AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ವೈರಸ್​ ದಾಳಿಗೆ ಅಲ್ಲೋಲ-ಕಲ್ಲೋಲವಾದ ಬಿಗ್​ ಬಾಸ್​ ಮನೆ!

ಕೊರೊನಾ ವೈರಸ್​ಗೆ ಇಡೀ ದೇಶವೇ ತತ್ತರಿಸಿ ಹೋಗಿತ್ತು. ಇದರ ಮಧ್ಯೆಯೂ ಈಗ ಕನ್ನಡ ಬಿಗ್​ ಬಾಸ್​ ಆರಂಭವಾಗಿದೆ. ಇದೇ ಕಾನ್ಸೆಪ್ಟ್​ ಮೇಲೆ ಈ ಬಾರಿಯ ಬಿಗ್​ ಬಾಸ್​ ಟಾಸ್ಕ್​ಗಳು ನಡೆಯುತ್ತಿವೆ.

BBK8: ವೈರಸ್​ ದಾಳಿಗೆ ಅಲ್ಲೋಲ-ಕಲ್ಲೋಲವಾದ ಬಿಗ್​ ಬಾಸ್​ ಮನೆ!
ಬಿಗ್ ಬಾಸ್ ಕನ್ನಡ
Follow us
ರಾಜೇಶ್ ದುಗ್ಗುಮನೆ
| Updated By: ಆಯೇಷಾ ಬಾನು

Updated on: Mar 10, 2021 | 6:38 AM

ಕನ್ನಡ ಬಿಗ್​ ಬಾಸ್​ ಮನೆಗೆ ದಾಳಿ ಇಟ್ಟ ವೈರಸ್​ಗೆ ಮನೆ ಸದಸ್ಯರು ಅಕ್ಷರಶಃ ಕಂಗಾಲಾಗಿದ್ದಾರೆ. ಕೆಲವರು ಅಸ್ವಸ್ಥಗೊಂಡರೆ ಇನ್ನೂ ಕೆಲವರು ನಮ್ಮ ಬಳಿ ಇದು ಸಾಧ್ಯವಾಗುತ್ತಿಲ್ಲ ಎಂದು ಬಿಗ್​ ಬಾಸ್​ ಬಳಿ ಮೊರೆ ಇಟ್ಟಿದ್ದಾರೆ. ಅಷ್ಟಕ್ಕೂ ಏನಿದು ವೈರಸ್​? ಏನಿದು ವಿಚಾರ? ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. ಕೊರೊನಾ ವೈರಸ್​ಗೆ ಇಡೀ ದೇಶವೇ ತತ್ತರಿಸಿ ಹೋಗಿತ್ತು. ಇದರ ಮಧ್ಯೆಯೂ ಈಗ ಕನ್ನಡ ಬಿಗ್​ ಬಾಸ್​ ಆರಂಭವಾಗಿದೆ. ಇದೇ ಕಾನ್ಸೆಪ್ಟ್​ ಮೇಲೆ ಈ ಬಾರಿಯ ಬಿಗ್​ ಬಾಸ್​ ಟಾಸ್ಕ್​ಗಳು ನಡೆಯುತ್ತಿವೆ.

ಬಿಗ್​ ಬಾಸ್ 9ನೇ ದಿನ ವೈರಸ್​ ಹಾಗೂ ಮನುಷ್ಯರು ಎನ್ನುವ ಆಧಾರದ ಮೇಲೆ ಟಾಸ್ಕ್​ ನೀಡಲಾಗಿತ್ತು. ಮನೆಯ ಒಂದಷ್ಟು ಸದಸ್ಯರು ವೈರಸ್​ ಆದರೆ, ಮತ್ತೊಂದಷ್ಟು ಸದಸ್ಯರು ಮನುಷ್ಯರು. ವೈರಸ್​ ತಂಡಕ್ಕೆ ಪ್ರಶಾಂತ್​ ಸಂಬರಗಿ ಕ್ಯಾಪ್ಟನ್​. ಮನುಷ್ಯರ ತಂಡಕ್ಕೆ ಲ್ಯಾಗ್​ ಮಂಜು ನಾಯಕರಾಗಿದ್ದರು.

