BBK8: ‘ಮಂಜ ಯಾವತ್ತಿದ್ರೂ ನನ್ನವನು’: ದಿವ್ಯಾ ಉರುಡುಗಗೆ ಎಚ್ಚರಿಕೆ ನಿಡಿದ ದಿವ್ಯಾ ಸುರೇಶ್​!

ನಾನು ನಿಂಗಾಗಿ ಎಷ್ಟೆಲ್ಲ ಸೇವೆ ಮಾಡುತ್ತಿದ್ದೇನೆ. ಈ ರೀತಿಯ ಸೇವೆಗಳನ್ನು ನಾನು ನನ್ನ ಹೆಂಡತಿಗೆ ಮಾಡಬೇಕು ಎನ್ನುವ ಆಸೆ ಇತ್ತು ಎಂದು ಹೇಳಿದ್ದಾರೆ

BBK8: 'ಮಂಜ ಯಾವತ್ತಿದ್ರೂ ನನ್ನವನು': ದಿವ್ಯಾ ಉರುಡುಗಗೆ ಎಚ್ಚರಿಕೆ ನಿಡಿದ ದಿವ್ಯಾ ಸುರೇಶ್​!
ದಿವ್ಯಾ ಸುರೇಶ್​-ದಿವ್ಯಾ ಉರುಡುಗ
Follow us
ರಾಜೇಶ್ ದುಗ್ಗುಮನೆ
|

Updated on:Mar 09, 2021 | 11:06 PM

ಬಿಗ್​ ಬಾಸ್ ಮನೆಯಲ್ಲಿ ಲ್ಯಾಗ್​ ಮಂಜು ಮತ್ತು ದಿವ್ಯಾ ಸುರೇಶ್​ ನಡುವಣ ಪ್ರೀತಿ ವಿಚಾರ ದಿನಕಳೆದಂತೆ ಹೊಸ ಹೊಸ ಚಿಗುರುಗಳೊಂದಿಗೆ ಹೆಮ್ಮರವಾಗಿ ಬೆಳೆಯುತ್ತಿದೆ. ಮೊದಲ ದಿನದಿಂದಲೇ ಆಪ್ತರಾಗಿ ವರ್ತಿಸುತ್ತಿದ್ದ ಈ ಜೋಡಿ, ಈಗ ಮತ್ತಷ್ಟು ಹತ್ತಿರವಾಗಿದ್ದಾರೆ. ಕನ್ನಡ ಬಿಗ್​ ಬಾಸ್​ ಮನೆಯಲ್ಲಿ 9ನೇ ದಿನ ಮತ್ತೊಂದು ಘಟನೆ ನಡೆದಿದೆ. ಹೆಂಡತಿಗೆ ಮಾಡುತ್ತಿದ್ದ ಸೇವೆಗಳನ್ನು ನಾನು ದಿವ್ಯಾಗೆ ಮಾಡುತ್ತಿದ್ದೇನೆ ಎಂದು ಮಂಜು ಹೇಳಿದ್ದಾರೆ. 9ನೇ ದಿನ ಬಿಗ್​ ಬಾಸ್​ ಮನೆಯಲ್ಲಿ ಎಲ್ಲರೂ ಕೂತಿದ್ದರು. ಆಗ ಒಬ್ಬರಿಗೊಬ್ಬರು ತಲೆಗೆ ಎಣ್ಣೆ ಹಾಕುತ್ತಿದ್ದರು. ಈ ವೇಳೆ ಮಂಜು ಪ್ರೀತಿಯಿಂದ ದಿವ್ಯಾಗೆ ಎಣ್ಣೆ ಹಾಕಿ ಮಸಾಜ್​ ಮಾಡುತ್ತಿದ್ದರು. ಎಲ್ಲರೂ ಇದನ್ನು ಕೂತು ನೋಡುತ್ತಿದ್ದರು. ಈ ವೇಳೆ ಮಂಜು, ನಾನು ನಿಂಗಾಗಿ ಎಷ್ಟೆಲ್ಲ ಸೇವೆ ಮಾಡುತ್ತಿದ್ದೇನೆ. ಈ ರೀತಿಯ ಸೇವೆಗಳನ್ನು ನಾನು ನನ್ನ ಹೆಂಡತಿಗೆ ಮಾಡಬೇಕು ಎನ್ನುವ ಆಸೆ ಇತ್ತು ಎಂದು ಹೇಳಿದ್ದಾರೆ. ಈ ಮೂಲಕ ದಿವ್ಯಾ ಮೇಲೆ ಪ್ರೀತಿ ಇರುವುದನ್ನು ಮತ್ತೊಮ್ಮೆ ಹಂಚಿಕೊಂಡಿದ್ದರು.

