Bigg Boss Kannada : ಬಿಗ್​ ಬಾಸ್​ ಮನೆಯಲ್ಲಿ ದರ್ಶನ್​ ಹಾಡು ಯಾಕೆ ಪ್ಲೇ ಆಗಲ್ಲ? ಸುದೀಪ್​ಗೆ ಪ್ರಶ್ನೆ ಎಸೆದ ‘ಡಿ ಬಾಸ್’​ ಫ್ಯಾನ್ಸ್​!

ಬಿಗ್​ ಬಾಸ್​ ಕಾರ್ಯಕ್ರಮದ ಎಲ್ಲ ಆಯಾಮಗಳನ್ನು ವೀಕ್ಷಕರು ಗಮನಿಸುತ್ತ ಇದ್ದಾರೆ. ಡೊಡ್ಮನೆಯೊಳಗೆ ದರ್ಶನ್ ಹಾಡು ಕೇಳಿಸದೇ ಇರುವುದಕ್ಕೆ ‘ಡಿ ಬಾಸ್’​ ಫ್ಯಾನ್ಸ್​ಗೆ ಅಸಮಾಧಾನ ಇದೆ.

Bigg Boss Kannada : ಬಿಗ್​ ಬಾಸ್​ ಮನೆಯಲ್ಲಿ ದರ್ಶನ್​ ಹಾಡು ಯಾಕೆ ಪ್ಲೇ ಆಗಲ್ಲ? ಸುದೀಪ್​ಗೆ ಪ್ರಶ್ನೆ ಎಸೆದ ‘ಡಿ ಬಾಸ್’​ ಫ್ಯಾನ್ಸ್​!
ಸುದೀಪ್​ - ದರ್ಶನ್​
Follow us
ರಾಜೇಶ್ ದುಗ್ಗುಮನೆ
| Updated By: ರಶ್ಮಿ ಕಲ್ಲಕಟ್ಟ

Updated on: Mar 07, 2021 | 2:00 PM

ಸತತ 8ನೇ ಬಾರಿಗೆ ನಟ ಕಿಚ್ಚ ಸುದೀಪ್​ ಅವರು ಕನ್ನಡ ಬಿಗ್​ ಬಾಸ್​ ಕಾರ್ಯಕ್ರಮದ ನಿರೂಪಣೆ ವಹಿಸಿಕೊಂಡಿದ್ದಾರೆ. ಮನೆಯೊಳಗಿನ ಆಗುಹೋಗುಗಳ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ. ಸುದೀಪ್​ ನಡೆಸಿಕೊಡುತ್ತಿರುವ ಈ ಕಾರ್ಯಕ್ರಮವನ್ನು ದರ್ಶನ್​ ಫ್ಯಾನ್ಸ್​ ಕೂಡ ನೋಡುತ್ತಿದ್ದಾರೆ. ಈಗ ‘ಡಿ ಬಾಸ್​’ ಅಭಿಮಾನಿಗಳು ಒಂದು ತಕರಾರು ತೆಗೆದಿದ್ದಾರೆ. ಬಿಗ್​ ಬಾಸ್​ ಮನೆಯೊಳಗೆ ದರ್ಶನ್​ ಹಾಡುಗಳು ಯಾಕೆ ಪ್ಲೇ ಆಗುತ್ತಿಲ್ಲ ಎಂದು ಅವರು ಪ್ರಶ್ನಿಸುತ್ತಿದ್ದಾರೆ.

