ಲಕ್ಷಾಂತರ ರೂ. ಮೌಲ್ಯದ ಕಾಸ್ಟ್ಯೂಮ್​ಗಳು ಶೂಟಿಂಗ್​ ಮುಗಿದ ಬಳಿಕ ಏನಾಗುತ್ತವೆ? ಇಲ್ಲಿದೆ ಇಂಟರೆಸ್ಟಿಂಗ್ ವಿವರ!

ಪ್ರತಿ ಸಿನಿಮಾದಲ್ಲಿಯೂ ಕಲಾವಿದರ ಕಾಸ್ಟ್ಯೂಮ್​ಗಳಿಗಾಗಿ ಸಿಕ್ಕಾಪಟ್ಟೆ ಹಣ ಖರ್ಚು ಮಾಡಲಾಗುತ್ತದೆ. ಆದರೆ ಶೂಟಿಂಗ್​ ಮುಗಿದ ಬಳಿಕ ಆ ಬಟ್ಟೆಗಳನ್ನು ಏನು ಮಾಡಲಾಗುತ್ತದೆ ಎಂಬ ಕೌತುಕದ ಪ್ರಶ್ನೆಗೆ ಇಲ್ಲಿದೆ ಉತ್ತರ...

ಲಕ್ಷಾಂತರ ರೂ. ಮೌಲ್ಯದ ಕಾಸ್ಟ್ಯೂಮ್​ಗಳು ಶೂಟಿಂಗ್​ ಮುಗಿದ ಬಳಿಕ ಏನಾಗುತ್ತವೆ? ಇಲ್ಲಿದೆ ಇಂಟರೆಸ್ಟಿಂಗ್ ವಿವರ!
ಅನುಷ್ಕಾ ಶೆಟ್ಟಿ, ಪ್ರಭಾಸ್​, ಕರೀನಾ ಕಪೂರ್​ ಖಾನ್​
Follow us
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​

Updated on: Mar 06, 2021 | 5:02 PM

ಸಿನಿಮಾ ನಿರ್ಮಾಣದಲ್ಲಿ ವಸ್ತ್ರ ವಿನ್ಯಾಸಕ್ಕೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಪ್ರತಿ ಚಿತ್ರದಲ್ಲೂ ಹೀರೋ-ಹೀರೋಯಿನ್​ ಮತ್ತು ಇತರೆ ಪೋಷಕ ಕಲಾವಿದರು ಡಿಫರೆಂಟ್​ ಆಗಿ ಕಾಣಬೇಕು ಎಂಬ ಕಾರಣಕ್ಕೆ ಬಗೆಬಗೆಯ ಉಡುಗೆಗಳನ್ನು ಬಳಸಿಕೊಳ್ಳಲಾಗುತ್ತದೆ. ಅದಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬಾಹುಬಲಿ, ದೇವದಾಸ್​, ಜೋಧಾ ಅಕ್ಬರ್​ ರೀತಿಯ ಹೈಬಜೆಟ್​ ಸಿನಿಮಾಗಳ ಕಾಸ್ಟ್ಯೂಮ್​ಗಾಗಿ ಕೋಟಿ ರೂ. ಬಜೆಟ್​ ಮೀಸಲಾಗಿರುತ್ತದೆ. ಆದರೆ ಒಮ್ಮೆ ಶೂಟಿಂಗ್​ ಮುಗಿದ ಬಳಿಕ ಅವು ಎಲ್ಲಿಗೆ ಹೋಗುತ್ತವೆ ಎಂಬ ಪ್ರಶ್ನೆ ಜನಸಾಮಾನ್ಯರ ಮನದಲ್ಲಿ ಮೂಡುವುದು ಸಹಜ.

