AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeep: ನಟ ಕಿಚ್ಚ ಸುದೀಪ್​​ಗೆ ಸನ್ಮಾನ ಮಾಡಲಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ

ಕಿಚ್ಚನ ಬೆಳ್ಳಿ ಹಬ್ಬಕ್ಕೆ ಸ್ಯಾಂಡಲ್​ವುಡ್​ ಸಾಕ್ಷಿಯಾಗಲಿದೆ. ಕ್ರೇಜಿಸ್ಟಾರ್​ ರವಿಚಂದ್ರನ್, ಸೆಂಚ್ಯುರಿ ಸ್ಟಾರ್​ ಶಿವರಾಜ್ ಕುಮಾರ್ ಸೇರಿದಂತೆ ಬಹುತೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.

Kichcha Sudeep: ನಟ ಕಿಚ್ಚ ಸುದೀಪ್​​ಗೆ ಸನ್ಮಾನ ಮಾಡಲಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ
ಸುದೀಪ್​-ಯಡಿಯೂರಪ್ಪ
ರಾಜೇಶ್ ದುಗ್ಗುಮನೆ
| Edited By: |

Updated on: Mar 10, 2021 | 3:20 PM

Share

ನಟ ಕಿಚ್ಚ ಸುದೀಪ್​ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಕಳೆದಿದೆ. ಭಿನ್ನ ಭಿನ್ನ ಸಿನಿಮಾಗಳಲ್ಲಿ ನಟಿಸಿ ಸುದೀಪ್​ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್​ ಅವರಿಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಸನ್ಮಾನ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಸುದೀಪ್​ ತೆಲುಗು ಹಾಗೂ ಬಾಲಿವುಡ್​ನಲ್ಲೂ ನಟಿಸಿದ್ದಾರೆ. ಎಲ್ಲಾ ಭಾಷೆಯ ಸಿನಿಮಾಗಳನ್ನೂ ಸೇರಿಸಿದರೆ ಸುದೀಪ್‌ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ನಟನಿಗೆ ಗೌರವ ಸಲ್ಲಿಸಲು ಸಿದ್ಧತೆ ನಡೆದಿದೆ.

ಸುದೀಪ್​ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೋಟಿಗೊಬ್ಬ3 ಚಿತ್ರತಂಡದಿಂದ ಮಾರ್ಚ್ 15ರಂದು ಸೋಮವಾರ ಸಂಜೆ ಬೆಳ್ಳಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಕಾರ್ಯಕ್ರಮ ನಿಯೋಜನೆಗೊಂಡಿದೆ.

ಕಿಚ್ಚನ ಬೆಳ್ಳಿ ಹಬ್ಬಕ್ಕೆ ಸ್ಯಾಂಡಲ್​ವುಡ್​ ಸಾಕ್ಷಿಯಾಗಲಿದೆ. ಕ್ರೇಜಿಸ್ಟಾರ್​ ರವಿಚಂದ್ರನ್, ಸೆಂಚ್ಯುರಿ ಸ್ಟಾರ್​ ಶಿವರಾಜ್ ಕುಮಾರ್ ಸೇರಿದಂತೆ ಬಹುತೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್​​ಗೆ ಯಡಿಯೂರಪ್ಪ ಸನ್ಮಾನಿಸಲಿದ್ದಾರೆ. ಈಗಾಲೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚಿತ್ರ ತಂಡ ಆಹ್ವಾನ ನೀಡಿದೆ.

1997ರಲ್ಲಿ ತೆರೆಕಂಡ ತಾಯವ್ವ ಸಿನಿಮಾ ಮೂಲಕ ಸುದೀಪ್​​ ಸ್ಯಾಂಡಲ್​ವುಡ್​ಗೆ ಕಾಲಿಟ್ಟರು. ನಂತರ ಅವರು ಸಾಲು ಸಾಲು ಚಿತ್ರಗಳಲ್ಲಿ ನಟಿಸಲು ಆರಂಭಿಸಿದರು. ಅವರ ನಟನೆಯನ್ನು ನೋಡಿ ಪರಭಾಷೆಯವರು ಕೂಡ ಸುದೀಪ್​ಗೆ ಆಹ್ವಾನ ನೀಡಿದ್ದರು. ಸದ್ಯ ಸುದೀಪ್​ ಕೋಟ್ಟಿಗೊಬ್ಬ 3, ವಿಕ್ರಾಂತ್​ ರೋಣ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಉಪೇಂದ್ರ ನಟನೆಯ ಕಬ್ಜಾ ಚಿತ್ರದಲ್ಲಿ ಸುದೀಪ್​ ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್ ಗೆಳೆಯನಲ್ಲ ಎಂದಿದ್ದ ನಟ ದರ್ಶನ್ ಟ್ವಿಟ್‌ಗೆ ಇದೀಗ 4 ವರ್ಷ

Roberrt vs Kotigobba 3: ಸಿನಿಮಾಗಳ ರಿಲೀಸ್​ಗೂ ಮುನ್ನ ಇನ್ನೊಂದು ರೀತಿಯಲ್ಲಿ ದರ್ಶನ್​-ಸುದೀಪ್​ ಪೈಪೋಟಿ!

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!