AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಿಷಯದಲ್ಲಿ ಯಶ್‌ಗಿಂತ ನಾನಿ ಬೆಸ್ಟ್; ನಟಿ ಶ್ರೀನಿಧಿ ಶೆಟ್ಟಿ ನೇರ ಮಾತು

ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ ಸಂದರ್ಶನವೊಂದರಲ್ಲಿ ‘ಯಶ್ ಅಥವಾ ನಾನಿ, ಯಾರು ಹೆಚ್ಚು ನಗಿಸುತ್ತಾರೆ?’ ಎಂಬ ಪ್ರಶ್ನೆಗೆ ಸ್ವಾರಸ್ಯಕರ ಉತ್ತರ ನೀಡಿದ್ದಾರೆ. ಯಶ್ ಗಂಭೀರ ಸ್ವಭಾವದವರಾಗಿದ್ದು ಅಗತ್ಯವಿದ್ದಷ್ಟೇ ಮಾತನಾಡುತ್ತಾರೆ. ಆದರೆ ನಾನಿ ತಮ್ಮಂತೆಯೇ ಮುಕ್ತವಾಗಿ ಕಾಲೆಳೆಯುತ್ತಾ ಸದಾ ತಮಾಷೆ ಮಾಡುವುದರಿಂದ ಅವರೇ ಹೆಚ್ಚು ನಗಿಸುತ್ತಾರೆ ಎಂದು ನಾನಿ ಅವರನ್ನು ಆಯ್ಕೆ ಮಾಡಿದ್ದಾರೆ.

ಈ ವಿಷಯದಲ್ಲಿ ಯಶ್‌ಗಿಂತ ನಾನಿ ಬೆಸ್ಟ್; ನಟಿ ಶ್ರೀನಿಧಿ ಶೆಟ್ಟಿ ನೇರ ಮಾತು
ಶ್ರೀನಿಧಿ-ನಾನಿ, ಶ್ರೀನಿಧಿ-ಯಶ್
ರಾಜೇಶ್ ದುಗ್ಗುಮನೆ
|

Updated on: Oct 03, 2026 | 1:19 PM

Share

ಕೆಜಿಎಫ್ ಸಿನಿಮಾ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿದ ನಟಿ ಶ್ರೀನಿಧಿ ಶೆಟ್ಟಿ, ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಕನ್ನಡದ ಜೊತೆ ಅವರು ಪರಭಾಷೆಯಲ್ಲೂ ಬ್ಯುಸಿ ಇದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಕೇಳಲಾದ ಕುತೂಹಲಕಾರಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಧ್ಯಮ ಸಂವಾದದ ವೇಳೆಯಲ್ಲಿ ‘ಯಶ್ ಅಥವಾ ನಾನಿ, ನಿಮ್ಮನ್ನು ಯಾರು ಹೆಚ್ಚು ನಗಿಸುತ್ತಾರೆ?’ ಎಂಬ ಪ್ರಶ್ನೆ ಶ್ರೀನಿಧಿ ಅವರಿಗೆ ಎದುರಾಗಿತ್ತು.

ಚಿತ್ರರಂಗದ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಶ್ರೀನಿಧಿ, ಯಶ್ ಹಾಗೂ ನಾನಿ ಇಬ್ಬರೂ ತಮಗೆ ಸಮಾನವಾಗಿ ಆಪ್ತರು ಎಂದು ತಿಳಿಸಿದರು. ‘ಕನ್ನಡ ಚಿತ್ರರಂಗದಲ್ಲಿ ಯಶ್ ನನ್ನ ಮೊದಲ ನಟರಾದರೆ, ತೆಲುಗು ಚಿತ್ರರಂಗದಲ್ಲಿ (ಹಿಟ್: ದಿ ಥರ್ಡ್​ ಕೇಸ್) ನಾನಿ ನನ್ನ ಮೊದಲ ಸಹನಟರಾಗಿದ್ದಾರೆ. ಹೀಗಾಗಿ ಈ ಇಬ್ಬರೂ ಅದ್ಭುತ ನಟರು ನನಗೆ ಅತ್ಯಂತ ವಿಶೇಷ ವ್ಯಕ್ತಿಗಳು’ ಎಂದು ಅವರು ಬಣ್ಣಿಸಿದರು.

ಯಶ್ ಅವರ ಸ್ವಭಾವದ ಬಗ್ಗೆ ವಿವರಣೆ ನೀಡಿದ ನಟಿ, ‘ರಾಕಿ ಭಾಯ್ ಯಶ್ ಅವರು ಸ್ವಲ್ಪ ಗಂಭೀರ ಅಂದರೆ ರಿಸರ್ವ್ಡ್ ಸ್ವಭಾವದವರು. ಅವರು ಅಗತ್ಯವಿದ್ದಷ್ಟೇ ಮಾತನಾಡುತ್ತಾರೆ, ಆದರೆ ಸೆಟ್‌ನಲ್ಲಿ ಅವರದ್ದೇ ಆದ ವಿಭಿನ್ನ ಹಾಗೂ ತಮಾಷೆಯ ಕ್ಷಣಗಳಿರುತ್ತವೆ’ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಇನ್ನೊಂದೆಡೆ, ತೆಲುಗು ನಟ ನಾನಿ ಅವರ ವ್ಯಕ್ತಿತ್ವವನ್ನು ಶ್ರೀನಿಧಿ ತಮ್ಮ ಸ್ವಭಾವಕ್ಕೆ ಹೋಲಿಸಿದರು. ‘ನಾನಿ ಅವರು ನನ್ನಂತೆಯೇ ತುಂಬಾ ಮುಕ್ತವಾಗಿ ಮಾತನಾಡುತ್ತಾರೆ. ಸೆಟ್‌ನಲ್ಲಿ ಸದಾ ಜೋಕ್ಸ್ ಮಾಡುತ್ತಾ, ಕಾಲೆಳೆಯುತ್ತಾ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಾರೆ’ ಎಂದು ನಾನಿ ಅವರ ತಮಾಷೆಯ ಗುಣವನ್ನು ಶ್ಲಾಘಿಸಿದರು.

ಇದನ್ನೂ ಓದಿ: ತ್ರಿವಿಕ್ರಮ್ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ಕೆಜಿಎಫ್  ಸುಂದರಿಗೆ ಸಿಗಲಿದೆಯೇ ಬಹುದೊಡ್ಡ ಬ್ರೇಕ್?

ಅಂತಿಮವಾಗಿ ‘ಯಾರು ಹೆಚ್ಚು ನಗಿಸುತ್ತಾರೆ?’ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಶ್ರೀನಿಧಿ, ‘ನಗಿಸುವ ವಿಚಾರಕ್ಕೆ ಬಂದರೆ ಯಶ್‌ಗಿಂತ ನಾನಿ ಅವರೇ ಬೆಸ್ಟ್’ ಎಂದು ನಾನಿ ಅವರನ್ನು ಆಯ್ಕೆ ಮಾಡಿದರು. ಶ್ರೀನಿಧಿ ಅವರ ಉತ್ತರ ಅಭಿಮಾನಿಗಳಲ್ಲಿ ಭಾರಿ ಅಚ್ಚರಿ ಮತ್ತು ಸಂಭ್ರಮವನ್ನು ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More