ಕೆಂಪೇಗೌಡ ಸಿನಿಮಾ ನಿರ್ಮಾಪಕ ಶಂಕರ್ ಗೌಡ ಕಚೇರಿ ಮೇಲೆ ಖಾಕಿ ದಾಳಿ

ಸಿನಿಮಾ ನಿರ್ಮಾಪಕ ಶಂಕರ್ ಗೌಡ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಗೋವಿಂದಪುರ ಡ್ರಗ್ ಕೇಸ್‌ ಸಂಬಂಧ ಪೊಲೀಸರು ದಾಳಿ ಮಾಡಿ, ಪರಿಶೀಲನೆ ನಡೆಸಿದರು. ಡಾಲರ್ಸ್ ಕಾಲೋನಿ 3ನೇ ಮುಖ್ಯ ರಸ್ತೆಯಲ್ಲಿರುವ ನಿರ್ಮಾಪಕನ ಕಚೇರಿ ಮೇಲೆ ಖಾಕಿ ಪಡೆ ದಾಳಿ ನಡೆಸಿದೆ.

  • TV9 Web Team
  • Published On - 21:18 PM, 8 Mar 2021
ಕೆಂಪೇಗೌಡ ಸಿನಿಮಾ ನಿರ್ಮಾಪಕ ಶಂಕರ್ ಗೌಡ ಕಚೇರಿ ಮೇಲೆ ಖಾಕಿ ದಾಳಿ
ಕೆಂಪೇಗೌಡ ಸಿನಿಮಾ ನಿರ್ಮಾಪಕ ಶಂಕರ್ ಗೌಡ

ಬೆಂಗಳೂರು: ಸಿನಿಮಾ ನಿರ್ಮಾಪಕ ಶಂಕರ್ ಗೌಡ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಗೋವಿಂದಪುರ ಡ್ರಗ್ ಕೇಸ್‌ ಸಂಬಂಧ ಪೊಲೀಸರು ದಾಳಿ ಮಾಡಿ, ಪರಿಶೀಲನೆ ನಡೆಸಿದರು. ಡಾಲರ್ಸ್ ಕಾಲೋನಿ 3ನೇ ಮುಖ್ಯ ರಸ್ತೆಯಲ್ಲಿರುವ ನಿರ್ಮಾಪಕನ ಕಚೇರಿ ಮೇಲೆ ಖಾಕಿ ಪಡೆ ದಾಳಿ ನಡೆಸಿದೆ.

KEMPEGOWDA MOVIE RAID 2

ನಿರ್ಮಾಪಕ ಶಂಕರ್ ಗೌಡ ಕಚೇರಿ

ಕೆಂಪೇಗೌಡ ಸಿನಿಮಾದ ನಿರ್ಮಾಪಕ ಶಂಕರ್ ಗೌಡ ವಿದೇಶಿ ಡ್ರಗ್ ಪೆಡ್ಲರ್ ಜೊತೆ ನಂಟು ಹೊಂದಿದ್ದ ಆರೋಪವಿತ್ತು. ಹಾಗಾಗಿ, ಮಹತ್ವದ ಮಾಹಿತಿಗಳನ್ನ ಕಲೆ ಹಾಕಿ ಪೊಲೀಸರಿಂದ ದಾಳಿ ನಡೆದಿದೆ. ಸರ್ಚ್‌ ವಾರಂಟ್‌ ಪಡೆದು ದಾಳಿ ನಡೆಸಿರುವ ಪೊಲೀಸರು 4 ಅಂತಸ್ತಿನ ಕಟ್ಟಡದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಗೋವಿಂದಪುರ ಠಾಣೆಯ ಇನ್ಸ್‌ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಈ ಹಿಂದೆ, ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಚಂದ್ರನನ್ನ ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಶಂಕರ್ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು ಎಂಬುದರ ಬಗ್ಗೆ ಮಸ್ತಾನ್ ಬಾಯ್ಬಿಟ್ಟಿದ್ದ. ಮಸ್ತಾನ್ ಮಾಹಿತಿ ಮೇರೆಗೆ ಡಾಲರ್ಸ್ ಕಾಲೋನಿಯ ಶಂಕರ್ ಕಚೇರಿ ಮೇಲೆ ದಾಳಿ ನಡೆದಿದೆ.

KEMPEGOWDA MOVIE RAID 1

ಕಚೇರಿ ಮೇಲೆ ಖಾಕಿ ಪಡೆಯಿಂದ ದಾಳಿ

ದಾಳಿ ವೇಳೆ ಶಂಕರ್ ಗೌಡ, ಓರ್ವ ಮ್ಯಾನೇಜರ್, ನಾಲ್ವರು ಕೆಲಸಗಾರರು ಕಚೇರಿಯಲ್ಲಿದ್ದರು ಎಂಬ ಮಾಹಿತಿ ಸಿಕ್ಕಿದೆ. ಮ್ಯಾನೇಜರ್ ಹಾಗೂ ಶಂಕರ್ ಗೌಡನ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ಕಚೇರಿಯ ಕೊಠಡಿಗಳು ಹಾಗೂ ಕಾರುಗಳು ಪರಿಶೀಲನೆ ನಡೆಸಿದರು.

ಸದ್ಯ ಮಹಜರು ಪ್ರಕ್ರಿಯೆ ನಡೆಸುತ್ತಿರುವ ಪೊಲೀಸರು ನಿರ್ಮಾಪಕ ಶಂಕರ್ ಗೌಡಗೆ ಸೇರಿದ 2 ಮೊಬೈಲ್‌ಫೋನ್‌, ಮ್ಯಾನೇಜರ್‌ನ ಒಂದು ಮೊಬೈಲ್‌, ಹಾರ್ಡ್‌ ಡಿಸ್ಕ್‌ ಜಪ್ತಿ ಮಾಡಿದ್ದಾರೆ. ಜೊತೆಗೆ, ನಾಳೆ ಬೆಳಗ್ಗೆ 9 ಗಂಟೆಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ. ನಿರ್ಮಾಪಕ ಶಂಕರ್ ಗೌಡಗೆ ಪೊಲೀಸರು ಸೂಚನೆ ನೀಡಿದ್ದಾರೆ. ಗೋವಿಂದಪುರ ಠಾಣೆಗೆ ವಿಚಾರಣೆಗೆ ಹಾಜರಾಗಲು‌ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಏನ್​ ಸರ್ ನಮಗಿಂತ ಮೊದ್ಲೇ ಬರುತ್ತೀರಿ -ಸದನದಲ್ಲಿ ಸಿದ್ದು-BSY ಗುದ್ದಾಟ, ಹೊರಗೆ ಮುದ್ದಾಟ!