AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Darshan: ‘ರಾಬರ್ಟ್​’ ರಿಲೀಸ್​ಗೂ ಮುನ್ನ ದರ್ಶನ್​ ಅಭಿಮಾನಿಗಳಿಗೆ 3 ದಿನ ಬ್ಯಾಕ್​ ಟು ಬ್ಯಾಕ್​ ಹಬ್ಬವೋ ಹಬ್ಬ!

ದರ್ಶನ್​ ಅಭಿನಯದ ‘ರಾಬರ್ಟ್​’ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅದಕ್ಕೂ ಮುನ್ನವೇ ಅಭಿಮಾನಿಗಳಿಗೆ ಚಿತ್ರತಂಡದಿಂದ ಸರ್ಪ್ರೈಸ್​ ಸಿಗುತ್ತಿದೆ. ಏನದು?

Darshan: ‘ರಾಬರ್ಟ್​’ ರಿಲೀಸ್​ಗೂ ಮುನ್ನ ದರ್ಶನ್​ ಅಭಿಮಾನಿಗಳಿಗೆ 3 ದಿನ ಬ್ಯಾಕ್​ ಟು ಬ್ಯಾಕ್​ ಹಬ್ಬವೋ ಹಬ್ಬ!
ದರ್ಶನ್​ - ಆಶಾ ಭಟ್​
ರಾಜೇಶ್ ದುಗ್ಗುಮನೆ
| Edited By: |

Updated on: Mar 07, 2021 | 5:49 PM

Share

‘ಡಿ ಬಾಸ್’​ ದರ್ಶನ್​ ಅವರ ’ರಾಬರ್ಟ್​’ ಸಿನಿಮಾ ಬಿಡುಗಡೆಗೂ ಮೊದಲೇ ಧೂಳೆಬ್ಬಿಸುತ್ತಿದೆ. ಟ್ರೇಲರ್​ ಸೂಪರ್ ಹಿಟ್​ ಆಗಿದೆ. ಹಾಡುಗಳು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿವೆ. ಇನ್ನೇನಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ಗೆದ್ದು ಬೀಗುವುದೊಂದೇ ಬಾಕಿ. ಮಾ.11ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಆದರೆ ಅದಕ್ಕೂ ಮೊದಲೇ ಅಭಿಮಾನಿಗಳನ್ನು ಖುಷಿಪಡಿಸಲು ಚಿತ್ರತಂಡ ನಿರ್ಧರಿಸಿದೆ. ಮಾ.8ರಿಂದ ಮಾ.10ರವರೆಗೆ ವಿಶೇಷ ಮೇಕಿಂಗ್​ ವಿಡಿಯೋಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ರಾಬರ್ಟ್​’ ಕೂಡ ಮುಂಚೂಣಿಯಲ್ಲಿದೆ. ದೊಡ್ಡ ಕ್ಯಾನ್ವಾಸ್​ನಲ್ಲಿ ಚಿತ್ರ ತಯಾರಾಗಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ತುಂಬ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಕಾಶಿಯಂತಹ ಲೊಕೇಷನ್​ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಟ್ಟಾರೆಯಾಗಿ ಚಿತ್ರದ ತೆರೆಹಿಂದಿನ ಕೆಲಸ ಹೇಗಿತ್ತು ಎಂಬುದನ್ನು ಅಭಿಮಾನಿಗಳಿಗೆ ತಿಳಿಸುವ ಉದ್ದೇಶದಿಂದ ಮೇಕಿಂಗ್​ ವಿಡಿಯೋವನ್ನು ಚಿತ್ರತಂಡ ಹಂಚಿಕೊಳ್ಳಲಿದೆ. ಮಾ.8ರಿಂದ ಚಿತ್ರ ಬಿಡುಗಡೆ ಆಗುವವರೆಗೆ ಪ್ರತಿದಿನ ಬೆಳಗ್ಗೆ 10.05ಕ್ಕೆ ಒಂದೊಂದು ಮೇಕಿಂಗ್​ ವಿಡಿಯೋ ರಿಲೀಸ್​ ಆಗಲಿದೆ.

ಬಹುದಿನಗಳ ಬಳಿಕ ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವುದರಿಂದ ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಗುರುವಾರವೇ (ಮಾ.11) ‘ರಾಬರ್ಟ್​’ ತೆರೆಕಾಣಲಿದೆ. ಅಂದು ರಜಾ ದಿನ ಇರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕಲಿದ್ದಾರೆ. ಅದರ ಬೆನ್ನಲ್ಲೇ ವೀಕೆಂಡ್​ ದಿನಗಳು ಇರುವುದರಿಂದ ಚಿತ್ರಕ್ಕೆ ಹೆಚ್ಚಿನ ಲಾಭ ಆಗಲಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ.

ತರುಣ್​ ಸುಧೀರ್​ ನಿರ್ದೇಶನದ ‘ರಾಬರ್ಟ್​’ನಲ್ಲಿ ದರ್ಶನ್​ಗೆ ಹಲವು ಗೆಟಪ್​ಗಳಿವೆ. ಅವರಿಗೆ ಜೋಡಿಯಾಗಿ ಭದ್ರಾವತಿ ಬೆಡಗಿ ಆಶಾ ಭಟ್​ ನಟಿಸಿದ್ದಾರೆ. ಇನ್ನುಳಿದ ಮುಖ್ಯಪಾತ್ರಗಳಲ್ಲಿ ಜಗಪತಿ ಬಾಬು, ಅಶೋಕ್​, ರವಿಶಂಕರ್​, ರವಿ ಕಿಶನ್​, ದೇವರಾಜ್​, ವಿನೋದ್​ ಪ್ರಭಾಕರ್​, ಸೋನಲ್​ ಮಂಥೆರೋ ಮುಂತಾದವರು ಅಭಿನಯಿಸಿದ್ದಾರೆ. ಅರ್ಜುನ್​ ಜನ್ಯ ಸಂಗೀತ ನೀಡಿದ್ದು, ಹಾಡುಗಳ ಮೂಲಕ ಈಗಾಗಲೇ ಅವರು ಚಿತ್ರದ ಗೆಲುವಿಗೆ ಬುನಾದಿ ಹಾಕಿಕೊಟ್ಟಿದ್ದಾರೆ.

ಇದನ್ನೂ ಓದಿ: Roberrt: ‘ರಾಬರ್ಟ್​’ ಚಿತ್ರಕ್ಕೆ U/A ಪ್ರಮಾಣಪತ್ರ! ‘ಪೊಗರು’ ಕಿರಿಕ್​ ನಂತರ ದರ್ಶನ್​ ಚಿತ್ರದಲ್ಲಿ ಸೆನ್ಸಾರ್​ ಮಂಡಳಿ ಕಣ್ಣಿಟ್ಟ ಅಂಶಗಳೇನು?

Darshan: ರಾಬರ್ಟ್​ ಬಿಡುಗಡೆಗೂ ಮುನ್ನ ಮತ್ತೊಂದು ಮುಖ್ಯ ವಿಚಾರದ ಬಗ್ಗೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಪ್ರಸ್ತಾಪ!

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More