AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್’ ಭಾವಿ ಸ್ಪರ್ಧಿಗಳಿಗೆ ‘ಅಗ್ನಿಪರೀಕ್ಷೆ’; ಜಡ್ಜ್​ ಸ್ಥಾನದಲ್ಲಿ ಗಿಲ್ಲಿ, ಸಂಗೀತಾ?

'ಬಿಗ್ ಬಾಸ್ ಕನ್ನಡ ಸೀಸನ್ 13' ರಂಗೇರಲು ಸಿದ್ಧವಾಗಿದ್ದು, ಪ್ರೋಮೊ ಈಗಾಗಲೇ ಧೂಳೆಬ್ಬಿಸಿದೆ. ಈ ಬಾರಿ ಸಾಮಾನ್ಯ ಸ್ಪರ್ಧಿಗಳಿಗೆ 'ಅಗ್ನಿಪರೀಕ್ಷೆ' ನಡೆಸಲು ಬಿಗ್ ಬಾಸ್ ಟೀಮ್ ಪ್ಲ್ಯಾನ್ ಮಾಡಿದೆ. ಜಡ್ಜ್ ಸ್ಥಾನದಲ್ಲಿ ಹಳೇ ಸ್ಪರ್ಧಿಗಳಾದ ಸಂಗೀತಾ ಶೃಂಗೇರಿ, ವಿನಯ್ ಗೌಡ ಮತ್ತು ಗಿಲ್ಲಿ ನಟ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

‘ಬಿಗ್ ಬಾಸ್’ ಭಾವಿ ಸ್ಪರ್ಧಿಗಳಿಗೆ ‘ಅಗ್ನಿಪರೀಕ್ಷೆ’; ಜಡ್ಜ್​ ಸ್ಥಾನದಲ್ಲಿ ಗಿಲ್ಲಿ, ಸಂಗೀತಾ?
ಸಂಗೀತಾ-ಗಿಲ್ಲಿ
ರಾಜೇಶ್ ದುಗ್ಗುಮನೆ
|

Updated on:Aug 03, 2026 | 9:57 AM

Share

ಮುಖ್ಯಾಂಶಗಳು

  • ಬಿಗ್ ಬಾಸ್ ಮನೆಯೊಳಗೆ ಹೋಗಲು ಎದುರಾಗಲಿದೆ 'ಅಗ್ನಿಪರೀಕ್ಷೆ'
  • ಹೊಸ ಸೀಸನ್‌ಗೆ ಜಡ್ಜ್‌ಗಳಾಗಿ ಬರಲಿದ್ದಾರಾ ಫೈಯರ್ ಬ್ರ್ಯಾಂಡ್ ಸ್ಪರ್ಧಿ
  • ಅಭಿಮಾನಿಗಳಿಗೆ ಕುತೂಹಲ ಮೂಡಿಸಿದ ಕಲರ್ಸ್ ಪ್ಲ್ಯಾನ್