ಈ ಟಾಸ್ಕ್​​ನ ನಿಯಮದಂತೆ ವೈರಸ್​ ದಾಳಿಗೆ ತುತ್ತಾಗದಂತೆ ಮನುಷ್ಯರು ಎಚ್ಚರವಿರಬೇಕು. ವೈರಸ್​ ತಂಡ ಮಾಡುವ ದಾಳಿಯಿಂದ ತಪ್ಪಿಸಿಕೊಳ್ಳಬೇಕು. ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಇದ್ದರೆ ಮನುಷ್ಯ ತಂಡದ ಒಬ್ಬ ಸದಸ್ಯ ಕ್ವಾರಂಟೈನ್​ ಆಗಬೇಕು.

ಕ್ವಾರಂಟೈನ್​ ಅವಧಿ ಅರ್ಧ ಗಂಟೆ. ಈ ವೇಳೆ ಮನುಷ್ಯ ತಂಡದವರು ಹಗ್ಗ ಹಿಡಿದು ನಿಲ್ಲಬೇಕು. ಆಗ ವೈರಸ್​ ತಂಡದವರು ತೊಂದರೆ ನೀಡಬೇಕು. ಆದರೆ, ಬಾಡಿ ಟಚ್​ ಮಾಡುವಂತಿಲ್ಲ. ಒಂದೊಮ್ಮೆ, ಕ್ವಾರಂಟೈನ್​ನಲ್ಲಿರುವವರು ಹಗ್ಗವನ್ನು ಕೈಬಿಟ್ಟರೆ ಅವರು ಸೋತಂತೆ. ಅವರು ಈ ಆಟದಿಂದ ಹೊರಗಿರಬೇಕು. ಕೊನೆಯಲ್ಲಿ ಯಾವ ತಂಡದಲ್ಲಿ ಹೆಚ್ಚು ಜನರು ಉಳಿಯುತ್ತಾರೋ ಅವರೇ ಗೆದ್ದಂತೆ.

ಈ ಆಟ ನಡೆಯುವಾಗ ವೈರಸ್ ತಂಡದವರು ಬೇಕಾ ಬಿಟ್ಟಿ ನಡೆದುಕೊಳ್ಳುತ್ತಿದ್ದಾರೆ, ಕತ್ತು ಹಿಸುಕುತ್ತಿದ್ದಾರೆ ಎನ್ನುವ ಆರೋಪವನ್ನು ಮಾಡಿದರು ಮನುಷ್ಯ ತಂಡದವರು. ಪ್ರಶಾಂತ್​ ಸಂಬರಗಿ ಹಾಗೂ ಬ್ರೋ ಗೌಡ ನಡುವೆ ನಡೆದ ಜಗಳ ತಾರಕಕ್ಕೇರಿತ್ತು. ಒಟ್ಟಿನಲ್ಲಿ ಬಿಗ್​ ಬಾಸ್​ ಮನೆ ವೈರಸ್​ ದಾಳಿಗೆ ಅಲ್ಲೋಲ ಕಲ್ಲೋಲವಾಗಿದೆ. ಒಬ್ಬರಬ್ಬೊರ ನಡುವೆ ದ್ವೇಷ ಬೆಳೆಯುವಂತಾಗಿದೆ. ಸದ್ಯ ಇದು ಎಲ್ಲಿ ಹೋಗಿ ನಿಲ್ಲುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: BBK8: ಮಂಜ ಯಾವತ್ತಿದ್ರೂ ನನ್ನವನು : ದಿವ್ಯಾ ಉರುಡುಗಗೆ ಎಚ್ಚರಿಕೆ ನಿಡದ ದಿವ್ಯಾ ಸುರೇಶ್​!

ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP