ಈ ವಾರ ಒಟಿಟಿಗೆ ಬಂದಿವೆ ಬ್ಲಾಕ್ ಬಸ್ಟರ್ ಸಿನಿಮಾಗಳು: ಇಲ್ಲಿದೆ ಪಟ್ಟಿ
ಪ್ರತಿ ವಾರದಂತೆ ಈ ವಾರವೂ ಹಲವಾರು ಹೊಸ ಸಿನಿಮಾಗಳು ಒಟಿಟಿಗೆ ಬಂದಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆದ ಕೆಲವು ಸಿನಿಮಾಗಳು ಈ ವಾರ ಒಟಿಟಿಗೆ ಬಂದಿವೆ. ಸಿನಿಮಾಗಳು ಮಾತ್ರವೇ ಅಲ್ಲದೆ ಕೆಲ ಹೊಸ ವೆಬ್ ಸರಣಿಗಳು ಸಹ ರಿಲೀಸ್ ಆಗಿವೆ. ಈ ವಾರ ಒಟಿಟಿಗೆ ಬಂದಿರುವ ಕೆಲ ಹೊಸ ಸಿನಿಮಾ, ವೆಬ್ ಸರಣಿಗಳ ಪಟ್ಟಿ ಇಲ್ಲಿದೆ ನೊಡಿ...
Updated on: Oct 03, 2026 | 3:11 PM

ಡಾಲಿ ಧನಂಜಯ್ ನಟಿಸಿ ನಿರ್ಮಾಣ ಮಾಡಿರುವ ‘ಮದರ್ ಪ್ರಾಮಿಸ್’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾಕ್ಕೆ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಿನಿಮಾ ಅನ್ನು ಜೀ5ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ನಿವಿನ್ ಪೋಲಿ, ಮಮಿತಾ ಬಿಜು ಒಟ್ಟಿಗೆ ನಟನೆ ಮಾಡಿರುವ ಮಲಯಾಳಂ ಸಿನಿಮಾ ‘ಬೆತ್ಲೆಹೆಮ್ ಕುಟುಂಬ ಯುನಿಟ್’ ಚಿತ್ರಮಂದಿರಗಳಲ್ಲಿ ಭರ್ಜರಿ ಹಿಟ್ ಆಗಿತ್ತು. ಇದೀಗ ಅದೇ ಸಿನಿಮಾ ಒಟಿಟಿಗೆ ಬಂದಿದೆ. ಜಿಯೋ ಹಾಟ್ಸ್ಟಾರ್ನಲ್ಲಿ ಸಿನಿಮಾ ನೋಡಬಹುದಾಗಿದೆ.

ತಮಿಳಿನ ಜನಪ್ರಿಯ ನಟ ಕಾರ್ತಿ ಮತ್ತು ಕನ್ನಡತಿ ಆಶಿಕಾ ರಂಗನಾಥ್ ಒಟ್ಟಿಗೆ ನಟಿಸಿರುವ ತಮಿಳು ಸಿನಿಮಾ ‘ಸರ್ದಾರ್ 2’ ಈ ವಾರ ಒಟಿಟಿಗೆ ಬಂದಿದೆ. ಕೆಲ ವಾರಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಈ ಸಿನಿಮಾವನ್ನು ಪ್ರೈಂ ವಿಡಿಯೋನಲ್ಲಿ ವೀಕ್ಷಿಸಬಹುದಾಗಿದೆ.

ಸಂದೀಪ್ ರೆಡ್ಡಿ ವಂಗಾ ಪ್ರೆಸೆಂಟ್ ಮಾಡಿರು ‘ರೋಮಾಂಚಕಂ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದಾಗ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಈ ಹಾಸ್ಯ ಪ್ರಧಾನ ಲವ್ ಸ್ಟೋರಿಯನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.

‘ಓಹ್ ಮೈ ಡಾಗ್’ ಒಂದು ವಿಭಿನ್ನ ಕತೆಯುಳ್ಳ ಸಿನಿಮಾ. ಎರಡು ಬೇರೆ ಬೇರೆ ಕಡೆ ಇಬ್ಬರು ಮಕ್ಕಳು ನಾಯಿ ರಕ್ಷಣೆ ಮಾಡುವ ಹಾಗೂ ಅದರ ಸುತ್ತ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಅನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ನಟಿಯರಾದ ಪೂಜಾ ಹೆಗ್ಡೆ, ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ನಟನೆ ಮಾಡಿರುವ ‘ಪೂಜಾ ಮೇರಿ ಜಾನ್’ ಮಹಿಳಾ ಪ್ರಧಾನ, ಥ್ರಿಲ್ಲರ್ ಸಿನಿಮಾ ಆಗಿದೆ. ಸಾವು, ಕಾನೂನು ಹೋರಾಟ ಹಲವು ಅಂಶಗಳನ್ನು ಒಳಗೊಂಡಿರುವ ಈ ಸಿನಿಮಾವನ್ನು ಜೀ5ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

‘ಐಪಿ ಮ್ಯಾನ್’ ಜನಪ್ರಿಯ ಆಕ್ಷನ್ ಸಿನಿಮಾ ಸರಣಿ ಆಗಿದೆ. ಕುಂಫು ಸಮರ ಕಲೆಯಲ್ಲಿ ಒಳಗೊಂಡ ಈ ಸಿನಿಮಾ ಸರಣಿಯ ಹೊಸ ಸಿನಿಮಾ ಇದೀಗ ಲಯನ್ಸ್ ಗೇಟ್ ಪ್ಲೇ ಒಟಿಟಿಯಲ್ಲಿ ರಿಲೀಸ್ ಆಗಿದೆ. ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯ ವ್ಯಕ್ತವಾಗಿದೆ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More



