ದರ್ಶನ್​ಗೆ ಸ್ವಿಮ್ಮಿಂಗ್​ ಬರಲ್ಲ; ಆದರೂ ರಾಬರ್ಟ್​ಗಾಗಿ ದೊಡ್ಡ ರಿಸ್ಕ್​ ತೆಗೆದುಕೊಂಡ ‘ಚಾಲೆಂಜಿಂಗ್​ ಸ್ಟಾರ್​’!

‘ರಾಬರ್ಟ್’​ ಸಿನಿಮಾದ ತೆರೆಹಿಂದಿನ ವಿಷಯಗಳು ಒಂದಕ್ಕಿಂತ ಒಂದು ಇಂಟರೆಸ್ಟಿಂಗ್​ ಆಗಿವೆ. ಕೆಲವು ರಿಸ್ಕಿ ದೃಶ್ಯಗಳ ಶೂಟಿಂಗ್​ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಮಾಹಿತಿ ನೀಡಿದ್ದಾರೆ.

ದರ್ಶನ್​ಗೆ ಸ್ವಿಮ್ಮಿಂಗ್​ ಬರಲ್ಲ; ಆದರೂ ರಾಬರ್ಟ್​ಗಾಗಿ ದೊಡ್ಡ ರಿಸ್ಕ್​ ತೆಗೆದುಕೊಂಡ ‘ಚಾಲೆಂಜಿಂಗ್​ ಸ್ಟಾರ್​’!
ರಾಬರ್ಟ್​ ಸಿನಿಮಾದಲ್ಲಿ ದರ್ಶನ್​
Follow us
ಮದನ್​ ಕುಮಾರ್​
| Updated By: ಆಯೇಷಾ ಬಾನು

Updated on: Mar 10, 2021 | 6:35 AM

‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರ ‘ರಾಬರ್ಟ್’​ ಸಿನಿಮಾ ಮಾ.11ರಂದು ರಿಲೀಸ್​ ಆಗುತ್ತಿದೆ. ತರುಣ್​ ಸುಧೀರ್​ ನಿರ್ದೇಶನದ ಈ ಚಿತ್ರದಲ್ಲಿ ಅದ್ದೂರಿ ಆ್ಯಕ್ಷನ್​ ದೃಶ್ಯಗಳಿವೆ. ಆ ಕಾರಣದಿಂದ ಅಭಿಮಾನಿಗಳಿಗೆ ಈ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ. ಅದರಲ್ಲೂ ಒಂದು ಅಂಡರ್​ ವಾಟರ್​ ದೃಶ್ಯವನ್ನು ದರ್ಶನ್​ ತುಂಬ ಚಾಲೆಂಜಿಂಗ್​ ಆಗಿ ಮಾಡಿದ್ದಾರೆ.

ಆ ದೃಶ್ಯದ ಚಿತ್ರೀಕರಣದ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಮಾತನಾಡಿದ್ದಾರೆ. ‘ಅಂಡರ್​ ವಾಟರ್​ ಸೀಕ್ವೆನ್ಸ್​ ಚಾಲೆಂಜಿಂಗ್​ ಎನಿಸಿತು. ದರ್ಶನ್​ ಸರ್​ಗೆ ಸ್ವಿಮಿಂಗ್​ ಬರಲ್ಲ. ನೀರಿನ ಆಳ 30 ಅಡಿ ಇರುತ್ತಿತ್ತು. ಎಲ್ಲರೂ ಸ್ವಿಮಿಂಗ್​ ಸ್ಯೂಟ್​ ತೆಗೆದುಕೊಂಡು ಬರಬೇಕು ಅಂತ ಅವರು ಹೇಳಿದ್ದರು. ನಾನು ಮುಳುಗುವಾಗ ನಿಮ್ಮನ್ನೂ ಮುಳುಗಿಸುತ್ತೀನಿ. ಕಷ್ಟ ನಿಮಗೂ ಗೊತ್ತಾಗಲಿ ಅಂತ ತಮಾಷೆಗೆ ಹೇಳಿದರು’ ಎಂದಿದ್ದಾರೆ ಉಮಾಪತಿ ಶ್ರೀನಿವಾಸ್​ ಗೌಡ.

