ಬೇಳೆ ಕಾಳು ಮಾರಿ ಸ್ವಾವಲಂಬನೆ ಜೀವನ ನಡೆಸುತ್ತಿರುವ 98ರ ಶ್ರಮ ಜೀವಿ; ಮಾದರಿ ಬದುಕಿಗೆ ನೆಟ್ಟಿಗರ ಶ್ಲಾಘನೆ

ಪ್ರತಿದಿನ ವಿಜಯ್ ಪಾಲ್ ಸಿಂಗ್ ಹಳ್ಳಿಯಿಂದ ಆಚೆಗೆ ನಡೆದುಕೊಂಡು ಬಂದು ತಮ್ಮ ಅಂಗಡಿಯನ್ನು ನಡೆಸುತ್ತಾರೆ. 98 ವರ್ಷ ವಯಸ್ಸಾಗಿದ್ದರೂ ಯಾವುದಕ್ಕೂ ಕಡಿಮೆ ಇಲ್ಲದ ಇವರ ಧೈರ್ಯವನ್ನು ಮೆಚ್ಚಿ ಹೆಮ್ಮೆ ಪಡುತ್ತಾರೆ ಜನರು.

ಬೇಳೆ ಕಾಳು ಮಾರಿ ಸ್ವಾವಲಂಬನೆ ಜೀವನ ನಡೆಸುತ್ತಿರುವ 98ರ ಶ್ರಮ ಜೀವಿ; ಮಾದರಿ ಬದುಕಿಗೆ ನೆಟ್ಟಿಗರ ಶ್ಲಾಘನೆ
98 ವರ್ಷದ ವಿಜಯ್ ಪಾಲ್​ ಸಿಂಗ್​
Follow us
shruti hegde
| Updated By: ಆಯೇಷಾ ಬಾನು

Updated on: Mar 10, 2021 | 6:45 AM

ಉತ್ತರ ಪ್ರದೇಶ: ಇಲ್ಲೋರ್ವರು 98 ವರ್ಷ ವಯಸ್ಸಾಗಿದ್ದರೂ, ಯಾರ ಹಂಗಿನಲ್ಲಿ ನಾನು ಬದುಕುವುದಿಲ್ಲ ಎನ್ನುತ್ತಾ ಎಲ್ಲರಿಗೆ ಮಾದರಿಯಾಗಿದ್ದಾರೆ. ಅಷ್ಟೊಂದು ವಯಸ್ಸಾಗಿದ್ದರೂ ತನ್ನ ವಯಸ್ಸಿಗೆ ಕುಗ್ಗದೇ ಬೇಳೆ ಕಾಳು, ಕಡಲೆ ಮಸಾಲೆ ಚಾಟ್​ ಅಂಗಡಿ ಇಟ್ಟುಕೊಂಡು ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ 98 ವರ್ಷದ ವಿಜಯ್ ಪಾಲ್ ಸಿಂಗ್. ಉತ್ತರ ಪ್ರದೇಶದ ರಾಯ್​ಬರೇಲಿ ಮೂಲದ 98 ವರ್ಷದ ವಿಜಯ್ ಪಾಲ್ ಸಿಂಗ್ ಸ್ವಂತ ಅಂಗಡಿಯನ್ನು ಇಟ್ಟು ತಮ್ಮ ಖರ್ಚನ್ನು ತಾವೇ ನಿಭಾಯಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಚಿಕ್ಕದಾದ ಸ್ವಂತ ಅಂಗಡಿಯಲ್ಲಿ ಕಡಲೆ ಮಸಾಲೆ ಚಾಟ್​ ಸಿದ್ಧಪಡಿಸಿ ಎಲ್ಲರಿಗೆ ಬಾಯಿ ರುಚಿ ಬರಿಸುವ ಇವರ ಅಂಗಡಿ ಎಲ್ಲಡೆ ಪ್ರಚಾರ ಕಾಣುತ್ತಿದೆ.

