AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Roberrt vs Kotigobba 3: ಸಿನಿಮಾಗಳ ರಿಲೀಸ್​ಗೂ ಮುನ್ನ ಇನ್ನೊಂದು ರೀತಿಯಲ್ಲಿ ದರ್ಶನ್​-ಸುದೀಪ್​ ಪೈಪೋಟಿ!

Roberrt Making Video | Kotigobba 3 Making Video: ‘ರಾಬರ್ಟ್’ ಮತ್ತು ‘ಕೋಟಿಗೊಬ್ಬ 3’ ಚಿತ್ರಗಳು ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿವೆ. ರಿಲೀಸ್​ಗೂ ಮುನ್ನವೇ ಇವುಗಳ ನಡುವೆ ಪೈಪೋಟಿ ನಡೆಯುತ್ತಿದೆ.

Roberrt vs Kotigobba 3: ಸಿನಿಮಾಗಳ ರಿಲೀಸ್​ಗೂ ಮುನ್ನ ಇನ್ನೊಂದು ರೀತಿಯಲ್ಲಿ ದರ್ಶನ್​-ಸುದೀಪ್​ ಪೈಪೋಟಿ!
ದರ್ಶನ್​ - ಕಿಚ್ಚ ಸುದೀಪ್​
ರಾಜೇಶ್ ದುಗ್ಗುಮನೆ
| Edited By: |

Updated on:Mar 08, 2021 | 6:47 PM

Share

ಸ್ಯಾಂಡಲ್​ವುಡ್​ನ ದೊಡ್ಡ ಸ್ಟಾರ್​ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ರಿಲೀಸ್​ ಆಗುತ್ತಿವೆ. ‘ಪೊಗರು’ ಬಳಿಕ ‘ರಾಬರ್ಟ್​’ ಆಗಮಿಸುತ್ತಿದೆ. ನಂತರ ‘ಯುವರತ್ನ’, ‘ಸಲಗ’, ‘ಕೋಟಿಗೊಬ್ಬ 3’ ಚಿತ್ರಗಳು ತೆರೆಕಾಣಲಿವೆ. ಗಲ್ಲಾಪೆಟ್ಟಿಗೆಯಲ್ಲಿ ಕ್ಲ್ಯಾಶ್​ ತಪ್ಪಿಸಲು ಸೂಕ್ತ ರೀತಿಯಲ್ಲಿ ಪ್ಲ್ಯಾನ್​ ಮಾಡಿಕೊಳ್ಳಲಾಗಿದೆ. ಹಾಗಿದ್ದರೂ ‘ಕೋಟಿಗೊಬ್ಬ 3’ ಮತ್ತು ‘ರಾಬರ್ಟ್​’ ಸಿನಿಮಾಗಳ ನಡುವೆ ಬೇರೊಂದು ರೀತಿಯಲ್ಲಿ ಹಣಾಹಣಿ ಏರ್ಪಟ್ಟಿದೆ.

ಮೇಕಿಂಗ್​ ವಿಡಿಯೋಗಳ ಮುಖಾಮುಖಿ ‘ರಾಬರ್ಟ್​’ ಸಿನಿಮಾ ಮಾ.11ರಂದು ಭರ್ಜರಿಯಾಗಿ ಬಿಡುಗಡೆ ಆಗಲಿದೆ. ‘ಕೋಟಿಗೊಬ್ಬ 3’ ಚಿತ್ರ ಏಪ್ರಿಲ್​ ಕೊನೇ ವಾರದಲ್ಲಿ ಆಗಮಿಸಲಿದೆ. ಆದರೆ ಈಗ ಈ ಎರಡೂ ಸಿನಿಮಾಗಳು ಒಂದು ದಿನದ ಆಸುಪಾಸಿನಲ್ಲಿ ಮೇಕಿಂಗ್ ವಿಡಿಯೋಗಳನ್ನು ರಿಲೀಸ್​ ಮಾಡಿಕೊಂಡಿವೆ. ಮಾರ್ಚ್​ 7ರಂದು ‘ಕೋಟಿಗೊಬ್ಬ 3’ ಹಾಗೂ ಮಾ.8ರಂದು ‘ರಾಬರ್ಟ್​’ ಸಿನಿಮಾದ ಮೇಕಿಂಗ್​ ವಿಡಿಯೋಗಳು ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ವೀಕ್ಷಣೆಗೆ ಲಭ್ಯವಾಗಿವೆ. ಹೀಗೆ ಏಕಕಾಲಕ್ಕೆ ಈ ಎರಡು ಸಿನಿಮಾಗಳು ಸದ್ದು ಮಾಡುತ್ತಿವೆ. ‘ರಾಬರ್ಟ್​’ ಬಿಡುಗಡೆ ಹೊಸ್ತಿಲಿನಲ್ಲೇ ‘ಕೋಟಿಗೊಬ್ಬ 3’ ಮೇಕಿಂಗ್​ ವಿಡಿಯೋ ರಿಲೀಸ್​ ಆಗಿರುವುದು ಅಚ್ಚರಿಗೆ ಕಾರಣ ಆಗಿದೆ.

