‘ಪ್ರಾಣ ಒತ್ತೆಯಿಟ್ಟು ಮಾಡಿದ ಸಿನಿಮಾಗೆ ಇಂಥ ಅನ್ಯಾಯ’! ನೋವು ತೋಡಿಕೊಂಡ ಖ್ಯಾತ ನಟ ಸಂಚಾರಿ ವಿಜಯ್​

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್​ ಅವರು ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ತಮಗಾದ ಅನ್ಯಾಯದ ವಿರುದ್ಧ ಗುಡುಗಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ...

‘ಪ್ರಾಣ ಒತ್ತೆಯಿಟ್ಟು ಮಾಡಿದ ಸಿನಿಮಾಗೆ ಇಂಥ ಅನ್ಯಾಯ’! ನೋವು ತೋಡಿಕೊಂಡ ಖ್ಯಾತ ನಟ ಸಂಚಾರಿ ವಿಜಯ್​
ಸಂಚಾರಿ ವಿಜಯ್​- ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಲೋಗೋ
Follow us
ಮದನ್​ ಕುಮಾರ್​
| Updated By: ganapathi bhat

Updated on: Mar 09, 2021 | 12:29 PM

‘ನಾನು ಅವನಲ್ಲ ಅವಳು’ ಚಿತ್ರದ ನಟನೆಗಾಗಿ ‘ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ’ ಪಡೆದುಕೊಂಡ ಕಲಾವಿದ ಸಂಚಾರಿ ವಿಜಯ್​ ಅವರು ಒಂದು ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ. ‘ತಲೆದಂಡ’ ಶೀರ್ಷಿಕೆಯ ಈ ಚಿತ್ರಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಅನ್ಯಾಯ ಆಗಿದೆ ಎಂದು ಸಂಚಾರಿ ವಿಜಯ್​ ಈಗ ಆರೋಪಿಸಿದ್ದಾರೆ.

ಮಾ.24ರಿಂದ 31ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ನಡೆಯಲಿದೆ. ಇದರ ಹಲವು ವಿಭಾಗಗಳಿಗೆ ಸಿನಿಮಾ ಆಯ್ಕೆ ನಡೆಯುತ್ತಿದೆ. ಸ್ಪರ್ಧೆಯ ವಿಭಾಗದಲ್ಲಿ ತೀವ್ರ ಪೈಪೋಟಿ ಇದೆ. ಆದರೆ ಈ ವಿಭಾಗದಲ್ಲಿ ಕನ್ನಡದ ‘ತಲೆದಂಡ’ ಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿದೆ. ಚಿತ್ರೋತ್ಸವ ಆಯೋಜಕರ ಈ ನಿರ್ಧಾರಕ್ಕೆ ಸಂಚಾರಿ ವಿಜಯ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ತಲೆದಂಡ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿರುವುದು ಅಶೋಕ್​ ಕಶ್ಯಪ್​. ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರೋತ್ಸವದ ನಿಯಮದ ಪ್ರಕಾರ, ಅಕಾಡೆಮಿಯಲ್ಲಿ ಇರುವವರ ಮತ್ತು ಅವರ ಆಪ್ತರ ಸಿನಿಮಾಗಳನ್ನು ಸ್ಪರ್ಧೆಯ ವಿಭಾಗಕ್ಕೆ ಆಯ್ಕೆ ಮಾಡುವಂತಿಲ್ಲ. ಆದರೆ ಈ ನಿಯಮದಿಂದ ಒಂದು ಒಳ್ಳೆಯ ಸಿನಿಮಾಗೆ ತೊಂದರೆ ಆಗುತ್ತಿದೆ ಎಂಬುದು ಸಂಚಾರಿ ವಿಜಯ್​ ಅವರ ವಾದ.

