ನಲವತ್ತು ದಾಟಿದರೂ ಇಪ್ಪತ್ತರ ಕುವರಿಯಂತೆ ಕಾಣಿಸಲು ಇಲ್ಲಿದೆ ಬ್ಯೂಟಿ ಟಿಪ್ಸ್
ನಲವತ್ತು ವಯಸ್ಸನ್ನು ತಲುಪಿದಾಗ ಚರ್ಮದ ಆರೈಕೆಗೆ ಹೆಚ್ಚಿನ ಗಮನ ಬೇಕು. ಈ ಹಂತದಲ್ಲಿಯೇ ಚರ್ಮವು ವಯಸ್ಸಾದಂತೆ ಕಾಣಲು ಪ್ರಾರಂಭಿಸುತ್ತದೆ. ಹಾಗಿದ್ದಾಗ ದೇಹವು ಹೆಚ್ಚು ಪೋಷ್ಟಿಕಾಂಶವನ್ನು ಬಯಸುತ್ತದೆ. ಯೋಗ ನಿರೋಧಕ ಶಕ್ತಿ ದೇಹದಲ್ಲಿ ಕುಂಠಿತಗೊಳ್ಳುತ್ತಾ ಹೋಗುತ್ತದೆ. ಪೌಷ್ಠಿಕಾಂಶಯುಕ್ತ ಆಹಾರ ದೇಹಕ್ಕೆ ಬೇಕು.
ಎಲ್ಲರಿಗೂ ನಾವು ಸುಂದವಾಗಿ ಕಾಣಬೇಕು ಎಂಬುದು ಇರುತ್ತದೆ. ಹಾಗೆಯೇ ಮುಖ ಸುಂದರವಾಗಿ ಕಾಣಲು ಮೇಕ್ಅಪ್ ಮಾಡಿಕೊಳ್ಳುತ್ತೇವೆ. ಅದೆಷ್ಟೋ ಸೌಂದರ್ಯ ವರ್ಧಕಗಳನ್ನು ಬಳಸುತ್ತೇವೆ. ಹಾಗಿದ್ದಲ್ಲಿ ನೈಸರ್ಗಿಕವಾಗಿ ನಮ್ಮ ತ್ವಚೆಯನ್ನು ಸುಂದರವಾಗಿ ಕಾಪಾಡಿಕೊಳ್ಖಳುವ ಒಂದಿಷ್ಟು ಟಿಪ್ಸ್ಗಳಿ ಇಲ್ಲಿವೆ. 40 ವರ್ಷ ವಯಸ್ಸಾದರೂ 20ರ ಕುವರಿಯಂತೆ ಕಾಣುವ ಹಂಬಲವಿದ್ದರೆ ಈ ನಿಯಮಗಳನ್ನು ಪಾಲಿಸಿರಿ.
ನಲವತ್ತು ವಯಸ್ಸನ್ನು ತಲುಪಿದಾಗ ಚರ್ಮದ ಆರೈಕೆಗೆ ಹೆಚ್ಚಿನ ಗಮನ ಬೇಕು. ಈ ಹಂತದಲ್ಲಿಯೇ ಚರ್ಮವು ವಯಸ್ಸಾದಂತೆ ಕಾಣಲು ಪ್ರಾರಂಭಿಸುತ್ತದೆ. ಹಾಗಿದ್ದಾಗ ದೇಹವು ಹೆಚ್ಚು ಪೋಷ್ಟಿಕಾಂಶವನ್ನು ಬಯಸುತ್ತದೆ. ಯೋಗ ನಿರೋಧಕ ಶಕ್ತಿ ದೇಹದಲ್ಲಿ ಕುಂಠಿತಗೊಳ್ಳುತ್ತಾ ಹೋಗುತ್ತದೆ. ಪೌಷ್ಠಿಕಾಂಶಯುಕ್ತ ಆಹಾರ ದೇಹಕ್ಕೆ ಬೇಕು. ವಿಟಮಿನ್ ಎ ಅಧಿಕವಾಗಿರುವ ಪದಾರ್ಥಗಳನ್ನು, ಹಣ್ಣು ಹಂಪಲುಗಳನ್ನು ಹೆಚ್ಚು ಸೇವಿಸುವುದು ಉತ್ತಮ.
ಸನ್ಸ್ಕ್ರೀನ್ ಬಳಸಿ ಸೂರ್ಯನ ಬೆಳಕಿನ ಕೆಲವು ಕಿರಣಗಳು ಚರ್ಮಕ್ಕೆ ಹಾನಿಕಾರಕ. ಹೊರಗಿನ ಧೂಳಿಗೆ ಮುಖ ಬಾಡುತ್ತದೆ. ಸೂರ್ಯನ ಶಾಖಕ್ಕೆ ಮುಖ ಸುಡುತ್ತದೆ. ಹಾಗಾಗಿ ಬಾಡಿ ಲೋಷನ್ ಅಥವಾ ಸನ್ಸ್ಕ್ರೀನ್ಗಳನ್ನು ಬಳಸುವುದರಿಂದ ಚರ್ಮದ ನೇರವಾಗಿ ಸೂರ್ಯನ ಶಾಖ ತಟ್ಟುವುದನ್ನು ನಿಲ್ಲಿಸಬಹುದು. ಇದರಿಂದ ತ್ವಚೆಯನ್ನು ಕಾಪಾಡಿಕೊಳ್ಳಬಹುದು.
