್ಟ್​ ಮಾಡಿಸಿಕೊಳ್ಳಿ..

Maha Shivaratri 2021: ಶಿವನನ್ನು ಲಿಂಗರೂಪದಲ್ಲಿ ಯಾಕೆ ಆರಾಧಿಸುತ್ತಾರೆ ಗೊತ್ತೇ?; ಇಲ್ಲಿದೆ ಪುರಾಣ ಕಥೆ

ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು