Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಜಮೀನಿನ ರಸ್ತೆ ವಿವಾದ; ಠಾಣೆ ಮುಂದೆ ವಾಗ್ವಾದ; 420 ಯಶ್ ಎಂದು ಗ್ರಾಮಸ್ಥರಿಂದ ಧಿಕ್ಕಾರ

ಕೆಜಿಎಫ್‌-2, ರಾಕಿಂಗ್ ಸ್ಟಾರ್‌ನ ಇದೇ ಚಿತ್ರ ರಿಲೀಸ್‌ಗೂ ಮುನ್ನವೇ ಅಬ್ಬರಿಸುತ್ತಿದೆ. ಟೀಸರ್‌ನಲ್ಲೇ ಸಂಚಲನ ಮೂಡಿಸಿದೆ. ಆದ್ರೆ ಅದೇ ರಾಕಿ ಭಾಯ್‌ ನಿನ್ನೆ ಫುಲ್‌ ಗರಂ ಆಗಿದ್ರು. ತಮ್ಮ ತಂಟೆಗೆ ಬಂದವರ ಮೇಲೆ ಆಕ್ರೋಶಗೊಂಡಿದ್ರು. ಅಷ್ಟಕ್ಕೂ ಆ ಪೊಲೀಸ್‌ ಠಾಣೆ ಮುಂದೆ ಬಿಗ್‌ ಹೈಡ್ರಾಮ ನಡೆದುಹೋಯ್ತು.

ಯಶ್ ಜಮೀನಿನ ರಸ್ತೆ ವಿವಾದ; ಠಾಣೆ ಮುಂದೆ ವಾಗ್ವಾದ; 420 ಯಶ್ ಎಂದು ಗ್ರಾಮಸ್ಥರಿಂದ ಧಿಕ್ಕಾರ
ಯಶ್ ವಿರುದ್ಧ ಧಿಕ್ಕಾರ ಕೂಗಿದ ಗ್ರಾಮಸ್ಥರು
Follow us
ಆಯೇಷಾ ಬಾನು
| Updated By: Digi Tech Desk

Updated on:Mar 12, 2021 | 10:21 AM

ಹಾಸನ: ಒಂದ್ಕಡೆ ರಾಕಿಂಗ್ ಸ್ಟಾರ್ ಯಶ್‌ಗೆ ಅಭಿಮಾನಿಗಳ ಜೈಕಾರ ಹಾಕಿದ್ರೆ ಮತ್ತೊಂದ್ಕಡೆ ಯಶ್‌ಗೆ ಧಿಕ್ಕಾರ ಅಂತ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ರು. ಸ್ಟಾರ್‌ ನಟನ ಕಾರನ್ನೇ ಅಡ್ಡಗಟ್ಟಿ ತಮ್ಮ ಕೋಪವನ್ನು ತೋರಿಸಿದ್ದರು. ಪೊಲೀಸ್ ಠಾಣೆ ಮುಂದೆಯೇ ಧಿಕ್ಕಾರ.. ಮಾರ್ಚ್ 09ರಂದು ಹಾಸನ ಜಿಲ್ಲೆ ದುದ್ದ ಪೊಲೀಸ್‌ ಠಾಣೆ ಎದುರು ಬಿಗ್‌ ಹೈಡ್ರಾಮಾವೇ ನಡೆದುಹೋಯ್ತು.

