ಯುವಕರನ್ನು ಕಿಡ್ನಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್; ಕರ್ನಾಟಕ ಜನಾಭಿವೃದ್ಧಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸೇರಿ ಮೂವರು ಅರೆಸ್ಟ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹೊರವಲಯ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಿಂದ ದೀಪೆ ನುರಾನ್, ಬಿಕಾಸ್ ಎಂಬ ಇಬ್ಬರು ಯುವಕರನ್ನು ಕರ್ನಾಟಕ ಜನಾಭಿವೃದ್ಧಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಾಬುರೆಡ್ಡಿ ಮತ್ತು ಸಂಗಡಿಗರು ತಮ್ಮ ಸ್ವಂತ ವಾಹನದಲ್ಲೇ ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ.

ಯುವಕರನ್ನು ಕಿಡ್ನಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್; ಕರ್ನಾಟಕ ಜನಾಭಿವೃದ್ಧಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸೇರಿ ಮೂವರು ಅರೆಸ್ಟ್
ಕಿಡ್ನಾಪ್ ಆಗಿದ್ದ ಯುವಕರು
Follow us
ಆಯೇಷಾ ಬಾನು
| Updated By: Digi Tech Desk

Updated on:Mar 10, 2021 | 9:13 AM

ದೇವನಹಳ್ಳಿ: ಕರ್ನಾಟಕ ಜನಾಭಿವೃದ್ಧಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷನಿಂದಲೇ ಯುವಕರ ಕಿಡ್ನಾಪ್ ಮಾಡಲಾಗಿದೆಯಂತೆ. ಯುವಕರಿಬ್ಬರನ್ನು ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪಕ್ಕೆ ಸಂಬಂಧಿಸಿ ಕರ್ನಾಟಕ ಜನಾಭಿವೃದ್ಧಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಾಬುರೆಡ್ಡಿ, ಸಹಚರರಾದ ಲಕ್ಷ್ಮೀಪತಿ, ನಾಗೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹೊರವಲಯ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಿಂದ ದೀಪೆ ನುರಾನ್, ಬಿಕಾಸ್ ಎಂಬ ಇಬ್ಬರು ಯುವಕರನ್ನು ಕರ್ನಾಟಕ ಜನಾಭಿವೃದ್ಧಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಾಬುರೆಡ್ಡಿ ಮತ್ತು ಸಂಗಡಿಗರು ತಮ್ಮ ಸ್ವಂತ ವಾಹನದಲ್ಲೇ ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಇಂತಹದೊಂದು ಘಟನೆ ಮಾರ್ಚ್ 09ರ ಬೆಳಗ್ಗೆ 10ರ ಸುಮಾರಿಗೆ ಯುವಕರ ಅಪಹರಣ ನಡೆದಿದೆ.

Devanahalli Kidnap

ಯುವಕರಿಬ್ಬರನ್ನು ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪಕ್ಕೆ ಸಂಬಂಧಿಸಿ ಕರ್ನಾಟಕ ಜನಾಭಿವೃದ್ಧಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಾಬುರೆಡ್ಡಿ, ಸಹಚರರಾದ ಲಕ್ಷ್ಮೀಪತಿ, ನಾಗೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ

ಕಿಡ್ನ್ಯಾಪ್ ಬಳಿಕ ಮುಳಬಾಗಿಲು ಬಳಿಯ ತೋಪಿನಲ್ಲಿ ಇಬ್ಬರನ್ನೂ ಕೂಡಿಟ್ಟಿದ್ದರು. ಬಳಿಕ ಯುವಕರು ಕೆಲಸ ಮಾಡುವ ಫ್ಯಾಕ್ಟರಿ ಮಾಲೀಕರಿಗೆ ಕರೆ ಮಾಡಿ ಹಣ ತರುವಂತೆ ಆರೋಪಿಗಳು ಡಿಮ್ಯಾಂಡ್ ಮಾಡಿದ್ದರು. ಈ ಬಗ್ಗೆ ಕಾರ್ಖಾನೆ ಮಾಲೀಕ ಪೊಲೀಸರ ಮೊರೆ ಹೋಗಿದ್ದ. ಯುವಕರನ್ನು ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಡಲಾಗಿದೆ ಎಂದು ಪೊಲೀಸರಿಗೆ ವಿಷಯ ತಿಳಿಸಿದ್ದ. ಆರೋಪಿಗಳ ಭೇಟೆಗೆ ತಿಳಿದ ಖಾಕಿ ಅಪಹರಣ ಮಾಡಿದ 5 ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಿದೆ.

ಪಿಎಸ್ಐ ರಮೇಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಎಡೆಮುರಿಕಟ್ಟಿದೆ. ಕರ್ನಾಟಕ ಜನಾಭಿವೃದ್ಧಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಾಬುರೆಡ್ಡಿ, ಸಹಚರರಾದ ಲಕ್ಷ್ಮೀಪತಿ, ನಾಗೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಕಾರಿಗೆ ಬ್ಲಾಕ್ ಗ್ಲಾಸ್ ಹಾಕಿಸಿ ಯಾರಿಗೂ ಕಾಣದಂತೆ ಕಿಡ್ನಾಪ್ ಮಾಡಲಾಗಿತ್ತು. ಆರೋಪಿಗಳು ಕರ್ನಾಟಕ ಜನಾಭಿವೃದ್ದಿ ರಕ್ಷಣಾ ವೇದಿಕೆ ಅಂತ ಮಾಡಿಕೊಂಡು ಅಮಾಯಕರ ಜೀವ ಹಿಂಡುತ್ತಿದ್ದರು ಎಂದು ತಿಳಿದು ಬಂದಿದೆ. ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಮೂವರನ್ನು ವಶಕ್ಕೆ ಪಡೆದು ಸೂಲಿಬೆಲೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮತ್ತಷ್ಟು ಕಡೆ ಇದೇ ರೀತಿ ಹಣ ಕಿತ್ತಿರೂ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಬೆಂಗಳೂರು; ಆರ್ಥಿಕ ಸಮಸ್ಯೆ, ವೇತನ ಹೆಚ್ಚಳ ಮಾಡದಿದ್ದಕ್ಕೆ ಕಂಪನಿಯಲ್ಲೇ ಉದ್ಯೋಗಿ ಆತ್ಮಹತ್ಯೆ

Published On - 8:18 am, Wed, 10 March 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