‘ಆಗ ಚಳಿ ಬೇರೆ ಇತ್ತು. ಆದಷ್ಟು ದರ್ಶನ್​ ಸರ್​ಗೆ ಏನೂ ತೊಂದರೆ ಆಗದಂತೆ ಮಾಸ್ಟರ್​ ಕಿಶನ್​ ಅವರು ಸರಿಯಾಗಿ ಹ್ಯಾಂಡಲ್​ ಮಾಡಿದರು. ಅದು ನಾವು ತುಂಬ ರಿಸ್ಕಿ ಎಂದುಕೊಂಡಿದ್ದೆವು. ನಂತರ ಇಲ್ಲೇ ಮಾಡಿದ್ವಿ. ಅದು ಬಿಟ್ಟರೆ ವಾರಾಣಸಿ ಚಿತ್ರೀಕರಣ ಕೂಡ ಚಾಲೆಂಜಿಂಗ್​ ಆಗಿತ್ತು. ಯಾಕೆಂದರೆ ಅಲ್ಲಿ ಜನರು ಇರುತ್ತಾರೆ. ಅಷ್ಟೊಂದು ಜನರ ಮಧ್ಯೆ ಶೂಟ್​ ಮಾಡುವುದು ತುಂಬ ಕಷ್ಟ. ಅಲ್ಲಿನ ಜನ ದರ್ಶನ್​ರನ್ನು ನೋಡುತ್ತ ನಿಂತು ಬಿಡುತ್ತಿದ್ದರು’ ಎಂಬುದು ಉಮಾಪತಿ ಶ್ರೀನಿವಾಸ್​ ಗೌಡ ಮಾತುಗಳು.

‘ಸೌತ್​ ಇಂಡಿಯಾ ಸ್ಟಾರ್​ಗಳೆಲ್ಲ ಇಲ್ಲಿಗೆ ಬಂದರೆ ಇಷ್ಟಿಷ್ಟೇ ಇರುತ್ತಾರೆ. ಅವರ ಜೊತೆ ನಮಗೆ ಫೋಟೋ ತೆಗೆಸಿಕೊಳ್ಳಬೇಕು ಎನಿಸಿಲ್ಲ. ಆದರೆ ನೀವು​ ಬಂದರೆ ಆನೆ ಬಂದಂತೆ ಇರುತ್ತದೆ. ನಿಮ್ಮನ್ನು ನೋಡಿದರೆ ಖುಷಿ ಆಗುತ್ತದೆ’ ಎಂದು ದರ್ಶನ್​ಗೆ ವಾರಾಣಸಿಯ ಜನರು ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ ನಿರ್ಮಾಪಕರು. ಈ ಸಿನಿಮಾದಲ್ಲಿ ದರ್ಶನ್​ಗೆ ಜೋಡಿಯಾಗಿ ಆಶಾ ಭಟ್​ ನಟಿಸಿದ್ದಾರೆ. ರವಿ ಕಿಶನ್​, ಜಗಪತಿ ಬಾಬು, ವಿನೋದ್​ ಪ್ರಭಾಕರ್​, ರವಿಶಂಕರ್​, ಅಶೋಕ್​, ದೇವರಾಜ್​ ಮುಂತಾದವರು ಇನ್ನುಳಿದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ‘ರಾಬರ್ಟ್​’ನಲ್ಲಿ ದರ್ಶನ್​ ಖಡಕ್​ ಆಗಿ ಹೇಳಿದ ‘ಏ ತುಕಾಲಿ…’ ಡೈಲಾಗ್​ನ ಹಿಂದಿದೆ ಇಂಟರೆಸ್ಟಿಂಗ್​ ವಿಷ್ಯ!

Roberrt vs Kotigobba 3: ಸಿನಿಮಾಗಳ ರಿಲೀಸ್​ಗೂ ಮುನ್ನ ಇನ್ನೊಂದು ರೀತಿಯಲ್ಲಿ ದರ್ಶನ್​-ಸುದೀಪ್​ ಪೈಪೋಟಿ!

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