ಠಾಣೆಯಲ್ಲೇ ರಾಂಗ್ ಆದ ರಾಕಿಂಗ್‌ ಸ್ಟಾರ್ ಯಶ್ ಹಾಸನ ಜಿಲ್ಲೆ ದುದ್ದ ಪೊಲೀಸ್ ಠಾಣೆಯಲ್ಲಿ ನಿನ್ನೆ(ಮಾರ್ಚ್ 09) ರಾಕಿಂಗ್‌ ಸ್ಟಾರ್ ಯಶ್ ಪ್ರತ್ಯಕ್ಷವಾಗಿದ್ರು. ಕೆಜಿಎಫ್‌ 2 ಚಿತ್ರದ ಬ್ಯುಸಿ ನಡುವೆಯೂ ಯಶ್‌ ಪೊಲೀಸ್ ಠಾಣೆಗೆ ಬಂದಿದ್ದರು. ರಸ್ತೆ ಮಾಡೋದಕ್ಕೆ ಜೆಸಿಸಿ ಸಿದ್ಧವಾಗ್ತಿದ್ದಂತೆ ಗ್ರಾಮಸ್ಥರು ಆಕ್ರೋಶಗೊಂಡ್ರು. ನಟ ಯಶ್‌ ತಂದೆ, ತಾಯಿ ಕೂಡ ಇಲ್ಲಿದ್ರು. ಇದೇ ಚಿತ್ರಣ ನಟ ಯಶ್‌ರನ್ನ ಆಕ್ರೋಶಗೊಳ್ಳುವಂತೆ ಮಾಡಿತ್ತು. ಅಷ್ಟಕ್ಕೂ ದುದ್ದ ಹೋಬಳಿಯ ತಿಮಲಾಪುರ ಗ್ರಾಮದಲ್ಲಿ 8 ವರ್ಷದ ಹಿಂದೆ ನಟ ಯಶ್‌, 50ಕ್ಕೂ ಹೆಚ್ಚು ಎಕರೆ ಜಮೀನು ಖರೀದಿ ಮಾಡಿದ್ದಾರೆ.

ತೆಂಗು, ಮಾವು ಬೆಳೆದಿರೋ ಯಶ್‌ ಇಲ್ಲಿ ಫಾರ್ಮ್‌ ಹೌಸ್‌ ಕೂಡ ಮಾಡಿದ್ದಾರೆ. ಈ ಫಾರ್ಮ್‌ಹೌಸ್‌ಗೆ ರಸ್ತೆ ನಿರ್ಮಿಸಲು ನಿನ್ನೆ ಜೆಸಿಬಿ ತರಿಸಿದ್ರು. ಆದ್ರೆ ಜೆಸಿಬಿ ಎಂಟ್ರಿಯಾಗ್ತಿದ್ದಂತೆ ಗ್ರಾಮಸ್ಥರು ರೊಚ್ಚಿಗೆದ್ದಿದ್ರು. ಜೆಸಿಬಿ ಚಾಲಕರ ಜೊತೆ ಏಕಾಏಕಿ ವಾಗ್ವಾದಕ್ಕೆ ಇಳಿದುಬಿಟ್ರು. ಈ ಸುದ್ದಿ ತಿಳಿಯುತ್ತಿದ್ದಂತೆ ಯಶ್ ತಾಯಿ ಪುಷ್ಪ ಹಾಗೂ ತಂದೆ ಅರುಣ್‌ ಕುಮಾರ್‌ ಕೂಡ ಎಂಟ್ರಿಯಾಗಿದ್ರು. ಆದ್ರೆ ಅವರ ಸಮ್ಮುಖದಲ್ಲೂ ಗಲಾಟೆ ನಡೆದುಬಿಡ್ತು.

ಇಷ್ಟಾಗ್ತಿದ್ದಂತೆ ಗಲಾಟೆ ಬಗ್ಗೆ ಸ್ಥಳ ಪರಿಶೀಲನೆ ಮಾಡೋಕೆ ದುದ್ದ ಪೊಲೀಸರು ಕೂಡ ಎಂಟ್ರಿಯಾಗಿದ್ರು. ಈ ವೇಳೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ರು. ಫಾರ್ಮ್‌ಹೌಸ್‌ಗೆ ಈಗಾಗಲೇ ಎರಡು ಕಡೆ ರಸ್ತೆ ಇದೆ. ಈಗ ಈಶಾನ್ಯ ಮೂಲೆಗೆ ರಸ್ತೆ ಬೇಕು ಅಂತ ನಮ್ಮ ಜಮೀನಲ್ಲೇ ರಸ್ತೆ ಮಾಡ್ತಿದ್ದಾರೆ ಅಂತ ಆರೋಪಿಸಿದ್ರು.

