Yash: ಜಮೀನು ಗಲಾಟೆ ಪ್ರಕರಣ; ದುದ್ದ ಪೊಲೀಸ್ ಠಾಣೆಗೆ ಆಗಮಿಸಿದ ನಟ ಯಶ್
ಹಾಸನ ತಾಲ್ಲೂಕಿನ ತಿಮ್ಮಲಾಪುರ ಗ್ರಾಮದಲ್ಲಿರುವ ಯಶ್ ಫಾರ್ಮ್ ಹೌಸ್‌ಗೆ ರಸ್ತೆ ನಿರ್ಮಿಸಲು ಮುಂದಾದಾಗ ಅಲ್ಲಿನ ಗ್ರಾಮಸ್ಥರು ತಗಾದೆ ತೆಗೆದಿದ್ದಾರೆ.ಈ ವೇಳೆ ಮಾತಿಗೆ ಮಾತು ಬೆಳೆದು ಕೆಲ ಗ್ರಾಮಸ್ಥರು ಮತ್ತು ಯಶ್ ಬೆಂಬಲಿಗರ ನಡುವೆ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಜಗಳ ಮುಂದುವರೆದಿದೆ.
ಹಾಸನ: ಜಮೀನಿಗೆ ಹಾದಿ ಮಾಡುವ ವಿಚಾರವಾಗಿ ನಟ ರಾಕಿಂಗ್ ಸ್ಟಾರ್ ಯಶ್ ತಂದೆ-ತಾಯಿ ಹಾಗೂ ಗ್ರಾಮಸ್ಥರ ನಡುವೆ ಹಾಸನ ತಾಲೂಕಿನ ತಿಮ್ಮೇನಹಳ್ಳಿಯಲ್ಲಿ ನಡೆದ ಗಲಾಟೆಯ ಮುಂದುವರಿದ ಭಾಗವಾಗಿ ಸ್ವತಃ ನಟ ಯುಶ್ ಹಾಸನದ ದುದ್ದ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಯಶ್ಗೆ ಸೇರಿದ ಫಾರ್ಮ್ ಹೌಸ್‌ಗೆ ರಸ್ತೆ ನಿರ್ಮಿಸುವ ವಿಚಾರವಾಗಿ ಗಲಾಟೆ ಆಗಿರುವ ಹಿನ್ನೆಲೆಯಲ್ಲಿ ಅವರು ಘಟನೆಯ ವಿವರವನ್ನು ಆಲಿಸುತ್ತಿದ್ದಾರೆ.
ಹಾಸನ ತಾಲ್ಲೂಕಿನ ತಿಮ್ಮಲಾಪುರ ಗ್ರಾಮದಲ್ಲಿರುವ ಯಶ್ ಫಾರ್ಮ್ ಹೌಸ್‌ಗೆ ರಸ್ತೆ ನಿರ್ಮಿಸಲು ಮುಂದಾದಾಗ ಅಲ್ಲಿನ ಗ್ರಾಮಸ್ಥರು ತಗಾದೆ ತೆಗೆದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೆಲ ಗ್ರಾಮಸ್ಥರು ಮತ್ತು ಯಶ್ ಬೆಂಬಲಿಗರ ನಡುವೆ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಜಗಳ ಮುಂದುವರೆದಿದೆ. ನಿನ್ನೆ ಗಲಾಟೆ ನಡೆವ ವೇಳೆಯಲ್ಲಿ ಯಶ್ ಅಲ್ಲಿ ಇರದಿದ್ದ ಕಾರಣ ಇಂದು ದುದ್ದ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.