ಇವರನ್ನು ನೋಡಿದರೆ ಎಲ್ಲರೂ ಆಶ್ಚರ್ಯ ಚಕಿತರಾಗುವುದಂತೂ ಸತ್ಯ. ಎಲ್ಲರಿಗೆ ಮಾದರಿಯಾಗಿ, ತಮ್ಮ ಕಾಲಿನ ಮೇಲೆ ತಾವು ನಿಂತು, ತಮ್ಮ ವಯಸ್ಸಿನ ಬಗ್ಗೆ ಚಿಂತಿಸದೇ ಕಡಲೆ ಚಾಟ್ ಮಸಾಲೆ ಎಂಬ ಖಾದ್ಯವನ್ನು ತಯಾರಿಸಿ ಮಾರಾಟ ಮಾಡುವುದು ಇವರ ಪ್ರತಿನಿತ್ಯದ ಕಾಯಕ. ಅಷ್ಟು ವಯಸ್ಸಾಗಿದ್ದರೂ ಅಂಗಡಿ ನಡೆಸುತ್ತಾ ಜೀವನ ಸಾಗಿಸುತ್ತಿರುವುದನ್ನು ಕಂಡು ಆಶ್ಚರ್ಯ ಪಟ್ಟ ಗ್ರಾಹಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಪ್ರತಿದಿನ ವಿಜಯ್ ಪಾಲ್ ಸಿಂಗ್ ಹಳ್ಳಿಯಿಂದ ಆಚೆಗೆ ನಡೆದುಕೊಂಡು ಬಂದು ತಮ್ಮ ಅಂಗಡಿಯನ್ನು ನಡೆಸುತ್ತಾರೆ. 98 ವರ್ಷ ವಯಸ್ಸಾಗಿದ್ದರೂ ಯಾವುದಕ್ಕೂ ಕಡಿಮೆ ಇಲ್ಲದ ಇವರ ಧೈರ್ಯವನ್ನು ಮೆಚ್ಚಿ ಹೆಮ್ಮೆ ಪಡುತ್ತಾರೆ ಜನರು.

ವಿಜಯ್ ಸಿಂಗ್​ ಅವರನ್ನು ನೋಡಿದ ಜನರಿಗೆ ಹಲವಾರು ಪ್ರಶ್ನೆಗಳು ಎದುರಾಗಿವೆ. ಈ ವಯಸ್ಸಿನಲ್ಲಿ ನೀವು ಇನ್ನೂ ಏಕೆ ಕೆಲಸ ಮಾಡುತ್ತಿದ್ದೀರಾ ಎಂದು ಬರುವ ಗ್ರಾಹಕರು ಪ್ರಶ್ನೆ ಮಾಡಿದಾಗ, ಆರೋಗ್ಯವಾಗಿರಲು ಕೆಲಸ ಮಾಡುತ್ತೇನೆ. ಮನೆಯಲ್ಲಿ ಸುಮ್ಮನೆ ಕೂರಲು ನನಗೆ ಇಷ್ಟವಿಲ್ಲ ಎಂದು ವಿಜಯ್​ ಸಿಂಗ್​ ಉತ್ತರಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಜಯ್​ ಸಿಂಗ್​ ಜೀವನವು ಇತರರಿಗೆ ಸ್ಫೂರ್ತಿದಾಯಕ. ವಿಜಯ್ ಪಾಲ್ ಸಿಂಗ್ ಅವರ ವೀಡಿಯೊ ಗಮನಿಸಿದ ಉತ್ತರ ಪ್ರದೇಶ ಸರ್ಕಾರ ಅವರ ಕೆಲಸವನ್ನು ಹೆಮ್ಮೆಯಿಂದ ಗೌರವಿಸಿದೆ. ವಿಜಯ್​ ಸಿಂಗ್ ಅವರನ್ನು ಜಿಲ್ಲಾ ಮೆಜೆಸ್ಟ್ರೇಟ್ ಕಚೇರಿಗೆ ಆಹ್ವಾನಿಸಿ 11,000 ರೂಪಾಯಿ, ವಾಕಿಂಗ್ ಸ್ಟಿಕ್ ಮತ್ತು ಪಡಿತರ ಚೀಟಿ ನೀಡಿ ಸರ್ಕಾರ ಸಹಾಯ ಮಾಡಿದೆ.

ಇದನ್ನೂ ಓದಿ: ಕರಿಚಿರತೆ ಅಷ್ಟೊಂದು ವೇಗವಾಗಿ ಮರವೇರಿದ್ದೇಕೆ..? ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಇದನ್ನೂ ಓದಿ: Caught on Camera: ದೇವಸ್ಥಾನದ ಆನೆಗೆ ಮನಬಂದಂತೆ ಥಳಿಸಿದ ಮಾವುತರು, ಮನಕಲಕುವ ವಿಡಿಯೋ ವೈರಲ್

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