ಇಷ್ಟೆಲ್ಲಾ ಸೀನ್‌ ಕ್ರಿಯೇಟ್ ಆಗ್ತಿದ್ದಂತೆ ತಮ್ಮ ತಂದೆ ತಾಯಿ ಮುಂದೆ ಗಲಾಟೆಯಾಗ್ತಿದ್ದಂತೆ ಕೆರಳಿಹೋದ ನಟ ಯಶ್‌ ಹಾಸನಕ್ಕೆ ಎಂಟ್ರಿಕೊಟ್ಟಿದ್ರು. ಮೊದಲು ಫಾರ್ಮ್‌ಹೌಸ್‌ಗೆ ತೆರಳಿ ಮಾಹಿತಿ ಪಡೆದುಕೊಂಡ್ರು. ಬಳಿಕ ದುದ್ದ ಪೊಲೀಸ್ ಠಾಣೆಗೆ ಭೇಟಿಕೊಟ್ರು. ಬಳಿಕ ಮಾತನಾಡಿದ ನಟ ಯಶ್‌, ವರ್ಷದ ಹಿಂದೆಯೇ ಸಮಸ್ಯೆ ಬಗೆಹರಿದಿದೆ. ಆದ್ರೂ ಕೆಲವರು ನಮ್ಮ ತಂದೆ ತಾಯಿಗೆ ತೊಂದ್ರೆ ಕೊಡ್ತಿದ್ದಾರೆ. ಇದನ್ನ ನೋಡಿ ನಾನು ಸುಮ್ಮನಿರೋದಕ್ಕೆ ಆಗಲ್ಲ. ನಾನೂ ಹಾಸನದವನೇ. ನಾನು ಈ ರಾಜ್ಯದವನೇ.. ಎಲ್ಲಿ ಬೇಕಾದ್ರೂ ಜಮೀನು ಮಾಡ್ತೀನಿ ಅಂತ ಗರಂ ಆಗಿದ್ರು.

ಪೊಲೀಸ್ ಠಾಣೆ ಮುಂದೆಯೇ ಹೈಡ್ರಾಮಾ ಇನ್ನು ಘಟನೆ ಬಗ್ಗೆ ಎರಡೂ ಕಡೆಯಿಂದ್ಲೂ ಕೇಸ್ ದಾಖಲಾಗಿದೆ. ಈ ಬಗ್ಗೆ ಪೊಲೀಸರಿಂದಲೂ ಮಾಹಿತಿ ಪಡೆದ ಯಶ್ ವಾಪಸ್ ಹೊರಟಿದ್ರು. ಆದ್ರೆ ಯಶ್‌ ಕಾರನ್ನ ಅಡ್ಡಗಟ್ಟಿದ್ದ ಗ್ರಾಮಸ್ಥರು 420 ಯಶ್ ಎಂದು ಧಿಕ್ಕಾರ ಕೂಗಿದ್ರೆ ಅಭಿಮಾನಿಗಳು ಜೈಕಾರ ಹಾಕಿದ್ರು. ಪರಿಸ್ಥಿತಿ ಕೈಮೀರುತ್ತಿರೋದನ್ನ ಅರಿತ ಪೊಲೀಸರು ಸ್ಥಳೀಯರನ್ನ ಚದುರಿಸಿ ತಿಳಿಗೊಳಿಸಿದ್ರು.

ಒಟ್ನಲ್ಲಿ ಜಮೀನಿನ ರಸ್ತೆ ವಿವಾದ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇದು ಮುಂದೆ ಯಾವ ಹಂತಕ್ಕೆ ಬಂದು ನಿಲ್ಲುತ್ತೆ ಅನ್ನೋದನ್ನ ಕಾದುನೋಡ್ಬೇಕಿದೆ.

ಇದನ್ನೂ ಓದಿ: ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರವಾಗಿ ಹಾಸನದಲ್ಲಿ ನಟ ಯಶ್ ತಂದೆ-ತಾಯಿ, ಗ್ರಾಮಸ್ಥರ ನಡುವೆ ಗಲಾಟೆ

ದುಡ್ಡು ಮಾಡೋಕೆ ಇಲ್ಲಿಗೆ ಬಂದಿಲ್ಲ, ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಮುಖ ನೋಡಿ ಸುಮ್ಮನೆ ಕೂರೋಕಾಗಲ್ಲ: ಯಶ್​

Published On - 7:27 am, Wed, 10 March 21