ಬಿಗ್​ ಬಾಸ್​ ಸ್ಪರ್ಧಿಗಳು ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಏಳಬೇಕು. 8 ಗಂಟೆ ನಂತರ ಯಾರೂ ಮಲಗುವಂತಿಲ್ಲ. ಅವರನ್ನು ಎದ್ದೇಳಿಸಲು ಅಲಾರ್ಮ್​ ರೀತಿಯಲ್ಲಿ ಪ್ರತಿದಿನ ಹಾಡುಗಳನ್ನು ಪ್ಲೇ ಮಾಡಲಾಗುತ್ತದೆ. ದಿನವೂ ಬೇರೆ ಬೇರೆ ಸಿನಿಮಾ ಗೀತೆಗಳು ಕೇಳಿಬರುತ್ತಿವೆ. ಅದಕ್ಕೆ ಮನೆಯ ಸದಸ್ಯರು ಡ್ಯಾನ್ಸ್​ ಮಾಡುವ ಮೂಲಕ ಹೊಸ ಉತ್ಸಾಹದೊಂದಿಗೆ ದಿನವನ್ನು ಆರಂಭಿಸುತ್ತಾರೆ. ಆದರೆ ಅಲ್ಲಿ ದರ್ಶನ್​ ಸಿನಿಮಾ ಹಾಡುಗಳನ್ನು ಪ್ಲೇ ಮಾಡಲಾಗುತ್ತಿಲ್ಲ ಎಂಬುದನ್ನು ‘ಚಾಲೆಂಜಿಂಗ್​ ಸ್ಟಾರ್​’ ಅಭಿಮಾನಿಗಳು ಗಮನಿಸಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿಯು ಬಿಗ್​ ಬಾಸ್​ನ ಹಲವು ಪ್ರೋಮೋ ಮತ್ತು ಪೋಸ್ಟರ್​ಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದೆ. ಅದಕ್ಕೆ ಕಾಮೆಂಟ್​ ಮಾಡಿರುವ ದರ್ಶನ್​ ಅಭಿಮಾನಿಗಳು ನೇರವಾಗಿ ಸುದೀಪ್​ಗೆ ಒಂದು ಮನವಿ ಮಾಡಿಕೊಂಡಿದ್ದಾರೆ. ‘ಕಿಚ್ಚ ಸುದೀಪ್​ ಸರ್, ಮಾರ್ನಿಂಗ್​ ನಮ್ಮ ಡಿ ಬಾಸ್​ ಹಾಡುಗಳನ್ನು ಪ್ಲೇ ಮಾಡಿ’ ಎಂದು ಕಾಮೆಂಟ್​ ಮಾಡಿದ್ದಾರೆ. ಕಾರ್ಯಕ್ರಮದ ಆಯೋಜಕರು ಈ ಮನವಿಯನ್ನು ಪರಿಗಣಿಸುತ್ತಾರೋ ಇಲ್ಲವೋ ಎಂಬ ಕೌತುಕ ಈಗ ನಿರ್ಮಾಣ ಆಗಿದೆ.

‘ಕಳೆದ ಎರಡು ಸೀಸನ್​ಗಳಿಂದ ದರ್ಶನ್​ ಹಾಡುಗಳು ಪ್ಲೇ ಆಗ್ತಿಲ್ಲ, ಅವರ ಸಾಂಗ್​ ಹಾಕೋಕೆ ಯೋಗ್ಯತೆ ಬೇಕು ಅಷ್ಟೇ’ ಎಂದೆಲ್ಲ ಡಿ ಬಾಸ್​ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಅಲ್ಲಿ ಹಾಡು ಪ್ಲೇ ಮಾಡುವವರಿಗೂ ಸುದೀಪ್​ ಸರ್​ಗೂ ಯಾವುದೇ ಸಂಬಂಧ ಇಲ್ಲ’ ಎಂದು ಕಿಚ್ಚನ ಅಭಿಮಾನಿಗಳು ಸಮಜಾಯಿಷಿ ನೀಡಿದ್ದಾರೆ. ಒಟ್ಟಿನಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪರ-ವಿರೋಧದ ಚರ್ಚೆ ಜೋರಾಗಿದೆ. ನಾಲ್ಕು ವರ್ಷದ ಹಿಂದೆಯೇ ಸುದೀಪ್​-ದರ್ಶನ್​ ನಡುವಿನ ಸ್ನೇಹ ಮುರಿದುಬಿದ್ದಿತ್ತು. ಅದೇ ಕಾರಣಕ್ಕಾಗಿ ಬಿಗ್​ ಬಾಸ್​ ಮನೆಯೊಳಗೆ ‘ಡಿ ಬಾಸ್​’ ಹಾಡುಗಳನ್ನು ಹಾಕಲಾಗುತ್ತಿಲ್ಲವೇ ಎಂಬ ಪ್ರಶ್ನೆಗೆ ಆಯೋಜಕರೇ ಉತ್ತರ ನೀಡಬೇಕು.

Darshan Fans Comment on Bigg Boss Post

ದರ್ಶನ್​ ಅಭಿಮಾನಿಗಳ ಕಾಮೆಂಟ್​

ಇದನ್ನೂ ಓದಿ: ದರ್ಶನ್​ ಮತ್ತು ಸುದೀಪ್​ ಸ್ನೇಹ ಮುರಿದು ಬಿದ್ದ ಆ ಕಹಿ ಘಳಿಗೆಗೆ ಈಗ ನಾಲ್ಕು ವರ್ಷ!

Darshan: ‘ರಾಬರ್ಟ್​’ ಬಿಡುಗಡೆಗೂ ಮುನ್ನ ಮತ್ತೊಂದು ಮುಖ್ಯ ವಿಚಾರದ ಬಗ್ಗೆ ‘ಚಾಲೆಂಜಿಂಗ್​ ಸ್ಟಾರ್’ ದರ್ಶನ್​ ಪ್ರಸ್ತಾಪ!

ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