kotigobba 3 | ಕೋಟಿಗೊಬ್ಬನ ಎಂಟ್ರಿಗೆ ಮುಹೂರ್ತ ಫಿಕ್ಸ್.. ಇಂದು ಚಿತ್ರದ ಮೇಕಿಂಗ್ ರಿಲೀಸ್
ಲಾಕ್ಡೌನ್ನ ನಂತರ ಬಿಗ್ ಸ್ಟಾರ್ಗಳ ಬಿಗ್ ಬಜೆಟ್ ಚಿತ್ರಗಳು ಅಭಿಮಾನಿಗಳಲ್ಲಿ ದೊಡ್ಡ ಕುತೂಹಲ ಹುಟ್ಟಿಸ್ತಿವೆ. ಹೀಗಾಗಿ ಸ್ಟಾರ್ಗಳು ಕೂಡ ಟೈಂ ನೋಡ್ತಾನೇ, ಸಿನಿಮಾದ ಅಪ್ಡೇಟ್ಗಳನ್ನ ನೀಡ್ತಾ ಫ್ಯಾನ್ಸ್ ಫಿದಾ ಮಾಡೋದಕ್ಕೆ ರೆಡಿಯಾಗಿದ್ದಾರೆ. ಸದ್ಯ ಕಿಚ್ಚ ಸುದೀಪ್ ಕೋಟಿಗೊಬ್ಬನಾಗಿ ಮತ್ತೆ ಕಮಾಲ್ ಮಾಡೋಕೆ ಸಿದ್ಧರಾಗಿದ್ದಾರೆ.
ಗಾಂಧಿನಗರದಲ್ಲಿ ಬಿಗ್ಸ್ಟಾರ್ಗಳ ಸಾಲುಸಾಲು ಸಿನಿಮಾಗಳು ರಿಲೀಸ್ಗೆ ರೆಡಿಯಾಗಿವೆ. ಲಾಕ್ಡೌನ್ ನಂತರ ಥಿಯೇಟರ್ಗಳಿಗೆ ಪ್ರೇಕ್ಷಕರನ್ನ ಕರೆತರೋಕೆ ಸ್ಟಾರ್ಸ್ ತಮ್ಮತಮ್ಮ ಚಿತ್ರಗಳ ಕುರಿತು ಕುತೂಹಲ ಹೆಚ್ಚಿಸೋ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ ಪೊಗರು ರಿಲೀಸ್ ಆಗಿ ಶುಭಾರಂಭ ಮಾಡಿದೆ. ನಂತರ ರಾಬರ್ಟ್ ಕೂಡ ಬೆಳ್ಳಿ ಪರದೆ ಮೇಲೆ ಅಬ್ಬರಿಸೋಕೆ ಕೌಂಟ್ಡೌನ್ ಶುರುವಾಗಿದೆ. ಇದರ ಬೆನ್ನಲ್ಲೇ ಕಿಚ್ಚ ಸುದೀಪ್ ಕೋಟಿಗೊಬ್ಬನ ಅವತಾರದಲ್ಲಿ ಬೆಳ್ಳಿ ಪರದೆ ಮೇಲೆ ಅಬ್ಬರಿಸಿ ಬೊಬ್ಬಿರಿಯೋಕೆ ಏಪ್ರಿಲ್ 29ರ ಮುಹೂರ್ತ ಫಿಕ್ಸ್ ಆಗಿದೆ.
ಅಂದಹಾಗೆ ಕಿಚ್ಚ ಸುದೀಪ್ ಕೋಟಿಗೊಬ್ಬನ ಅವತಾರದಲ್ಲಿ ಮತ್ತೆ ಎಂಟ್ರಿ ಆಗ್ತಿರೋದನ್ನ ಕಣ್ತುಂಬಿಕೊಳ್ಳೋದಕ್ಕೆ ಕೋಟ್ಯಂತರ ಅಭಿಮಾನಿ ಬಳಗ ಸಿದ್ಧವಾಗಿದೆ. ಈಗಾಗಲೇ ಕೋಟಿಗೊಬ್ಬನ 2 ಅವತಾರಗಳನ್ನು ಕಣ್ತುಂಬಿಕೊಂಡಿರೋ ಅಭಿಮಾನಿಗಳಿಗೆ ಏಪ್ರಿಲ್ 29 ಮತ್ತಷ್ಟು ಸ್ಪೆಷಲ್ ಆಗಿರಲಿದೆ. ಹಲವಾರು ವಿಶೇಷತೆಗಳ ಜತೆಗೆ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿರೋ ಕೋಟಿಗೊಬ್ಬ-3 ಚಿತ್ರದ ಮೇಕಿಂಗ್ ಇಂದು ರಿಲೀಸ್ ಮಾಡ್ತಿದೆ ಚಿತ್ರತಂಡ. ಬೆಳಗ್ಗೆ 11 ಗಂಟೆಗೆ ಕೋಟಿಗೊಬ್ಬ ಸಿನಿಮಾದ ಮೇಕಿಂಗ್ ರಿಲೀಸ್ ಆಗಲಿದೆ. ಹೀಗಾಗಿ ಕಿಚ್ಚ ಸುದೀಪ್ ಅಭಿಮಾನಿಗಳು ಸಂಭ್ರಮಿಸೋಕೆ ಕೌಂಟ್ಡೌನ್ ಶುರುವಾಗಿದೆ.
Time for #K3 to roll. Here is the beginning of its 1st step towards release. pic.twitter.com/AATiQnKyCS
— Kichcha Sudeepa (@KicchaSudeep) March 3, 2021
‘ಕೋಟಿಗೊಬ್ಬ-3’ ಚಿತ್ರದಲ್ಲಿ ನಟಿಸಿರೋ ಸುದೀಪ್, ಮತ್ತೊಮ್ಮೆ ಬಿಗ್ ಸ್ಕ್ರೀನ್ನಲ್ಲಿ ಅಬ್ಬರಿಸಿ ಬೊಬ್ಬಿರಿಯಲು ಸಿದ್ಧರಾಗಿದ್ದಾರೆ. ಶಿವ ಕಾರ್ತಿಕ್ ಆಕ್ಷನ್ ಕಟ್ ಹೇಳಿ, ಸೂರಪ್ಪ ಬಾಬು ಅದ್ಧೂರಿ ವೆಚ್ಚದಲ್ಲಿ ನಿರ್ಮಿಸಿರೋ ಸಿನಿಮಾ ಇದಾಗಿದೆ. ಹೀಗಾಗಿ ಚಿತ್ರದ ಬಗ್ಗೆ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಾಗ್ತಿದೆ.
ಇದನ್ನೂ ಓದಿ: Kotigobba 3: ಕೋಟಿಗೊಬ್ಬ 3 ತಂಡದಿಂದ ಹೊರಬಿತ್ತು ಬಿಸಿಬಿಸಿ ಸುದ್ದಿ.. ಕಿಚ್ಚನ ಅಭಿಮಾನಿಗಳಿಗೆ ಸದ್ಯದಲ್ಲೇ ಸಿಹಿಯೂಟ
Published On - 6:55 am, Sun, 7 March 21