Bigg Boss Kannada: ಮಂಜುಗೆ ‘ಐ ಲವ್​ ಯೂ’ ಎಂದ ದಿವ್ಯಾ ಉರುಡುಗ! ಬಿಗ್​ ಬಾಸ್​ನಲ್ಲಿ ಏನು ನಡೀತಾ ಇದೆ?

Divya Uruduga: ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಮಂಜು ಪಾವಗಡ ಸಖತ್​ ಗಮನ ಸೆಳೆಯುತ್ತಿದ್ದಾರೆ. ಅಚ್ಚರಿ ಎಂದರೆ ಲವ್​ ಸ್ಟೋರಿ ಕಾರಣಕ್ಕಾಗಿ ಅವರು ಹೆಚ್ಚು ಹೈಲೈಟ್​ ಆಗುತ್ತಿದ್ದಾರೆ.

Bigg Boss Kannada: ಮಂಜುಗೆ ‘ಐ ಲವ್​ ಯೂ’ ಎಂದ ದಿವ್ಯಾ ಉರುಡುಗ! ಬಿಗ್​ ಬಾಸ್​ನಲ್ಲಿ ಏನು ನಡೀತಾ ಇದೆ?
ಮಂಜು ಪಾವಗಡ - ದಿವ್ಯಾ ಉರುಡುಗ
Follow us
ಮದನ್​ ಕುಮಾರ್​
| Updated By: Digi Tech Desk

Updated on:Mar 09, 2021 | 2:52 PM

ಬಹುತೇಕ ಮಂಜು ಪಾವಗಡ ಅವರೇ ಈ ಬಾರಿ ಬಿಗ್​ ಬಾಸ್​ ಗೆಲ್ಲಬಹುದು ಎಂಬ ಅಭಿಪ್ರಾಯ ಎಲ್ಲರಲ್ಲೂ ಮೂಡುತ್ತಿದೆ. ಮನೆಯ ಎಲ್ಲ ಸದಸ್ಯರನ್ನೂ ನಗಿಸುತ್ತ, ಟಾಸ್ಕ್​ಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತ ಅವರು ಹೆಚ್ಚು ಸ್ಕೋರ್​ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರ ಪ್ರೇಮ್​ ಕಹಾನಿ ಕೂಡ ಎತ್ತೆತ್ತಲೋ ಹೋಗುತ್ತಿದೆ. ಇಷ್ಟು ದಿನ ದಿವ್ಯಾ ಸುರೇಶ್​ ಜೊತೆ ಸಲುಗೆಯಿಂದ ನಡೆದುಕೊಳ್ಳುತ್ತಿದ್ದ ಅವರು ಈಗ ದಿವ್ಯಾ ಉರುಡುಗ ಕಡೆಗೆ ಮನಸ್ಸು ಹರಿಸಿದ್ದಾರೆ!

ಸೋಮವಾರದ (ಮಾ.8) ಎಪಿಸೋಡ್​ನಲ್ಲಿ ಸ್ಪರ್ಧಿಗಳಿಗೆ ಒಂದು ಟಾಸ್ಕ್​ ನೀಡಲಾಯಿತು. ಒಬ್ಬರು ಇನ್ನೊಬ್ಬರನ್ನು ಸ್ವಿಮಿಂಗ್​ ಪೂಲ್​ಗೆ ತಳ್ಳುವ ಈ ಗೇಮ್​ನಲ್ಲಿ ಮಂಜು ಪಾವಗಡ ಅವರು ದಿವ್ಯಾ ಉರುಡುಗ ಅವರನ್ನು ಟಾರ್ಗೆಟ್​ ಮಾಡಿದರು. ದಿವ್ಯಾ ಅವರನ್ನು ಪೂಲ್​ಗೆ ತಳ್ಳುವಲ್ಲಿ ಮಂಜು ಯಶಸ್ವಿ ಕೂಡ ಆದರು. ಆ ಗ್ಯಾಪ್​ನಲ್ಲೇ ಮಂಜುಗೆ ದಿವ್ಯಾ ‘ಐ ಲವ್​ ಯೂ’ ಎಂದಿದ್ದಾರೆ! ಹಾಗಂತ ದಿವ್ಯಾಗೆ ಮಂಜು ಮೇಲೆ ಪ್ರೀತಿ ಚಿಗುರಿದೆಯೇ? ಅಸಲಿ ವಿಷಯ ಬೇರೆಯೇ ಇದೆ.