‘ನಮ್ಮ ಸಿನಿಮಾ ಸೆನ್ಸಾರ್​ ಆಗಿರುವುದು 2020ರಲ್ಲಿ. ಅದು ಈ ವರ್ಷವೇ ಪ್ರದರ್ಶನ ಆಗಬೇಕು. ಮುಂದಿನ ವರ್ಷ ಅವಕಾಶ ಇರುವುದಿಲ್ಲ. ಬಹಳ ಕಷ್ಟಪಟ್ಟು, ಅವರಿವರ ಕೈ-ಕಾಲು ಹಿಡಿದು ಸಾಲ ಮಾಡಿ ಸಿನಿಮಾ ನಿರ್ಮಿಸಲಾಗಿದೆ. ಆದರೆ ನೀವು ಹೇಗೆ ಈ ಚಿತ್ರವನ್ನು ಕಾಂಪಿಟೀಷನ್​ ಸೆಕ್ಷನ್​ನಿಂದ ಹೊರಗೆ ಇಟ್ಟಿದ್ದೀರಿ? ಅದಕ್ಕೆ ಮಾನದಂಡಗಳೇನು? ಹೀಗೆ ಒಂದು ಸಿನಿಮಾಗೆ ಅನ್ಯಾಯ ಆಗುತ್ತಿದೆ. ಇದು ಸಾಮಾಜಿಕ ಸಂದೇಶ ಇರುವ ಸಿನಿಮಾ’ ಎಂದಿದ್ದಾರೆ ಸಂಚಾರಿ ವಿಜಯ್​.

‘ಮರಗಳನ್ನು ಕಡಿಯಬೇಡಿ. ಅರಣ್ಯ ನಾಶ ಮಾಡಿದರೆ ಜಾಗತಿಕವಾಗಿ ತಾಪಮಾನ ಹೆಚ್ಚುತ್ತದೆ ಎಂಬ ಮೆಸೇಜ್​ ಇದರಲ್ಲಿ ಇದೆ. ಇಂಥ ಸಿನಿಮಾವನ್ನು ಹೊರಗೆ ಇಟ್ಟಿರುವುದನ್ನು ತಿಳಿದು ಬಹಳ ಬೇಸರ ಆಯಿತು. ಚಿತ್ರೀಕರಣದ ವೇಳೆ ನನ್ನ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡಿದ್ದೇನೆ. ಬದುಕಿದ್ದೇ ಹೆಚ್ಚು ಎಂಬಷ್ಟರಮಟ್ಟಿಗೆ ರಿಸ್ಕ್​ ತೆಗೆದುಕೊಂಡು ನಾನು ಕೆಲಸ ಮಾಡಿದ್ದೇನೆ. ಹೆಚ್ಚು-ಕಡಿಮೆ ಆಗಿದ್ದರೆ ನಾನೇ ಬದುಕಿ ಉಳಿಯುತ್ತಿರಲಿಲ್ಲ. ಇಂಥ ಸಿನಿಮಾ ಜನರಿಗೆ ತಲುಪಬೇಕು, ಆ ಚಿತ್ರಕ್ಕೆ ನ್ಯಾಯ ಸಿಗಬೇಕು ಎಂಬ ಕಾರಣಕ್ಕಾಗಿ ನಾವು ಇಷ್ಟೆಲ್ಲ ರಿಸ್ಕ್​ ತೆಗೆದುಕೊಂಡು ಸಿನಿಮಾ ಮಾಡುತ್ತೇವೆ. ಆದರೆ ಚಿತ್ರೋತ್ಸವದಲ್ಲಿ ಅನ್ಯಾಯ ಆಗಿರುವುದರಿಂದ ನಮಗೆ ಬಹಳಷ್ಟು ನೋವಾಗಿದೆ’ ಎಂದು ಸೋಶಿಯಲ್​ ಮೀಡಿಯಾ ಮೂಲಕ ಅವರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡ ಸಿನಿಮಾ ನಿರ್ಮಾಪಕ ಶಂಕರ್ ಗೌಡ ಕಚೇರಿ ಮೇಲೆ ಖಾಕಿ ದಾಳಿ

ರಾಬರ್ಟ್‌ ಸಿನಿಮಾನ್ನ ನಾನು ನೋಡುತ್ತೇನೆ, ನೀವೂ ನೋಡಿ – ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್