ಫೇಸ್ವಾಶ್ ಮಾಡಿ ದೇಹಕ್ಕೆ ವಯಸ್ಸಾದಂತೆ ಚರ್ಮ ಹೆಚ್ಚು ಸೂಕ್ಷ್ಮವಾಗುತ್ತದೆ. ಹೊರಗಿನ ಧೂಳು ಚರ್ಮಕ್ಕೆ ಅಂಟಿದಾಗ ಅಲರ್ಜಿಯಾಗಬಹುದು. ಹಾಗಾಗಿ ಪ್ರಯಾಣದ ನಂತರ ತಣ್ಣೀರಿನಲ್ಲಿ ಮುಖ ತೊಳೆಯಿರಿ. ಧೂಳಿನಿಂದ ಚರ್ಮವನ್ನು ಹೆಚ್ಚು ರಕ್ಷಿಸಿಕೊಳ್ಳಿ. ಆಗಾಗ ಮುಖಕ್ಕೆ ಮಸಾಜ್ ಮಾಡಿಸಿಕೊಳ್ಳಿ. ಕೈ ಬೆರಳುಗಳಿಂದ ವೃತ್ತಾಕಾರವಾಗಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಇದರಿಂದ ಸ್ನಾಯುಗಳು ಸದೃಢವಾಗುತ್ತದೆ.
ಹೆಚ್ಚು ನೀರು ಕುಡಿಯಿರಿ ಪ್ರತಿ ದಿನ ಕನಿಷ್ಠ ಎರಡರಿಂದ ಮೂರು ಲೀಟರ್ ನೀರು ಕುಡಿಯಿರಿ. ಇದು ಚರ್ಮದ ಮೃದುತ್ವವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆರೋಗ್ಯದಿಂದರಲು ನೀರು ದೇಹಕ್ಕೆ ಒಳ್ಳೆಯದು.
ನಿದ್ದೆ ಮಾಡುವಾಗ ಮೇಕಪ್ ತೆಗೆಯಿರಿ ಪ್ರತಿ ನಿತ್ಯ ಮಲಗುವ ಮುನ್ನ ತಣ್ಣೀರಿನಿಂದ ಮುಖ ತೊಳೆದು ಶುದ್ಧೀಕರಿಸಿಕೊಳ್ಳಿ. ಮೇಕಅಪ್ಗಳಿಗೆ ದೀರ್ಘಕಾಲದವರೆಗೆ ಒಗ್ಗಿಕೊಳ್ಳುವುದರಿಂದ ಚರ್ಮ ಹಾನಿಗೆ ಒಳಗಾಗುತ್ತದೆ. ಮುಖದಲ್ಲಿ ಚಿಕ್ಕ ಗುಳ್ಳೆಗಳಾಗುವುದನ್ನು ತಡೆಯಬಹುದಾಗಿದೆ.
ಸಕ್ಕರೆಯನ್ನು ಕಡಿಮೆ ಬಳಸಿ ಸಕ್ಕರೆ ಪ್ರಮಾಣ ಅಧಿಕವಾದಂತೆ ದೇಹಕ್ಕೆ ಹಾನಿಕಾರಕ. ಸಕ್ಕರೆ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ನೇರವಾಗಿ ಸಕ್ಕರೆ ಉಪಯೋಗಿಸುವುದರ ಬದಲಾಗಿ, ಹೆಚ್ಚು ಹಣ್ಣುಗಳನ್ನು ಸೇವಿಸಿ. ಸಿಹಿಯಾದ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಉತ್ತಮ. ಹಾಗೂ ಚರ್ಮ ಸುಂದರವಾಗಿ ಕಾಣಲು ಸಹಾಯಕ.
ಇದನ್ನೂ ಓದಿ: Health: ಲಿಂಬು ನೀರು ಕುಡಿಯುವುದರಿಂದ ಎಷ್ಟೆಲ್ಲ ಉಪಯೋಗಗಳಿವೆ ನೋಡಿ..
ಇದನ್ನೂ ಓದಿ: ನಿಮ್ಮಲ್ಲಿ Health Insurance ಇದ್ಯಾ, ಹಾಗಿದ್ರೆ ನೀವು ಈ ಸುದ್ದಿ ಓದಲೇಬೇಕು