‘ನಿನಗೆ ಒಂದು ಸೀಕ್ರೆಟ್​ ಹೇಳುತ್ತೇನೆ. ತಾಕತ್ತಿದ್ದರೆ ನೀನು ಅದನ್ನು ಬೇರೆಯವರಿಗೆ ಹೇಳು ನೋಡೋಣ’ ಎಂದು ದಿವ್ಯಾಗೆ ಮಂಜು ಸವಾಲು ಹಾಕಿದರು. ಪೂಲ್​ಗೆ ಬೀಳುತ್ತಿದ್ದಂತೆಯೇ ದಿವ್ಯಾ ಕಿವಿಯಲ್ಲಿ ಮಂಜು ಏನೋ ಸೀಕ್ರೆಟ್​ ಹೇಳಿಯೇ ಬಿಟ್ಟರು. ಅದೇನು ಸೀಕ್ರೆಟ್​ ಹೇಳಿರಬಹುದು ಎಂದು ಮನೆಯ ಇತರೆ ಎಲ್ಲ ಸದಸ್ಯರು ಒಂದು ಕ್ಷಣ ತಲೆ ಕೆಡಿಸಿಕೊಂಡರು. ‘ಧೈರ್ಯ ಇದ್ದರೆ ಜೋರಾಗಿ ಹೇಳು ನೋಡೋಣ’ ಎಂದು ದಿವ್ಯಾಗೆ ಮಂಜು ಸವಾಲು ಹಾಕಿದರು. ಸೋಲು ಒಪ್ಪಿಕೊಳ್ಳಬಾರದು ಎಂಬ ಕಾರಣಕ್ಕೆ ದಿವ್ಯಾ ಅದೇನು ಎಂಬುದನ್ನು ಹೇಳಿಯೇ ಬಿಟ್ಟರು. ‘ಐ ಲವ್​ ಯೂ’ ಎಂದು ಕೂಗಿ ಹೇಳಿದರು. ಅಂದರೆ, ದಿವ್ಯಾ ಕಿವಿಯಲ್ಲಿ ಮಂಜು ಹೇಳಿದ ಸೀಕ್ರೆಟ್​ ಕೂಡ ‘ಐ ಲವ್​ ಯೂ’ ಎಂಬುದು ಜಗಜ್ಜಾಹೀರಾಯಿತು.

ಮಂಜು ಮಾಡಿದ ಈ ಫ್ಲರ್ಟ್ ಕೆಲಸ ನೋಡಿ ದಿವ್ಯಾ ಸುರೇಶ್​ ಮುಖ ತಿರುಗಿಸಿಕೊಂಡರು. ಇಷ್ಟು ದಿನ ದಿವ್ಯಾ ಸುರೇಶ್​ ಕಡೆಗೆ ಆಸಕ್ತಿ ತೋರಿಸುತ್ತಿದ್ದ ಮಂಜು ಈಗ ನಿಧಾನವಾಗಿ ದಿವ್ಯಾ ಉರುಡುಗ ಕಡೆಗೆ ವಾಲುತ್ತಿರುವುದು ಈ ‘ಐ ಲವ್​ ಯೂ’ ಪ್ರಸಂಗದಿಂದ ಗೊತ್ತಾಗಿದೆ. ಒಟ್ಟಿನಲ್ಲಿ ಅವರ ಪ್ರೇಮ್​ ಕಹಾನಿ ಬೇರೆ ರೂಪ ಪಡೆದುಕೊಳ್ಳುತ್ತಿದೆ. ಬಿಗ್​ ಬಾಸ್​ ಮನೆಯಲ್ಲಿ ಆಗುವ ಈ ಪ್ರೀತಿ-ಪ್ರೇಮವನ್ನು ಗಂಭೀರವಾಗಿ ಪರಿಗಣಿಸುವುದು ಅವರವರಿಗೆ ಬಿಟ್ಟ ವಿಚಾರ.

ಇದನ್ನೂ ಓದಿ: Bigg Boss Day 2: ಬಿಗ್​ ಬಾಸ್​ ಮನೆಯಲ್ಲೇ ಮದುವೆಯಾದ ಮಂಜು ಪಾವಗಡ & ದಿವ್ಯಾ ಸುರೇಶ್​!

Bigg Boss Kannada: ಬಿಗ್​ ಬಾಸ್​ ಮನೆಯಿಂದ ಹೊರ ಬಂದ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮೊದಲ ಮಾತು.

Published On - 1:27 pm, Tue, 9 March 21

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?