ಮಂಜುಗೆ ದಿವ್ಯಾ ಉರುಡುಗ ಎಣ್ಣೆ ಹಚ್ಚಿ ಮಸಾಜ್​ ಮಾಡುತ್ತಿದ್ದರು. ದಿವ್ಯಾ ಸುರೇಶ್​ಗೆ ಮಂಜು ಎಣ್ಣೆ ಹಚ್ಚುತ್ತಿದ್ದರು. ಈ ವೇಳೆ ಮಂಜು, ದಿವ್ಯಾ ಯಾವತ್ತಿದ್ರೂ ನನ್ನವನು ಎಂದಿದ್ದಾರೆ.

ಮಂಜು ಮೇಲೆ ದಿವ್ಯಾಗೆ ಏಕಿಷ್ಟು ಲವ್​? ದಿವ್ಯಾ ಶಾಲೆಗೆ ಹೋಗುತ್ತಿದ್ದಾಗ ಅವರಿಗೆ ಮಂಜುನಾಥ್​ ಅಂತ ಒಬ್ಬ ಅತ್ಯುತ್ತಮ ಫ್ರೆಂಡ್ ಇದ್ದನಂತೆ. ಅವನ ಜೊತೆ ಈಗ ದಿವ್ಯಾ ಹೆಚ್ಚು ಸಂಪರ್ಕ ಇಟ್ಟುಕೊಂಡಿಲ್ಲ. ಆದರೆ ಬಾಲ್ಯದಲ್ಲಿ ಅವರಿಬ್ಬರ ನಡುವೆ ಸ್ನೇಹ ಗಟ್ಟಿಯಾಗಿತ್ತು.

‘ಅವನು ದೇವಸ್ಥಾನದಲ್ಲಿ ಪೂಜೆ ಮಾಡ್ತಾ ಇದ್ದ. ನನಗೆ ಹುಡುಗರ ಜೊತೆ ಒಳ್ಳೆಯ ಬಾಂಡಿಂಗ್ ಇರುತ್ತಿತ್ತು. ಅದೇ ಥರ ಅವನ ಜೊತೆಗೂ ಇರುತ್ತಿದ್ದೆ. ತುಂಬ ಕಾಮಿಡಿ ಮಾಡುತ್ತಿದ್ದ. ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ. ಅವನ ಹೆಸರನ್ನು ನಾನು ಮಂಜ್ ಎಂದು ಕರೆಯುತ್ತಿದ್ದೆ. ಕ್ಲಾಸ್‌ ಅಲ್ಲಿ ಎದ್ದು ನಿಂತಾಗ ನಾನು ಅವನ ಕೆಳಗೆ ಕೈವಾರ ಇಟ್ಟುಬಿಡುತ್ತಿದ್ದೆ. ನನ್ನ ಲೈಫ್‌ನಲ್ಲಿ ಮಂಜುನಾಥ್ ಅನ್ನೋರು ತುಂಬ ಒಳ್ಳೆಯ ಸ್ಥಾನ ಪಡೆದುಕೊಳ್ಳುತ್ತಾರೆ. ಅವರ ಮೇಲೆ ಪ್ರೀತಿ ಉಕ್ಕಿ ಬರುತ್ತೆ ನಂಗೆ’ ಎಂದು ದಿವ್ಯಾ ಸುರೇಶ್‌ ಹೇಳಿದ್ದರು.

ಇದನ್ನೂ ಓದಿ: Bigg Boss Kannada: ಮಂಜುಗೆ ‘ಐ ಲವ್​ ಯೂ’ ಎಂದ ದಿವ್ಯಾ ಉರುಡುಗ! ಬಿಗ್​ ಬಾಸ್​ನಲ್ಲಿ ಏನು ನಡೀತಾ ಇದೆ?

Published On - 10:08 pm, Tue, 9 March 21