‘ಬಿಗ್ ಬಾಸ್’ (Bigg Boss) ಪ್ರತಿ ಸೀಸನ್​​ ಕೂಡ ಹೊಸ ಹೊಸ ರೂಪದಲ್ಲಿ ಬರುತ್ತದೆ. ಈ ಮೊದಲು ಬಿಗ್ ಬಾಸ್ ಟೀಂ ಆಯ್ಕೆ ಮಾಡಿದವರಿಗೆ ನೇರವಾಗಿ ಎಂಟ್ರಿ ಸಿಗುತ್ತಿತ್ತು. ಆದರೆ, ಇತ್ತೀಚೆಗೆ ಇದನ್ನು ಬದಲಿಸಲಾಗಿತ್ತು. ಬಿಗ್ ಬಾಸ್ ವೇದಿಕೆಯಲ್ಲಿ ಇರೋ ವೀಕ್ಷಕರಿಗೆ ವೋಟ್ ಹಾಕುವ ಅವಕಾಶ ನೀಡಿ ಸ್ಪರ್ಧಿಗಳು ಮನೆ ಒಳಗೆ ಹೋಗಬೇಕೋ, ಬೇಡವೋ ಎಂದು ನಿರ್ಧರಿಸುತ್ತಿದ್ದರು. ಈ ಬಾರಿ ಈ ಶೈಲಿಯನ್ನು ಮತ್ತಷ್ಟು ಬದಲಿಸೋ ಸಾಧ್ಯತೆ ಇದೆ. ಈ ಬಾರಿ ಸ್ಪರ್ಧಿಗಳಿಗೆ ‘ಅಗ್ನಿಪರೀಕ್ಷೆ’ ಆಯೋಜನೆ ಮಾಡುವ ಯೋಜನೆ ರೂಪಿಸಲಾಗಿದೆ ಎನ್ನಲಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ ವೇಳೆಗೆ ಹೊಸ ಸೀಸನ್ ಆರಂಭ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ. ಆಗಸ್ಟ್ 2ರಂದು ಪ್ರೋಮೋ ರಿಲೀಸ್ ಆಗಿದೆ. ಸುದೀಪ್ ಅವರ ಗೆಟಪ್ ಗಮನ ಸೆಳೆದಿದೆ. ಈ ಶೋ ಬಗ್ಗೆ ವೀಕ್ಷಕರಿಗೆ ಕುತೂಹಲ ಮೂಡಿದೆ. ಈಗ ಹೊಸ ಆಯಾಮದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಈ ಬಾರಿಯ ಬಿಗ್ ಬಾಸ್​ ಅಲ್ಲಿ ಜನ ಸಾಮಾನ್ಯರಿಗೂ ಅವಕಾಶ ನೀಡಲಾಗುತ್ತದೆ ಎಂದು ಕಲರ್ಸ್ ಕನ್ನಡ ವಾಹಿನಿ ಈ ಮೊದಲು ಘೋಷಣೆ ಮಾಡಿದೆ. ಇದಕ್ಕೆ ಲಕ್ಷಾಂತರ ಮಂದಿ ಅಪ್ಲಿಕೇಷನ್ ಹಾಕಿದ್ದಾರೆ ಎನ್ನಲಾಗಿದೆ. ಇವರ ಪೈಕಿ ಕೆಲವೇ ಕೆಲವರನ್ನು ಆಯ್ಕೆ ಮಾಡಲಾಗುತ್ತದೆ. ಇದಕ್ಕೆ ಅಗ್ನಿಪರೀಕ್ಷೆ ಇಡಲಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

ಈಗ ಕೇಳಿ ಬರುತ್ತಿರುವ ಹೊಸ ವದಂತಿ ಎಂದರೆ ಅಗ್ನಿಪರೀಕ್ಷೆಯಲ್ಲಿ ಸಂಗೀತಾ ಶೃಂಗೇರಿ, ಗಿಲ್ಲಿ ನಟ ಹಾಗೂ ವಿನಯ್ ಗೌಡ ಜಡ್ಜ್​ ಸ್ಥಾನದಲ್ಲಿ ಇರಲಿದ್ದಾರೆ ಎನ್ನಲಾಗಿದೆ. ಈ ಮೂವರು ಬಿಗ್ ಬಾಸ್​ನಲ್ಲಿ ಫೈಯರ್ ಬ್ರ್ಯಾಂಡ್ ರೀತಿ ಗುರುತಿಸಿಕೊಂಡವರು. ಈ ಕಾರಣದಿಂದ ಇವರನ್ನು ಆಯ್ಕೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಸಂಭಾವನೆ ಗುಟ್ಟು ರಟ್ಟು ಮಾಡಿದ ಧನರಾಜ್; ಅಸಲಿ ವಿಷಯ ಕೇಳಿ ಜನ ಶಾಕ್

ಇನ್ನು, ಜೀ ಕನ್ನಡದಲ್ಲಿ ಶೀಘ್ರವೇ ‘ಹಳ್ಳಿ ಪವರ್ ರೀಲೋಡೆಡ್’ ಶೋ ಆಯೋಜನೆ ಮಾಡಲಾಗುತ್ತಿದೆ. ಬಿಗ್ ಬಾಸ್ ಪ್ರಸಾರ ಸಮಯ ಹಾಗೂ ಹಳ್ಳಿ ಪವರ್ ಶೋ ಸಮಯ ಒಂದೇ ಇರಲಿದೆ ಎಂದು ಊಹಿಸಲಾಗಿದೆ. ಹೀಗಾಗಿ, ಎರಡು ಶೋಗಳ ಮಧ್ಯೆ ಕಾಂಪಿಟೇಷನ್ ಏರ್ಪಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:33 am, Mon, 3 August 26

Follow Us
ಕರಡಿ, ಚಿರತೆ ಆಯ್ತು ಈಗ ಕೊಪ್ಪಳದಲ್ಲಿ ಹುಲಿ ಕಾಟ
ಕರಡಿ, ಚಿರತೆ ಆಯ್ತು ಈಗ ಕೊಪ್ಪಳದಲ್ಲಿ ಹುಲಿ ಕಾಟ
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!