ಕಾಸ್ಟ್ಯೂಮ್​ಗಳ ಮರುಬಳಕೆ ಮಂತ್ರ ದುಬಾರಿ ಹಣ ಖರ್ಚು ಮಾಡಿ ಸಿನಿಮಾದ ಕಲಾವಿದರಿಗೆ ಕಾಸ್ಟ್ಯೂಮ್​ ಸಿದ್ಧಪಡಿಸಲಾಗುತ್ತದೆ. ಒಂದು ಸಿನಿಮಾದ ಶೂಟಿಂಗ್​ ಮುಗಿದ ಮೇಲೆ ಆ ಬಟ್ಟೆಗಳನ್ನು ಸಿನಿಮಾ ನಿರ್ಮಾಣ ಸಂಸ್ಥೆಯು ತನ್ನ ಬಳಿಯೇ ಇಟ್ಟುಕೊಳ್ಳುತ್ತದೆ. ಹಾಗೆ ಸಂಗ್ರಹಿಸಿ ಇಟ್ಟುಕೊಂಡು ಕಾಸ್ಟ್ಯೂಮ್​ಗಳನ್ನು ಸಂದರ್ಭಕ್ಕೆ ತಕ್ಕಂತೆ ಮರುಬಳಕೆ ಮಾಡಲಾಗುತ್ತದೆ. ಅದೇ ನಿರ್ಮಾಪಕರ ಬೇರೆ ಸಿನಿಮಾಗಳಲ್ಲಿ ಮುಖ್ಯವಲ್ಲದ ಪಾತ್ರಗಳಿಗೆ ಆ ಬಟ್ಟೆಗಳನ್ನು ನೀಡಲಾಗುತ್ತದೆ. ಹಾಗಂತ ಯಥಾವತ್ತು ಅದೇ ಬಟ್ಟೆಯನ್ನು ಬಳಸುವುದಿಲ್ಲ. ಬದಲಿಗೆ, ಅದಕ್ಕೆ ಹೊಸ ವಿನ್ಯಾಸದ ಸ್ಪರ್ಶ ನೀಡುವುದರಿಂದ ಅದು ಈ ಹಿಂದೆ ಯಾವುದೋ ಸಿನಿಮಾದಲ್ಲಿ ಬಳಕೆ ಆದ ಕಾಸ್ಟ್ಯೂಮ್​ ಎಂಬುದು ಪ್ರೇಕ್ಷಕರಿಗೆ ಗೊತ್ತಾಗುವುದು ಕೂಡ ಇಲ್ಲ.

ಮನೆಗೆ ತೆಗೆದುಕೊಂಡು ಹೋಗ್ತಾರೆ ತಾರೆಯರು! ಶೂಟಿಂಗ್​ ಮುಗಿದ ಬಳಿಕ ಕೆಲವು ಕಾಸ್ಟ್ಯೂಮ್​ಗಳನ್ನು ನಟ-ನಟಿಯರು ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಅಚ್ಚರಿ ಎನಿಸಿದರೂ ಇದು ನಿಜ. ಹಾಗಂತ ಅವರಿಗೆ ಬಟ್ಟೆಗಳ ಕೊರತೆ ಆಗಿದೆ ಅಂತೇನಲ್ಲ. ತಾವು ಅಭಿನಯಿಸಿದ ಪಾತ್ರದ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದ್ದರೆ ಅದರ ನೆನಪಿಗಾಗಿ ಆ ಕಾಸ್ಟ್ಯೂಮ್​ಗಳನ್ನು ಅವರು ಸ್ಮರಣಿಕೆ ರೀತಿಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ದೀಪಿಕಾ ಪಡುಕೋಣೆ, ರಿಷಿ ಕಪೂರ್​ ಮುಂತಾದ ಸೆಲೆಬ್ರಿಟಿಗಳು ಈ ರೀತಿ ಮಾಡಿದ್ದುಂಟು.

ಸಮಾಜಮುಖಿ ಕಾರ್ಯಕ್ಕಾಗಿ ಬಟ್ಟೆ ಹರಾಜು ಸೆಲೆಬ್ರಿಟಿಗಳು ಬಳಸಿದ ವಸ್ತುಗಳನ್ನು ಹರಾಜು ಹಾಕುವುದು ಮತ್ತು ಅದರಿಂದ ಬಂದ ಹಣವನ್ನು ಸಾಮಾಜಿಕ ಕಳಕಳಿಯ ಕೆಲಸಗಳಿಗೆ ಬಳಸುವುದು ಹೊಸದೇನೂ ಅಲ್ಲ. ಅದೇ ತಂತ್ರವನ್ನು ಸಿನಿಮಾ ಕಾಸ್ಟ್ಯೂಮ್​ಗಳಿಗೂ ಅನ್ವಯಿಸಲಾಗುತ್ತದೆ. ಅದಕ್ಕೆಂದೇ ಮೀಸಲಿರುವ ವೆಬ್​ಸೈಟ್​ಗಳಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತದೆ. ಅತಿ ಹೆಚ್ಚು ಹಣವನ್ನು ಬಿಡ್​ ಮಾಡುವವರಿಗೆ ಆ ಕಾಸ್ಟ್ಯೂಮ್​ ಸಿಗುತ್ತದೆ. ಕೆಲವೇ ಸಾವಿರ ಬೆಲೆಯ ಬಟ್ಟೆಗಳು ಲಕ್ಷಾಂತರ ರೂಪಾಯಿಗೆ ಹರಾಜಾಗುವುದಂಟು!

ಇದನ್ನೂ ಓದಿ: ರಾಬರ್ಟ್‌ ಸಿನಿಮಾನ್ನ ನಾನು ನೋಡುತ್ತೇನೆ, ನೀವೂ ನೋಡಿ; ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ

Hero Movie Review: ಈ ಹೀರೋ ಎಲ್ಲರಂತಲ್ಲ; ಪ್ರೇಕ್ಷಕರು ಅಂದುಕೊಂಡಂತೆ ಏನೂ ನಡೆಯಲ್ಲ!