ಇದಾದ ನಂತರ ಮಾತನಾಡಿರುವ ಯಶ್, ಸಮಸ್ಯೆ ಇದ್ದರೆ ಮಾತುಕತೆ ಮೂಲಕ ಅದನ್ನು ಬಗೆಹರಿಸಿಕೊಳ್ಳಲಿ. ಹಳ್ಳಿ ಜನ ಏನೋ ಮಾತಾಡಿದಾರೆ, ನಮ್ಮ ತಂದೆ ತಾಯಿ ಕೂಡ ಹಳ್ಳಿ ಜನರೇ. ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್ ಅಂತ ಸುಮ್ಮನೆ ಕೂರೋಕಾಗಲ್ಲ. ಹಾಗಾಗಿ ನಾನೇ ಬಂದಿದ್ದೇನೆ. ಗ್ರಾಮಸ್ಥರಿಗೆ ಬೇಕಿದ್ರೆ ಕೇಳಲಿ ಸರ್ ಹತ್ತು ಎಕರೆಯನ್ನಾದ್ರೂ ಬಿಟ್ಟು ಕೊಡ್ತೀನಿ. ದುಡ್ದು ಮಾಡೋ ಹಾಗಿದ್ದರೆ ಬೆಂಗಳೂರಲ್ಲೇ ಮಾಡಬಹುದಿತ್ತು. ಅಲ್ಲಿ ಜಮೀನು ಮಾಡಿದ್ರೆ ಚೆನ್ನಾಗಿ ಹಣವೂ ಸಿಗ್ತಿತ್ತು. ನಾನು ಹಾಸನದಲ್ಲಿ ಯಾಕೆ ಜಮೀನು ಮಾಡಬೇಕು ಅರ್ಥ ಮಾಡ್ಕೊಳ್ಳಿ. ಮಾದರಿ ರೀತಿಯಲ್ಲಿ ಕೃಷಿ ಮಾಡಬೇಕೆಂದು ಮಾಡಿದ್ದೇನೆ ಎಂದು ಹಾಸನ ಜಿಲ್ಲೆ ದುದ್ದಾ ಪೊಲೀಸ್ ಠಾಣೆ ಎದುರು ಹೇಳಿದ್ದಾರೆ.
ನಿನ್ನೆ ಆಗಿದ್ದೇನು? ಜಮೀನಿಗೆ ರಸ್ತೆ ನಿರ್ಮಿಸೋ ವಿಚಾರಕ್ಕೆ ಯಶ್ ಕುಟುಂಬದ ಜೊತೆ ಜಿಲ್ಲೆಯ ತಿಮ್ಮೇನಹಳ್ಳಿ ಗ್ರಾಮದ ಜನ ಗಲಾಟೆಗೆ ಮುಂದಾಗಿದ್ದಾರೆ. ನಟ ಯಶ್ ತಂದೆ ಅರುಣ್ ಕುಮಾರ್ ಹಾಗೂ ತಾಯಿ ಪುಷ್ಪ ಜಮೀನಿನ ಬಳಿ ಕೆಲಸ ಮಾಡೋವಾಗ ಗ್ರಾಮಸ್ಥರ ನಡುವೆ ವಾಗ್ವಾದ ಶುರುವಾಗಿದೆ. ಯಶ್ ತಂದೆ ಅರುಣ್‌ಕುಮಾರ್, ತಾಯಿ ಪುಷ್ಪ ಜಮೀನಿನ ಬಳಿ ಜೆಸಿಬಿಯಿಂದ ಕೆಲಸ ಮಾಡಿಸುತ್ತಿದ್ದರು ಈ ವೇಳೆ ಕೆಲಸ ಮಾಡಿಸದಂತೆ ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ. ಯಶ್ ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರವಾಗಿ ಗಲಾಟೆ ಶುರುವಾಗಿದೆ. ಆಗ ಮಾತಿಗೆ ಮಾತು ಬೆಳೆದು ಗ್ರಾಮಸ್ಥರು ಮತ್ತು ರಾಕಿಂಗ್ ಸ್ಟಾರ್ ಯಶ್ನ ಕೆಲ ಬೆಂಬಲಿಗರು ಕೈ ಕೈ ಮಿಲಾಯಿಸಿದ್ದಾರೆ. ಬಳಿಕ ಸ್ಥಳಕ್ಕೆ ದುದ್ದ ಪೊಲೀಸರು ಭೇಟಿ ನೀಡಿದ್ದು ಮಧ್ಯಸ್ಥಿಕೆಯಿಂದ ಸಮಸ್ಯೆ ಬಗೆಹರಿಸಿದ್ದಾರೆ.
ಇದನ್ನೂ ಓದಿ:
ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರವಾಗಿ ಹಾಸನದಲ್ಲಿ ನಟ ಯಶ್ ತಂದೆ-ತಾಯಿ, ಗ್ರಾಮಸ್ಥರ ನಡುವೆ ಗಲಾಟೆ
ನಿಧಿ ಸುಬ್ಬಯ್ಯ ಮನೆ ಒಳಗೆ ಮಾಲೆ ಪಟಾಕಿ ಎಸೆದಿದ್ರಂತೆ ಯಶ್! ಬಿಗ್ ಬಾಸ್ ಮನೆಯಲ್ಲಿ ಹೊರ ಬಿತ್ತು ಅಚ್ಚರಿ ವಿಚಾರ
Published On - 4:41 pm, Tue, 9 March 21