ತೆರೆಹಿಂದಿನ ಕಥೆ ಹೇಳಿದ ‘ರಾಬರ್ಟ್​’ ತಂಡ ಸೋಮವಾರ (ಮಾ.8) ಬಿಡುಗಡೆಯಾದ ಮೇಕಿಂಗ್​ ವಿಡಿಯೋ ಮೂಲಕ ಹಲವು ವಿಚಾರಗಳನ್ನು ‘ರಾಬರ್ಟ್​’ ತಂಡ ಹಂಚಿಕೊಂಡಿದೆ. ಸಿನಿಮಾ ಕಾನ್ಸೆಪ್ಟ್​ ಹೊಳೆದಿದ್ದು ಹೇಗೆ? ಫೈಟಿಂಗ್​ ದೃಶ್ಯಗಳನ್ನು ಹೇಗೆ ಚಿತ್ರಿಸಲಾಗಿದೆ? ನಾಯಕಿ ಆಶಾ ಭಟ್​ ಅವರ ಮೊದಲ ದಿನದ ಶೂಟಿಂಗ್​ ಅನುಭವ ಹೇಗಿತ್ತು? ದರ್ಶನ್​ ಅವರ ಡೆಡಿಕೇಷನ್​ ಯಾವ ರೀತಿ ಇತ್ತು ಎಂಬಿತ್ಯಾದಿ ವಿಷಯಗಳ ಬಗ್ಗೆ ಚುಟುಕು ಮಾಹಿತಿ ನೀಡಲಾಗಿದೆ. ಮಾ. 9 ಮತ್ತು 10ರಂದು ಕೂಡ ಈ ಸಿನಿಮಾದ ಇನ್ನೆರಡು ಮೇಕಿಂಗ್​ ವಿಡಿಯೋಗಳು ಬಿಡುಗಡೆ ಆಗಲಿವೆ.

ಕೋಟಿಗೊಬ್ಬನ ಶೂಟಿಂಗ್​ ಝಲಕ್​ ಸುದೀಪ್​ ಅವರ ‘ಕೋಟಿಗೊಬ್ಬ 3’ ಸಿನಿಮಾ ಮೇಲೆ ಕೂಡ ಅಷ್ಟೇ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಕೋಟಿಗೊಬ್ಬ ಎಂಬ ಶೀರ್ಷಿಕೆಯೇ ಹೈಪ್​ಗೆ ಕಾರಣ ಆಗಿದೆ. ಸುದೀಪ್​ ಜೊತೆ ಮಡೋನ್ನಾ ಸೆಬಾಸ್ಟಿಯನ್​​, ಶ್ರದ್ಧಾ ದಾಸ್​, ಅಫ್ತಾಬ್​ ಶಿವದಾಸಾನಿ, ರವಿಶಂಕರ್​ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾದ ಶೂಟಿಂಗ್​ನ ಝಲಕ್​ ತೋರಿಸುವ ಸಲುವಾಗಿ ಮೇಕಿಂಗ್​ ವಿಡಿಯೋ ಹೊರಬಂದಿದೆ. ಭಾನುವಾರ (ಮಾ.7) ಬಿಡುಗಡೆಯಾದ ಈ ವಿಡಿಯೋ ಒಂದು ದಿನದಲ್ಲಿ ನಾಲ್ಕೂವರೆ ಲಕ್ಷ ವ್ಯೂಸ್​ ಪಡೆದುಕೊಂಡಿದೆ. ತೆರೆಹಿಂದಿನ ತುಣುಕುಗಳನ್ನು ನೋಡಿದ ಅಭಿಮಾನಿಗಳ ಮನದಲ್ಲಿ ಚಿತ್ರದ ಬಗ್ಗೆ ಇದ್ದ ನಿರೀಕ್ಷೆ ದ್ವಿಗುಣವಾಗಿದೆ.

ಇದನ್ನೂ ಓದಿ: Bigg Boss Kannada : ಬಿಗ್​ ಬಾಸ್​ ಮನೆಯಲ್ಲಿ ದರ್ಶನ್​ ಹಾಡು ಯಾಕೆ ಪ್ಲೇ ಆಗಲ್ಲ? ಸುದೀಪ್​ಗೆ ಪ್ರಶ್ನೆ ಎಸೆದ ‘ಡಿ ಬಾಸ್’​ ಫ್ಯಾನ್ಸ್​!

Roberrt: ‘ರಾಬರ್ಟ್​’ ಚಿತ್ರಕ್ಕೆ U/A ಪ್ರಮಾಣಪತ್ರ! ‘ಪೊಗರು’ ಕಿರಿಕ್​ ನಂತರ ದರ್ಶನ್​ ಚಿತ್ರದಲ್ಲಿ ಸೆನ್ಸಾರ್​ ಮಂಡಳಿ ಕಣ್ಣಿಟ್ಟ ಅಂಶಗಳೇನು?

Published On - 1:27 pm, Mon, 8 March 21

ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಚಾಕು, ಲಾಂಗ್‌ ಹಿಡಿದು ಬೀದಿಗಳಲ್ಲಿ ಅಡ್ಡಾಡುತ್ತಿರುವ ಕಳ್ಳರು
ಚಾಕು, ಲಾಂಗ್‌ ಹಿಡಿದು ಬೀದಿಗಳಲ್ಲಿ ಅಡ್ಡಾಡುತ್ತಿರುವ ಕಳ್ಳರು
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