Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಬರ್ಟ್‌ ಸಿನಿಮಾನ್ನ ನಾನು ನೋಡುತ್ತೇನೆ, ನೀವೂ ನೋಡಿ – ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ

ಬೆಂಗಳೂರು: ವಿಕಾಸಸೌಧದಲ್ಲಿ ಕೃಷಿ ರಾಯಭಾರಿಯಾಗಿ ನಟ ದರ್ಶನ್‌ ಅಧಿಕಾರ ಸ್ವೀಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ಹಸಿರು ಶಾಲು ಹೊದಿಸಿ, ಮೈಸೂರು ಪೇಟಾ, ನೇಗಿಲು ಕೊಟ್ಟು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಸನ್ಮಾನ ಮಾಡಿದ್ದಾರೆ. ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಸಮ್ಮುಖದಲ್ಲಿ ನಟ ದರ್ಶನ್​ ನೂತನ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ನಟ ದರ್ಶನ್​ರನ್ನು ಸನ್ಮಾನಿಸಿದ ನಂತರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಅತ್ಯಂತ ವಿಶೇಷವಾದ ಕಾರ್ಯಕ್ರಮ ಇದಾಗಿದೆ. ದರ್ಶನ್​ರ ಬಗ್ಗೆ ಬಿ.ಸಿ. ಪಾಟೀಲ್ ಸಾಕಷ್ಟು ವಿಷಯಗಳನ್ನ ಈಗಾಗಲೇ ಮಾತನಾಡಿದ್ದಾರೆ. ಚಲನಚಿತ್ರ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದಿರುವ ದರ್ಶನ್, […]

ರಾಬರ್ಟ್‌ ಸಿನಿಮಾನ್ನ ನಾನು ನೋಡುತ್ತೇನೆ, ನೀವೂ ನೋಡಿ - ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ
Follow us
shruti hegde
|

Updated on:Mar 05, 2021 | 5:15 PM

ಬೆಂಗಳೂರು: ವಿಕಾಸಸೌಧದಲ್ಲಿ ಕೃಷಿ ರಾಯಭಾರಿಯಾಗಿ ನಟ ದರ್ಶನ್‌ ಅಧಿಕಾರ ಸ್ವೀಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ಹಸಿರು ಶಾಲು ಹೊದಿಸಿ, ಮೈಸೂರು ಪೇಟಾ, ನೇಗಿಲು ಕೊಟ್ಟು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಸನ್ಮಾನ ಮಾಡಿದ್ದಾರೆ. ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಸಮ್ಮುಖದಲ್ಲಿ ನಟ ದರ್ಶನ್​ ನೂತನ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

ನಟ ದರ್ಶನ್​ರನ್ನು ಸನ್ಮಾನಿಸಿದ ನಂತರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಅತ್ಯಂತ ವಿಶೇಷವಾದ ಕಾರ್ಯಕ್ರಮ ಇದಾಗಿದೆ. ದರ್ಶನ್​ರ ಬಗ್ಗೆ ಬಿ.ಸಿ. ಪಾಟೀಲ್ ಸಾಕಷ್ಟು ವಿಷಯಗಳನ್ನ ಈಗಾಗಲೇ ಮಾತನಾಡಿದ್ದಾರೆ. ಚಲನಚಿತ್ರ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದಿರುವ ದರ್ಶನ್, ತಮ್ಮ ತೋಟದಲ್ಲಿ ಕೆಲಸ ಮಾಡ್ತಾರೆ. ಯಾವುದೇ ಸಂಭಾವನೆ ಇಲ್ಲದೆ ಕೃಷಿ ಇಲಾಖೆಯ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅನ್ನದಾತರು ಹಾಗೂ ಆರೂವರೆ ಕೋಟಿ ಜನರ ಪರವಾಗಿ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದರು.

ಈ ಕುರಿತಂತೆ ಮಾತನಾಡುತ್ತಿದ್ದ ಅವರು, ಜನಪ್ರಿಯ ದರ್ಶನ್ ಸಂಭಾವನೆ ಇಲ್ಲದೆ ಕೃಷಿ ರಾಯಭಾರಿಯಾಗಿರೋದು ಸಂತಸದ ವಿಚಾರ. ಮಾರ್ಚ್‌ 11ಕ್ಕೆ ರಾಬರ್ಟ್‌ ಸಿನಿಮಾ ಬಿಡುಗಡೆಯಾಗುತ್ತಿದೆ. ರಾಬರ್ಟ್‌ ಸಿನಿಮಾ ನೀವೂ ನೋಡಿ, ನಾನು ನೋಡುತ್ತೇನೆ ಎಂದರು.

ನಮ್ಮದು, ರೈತರದ್ದು ಎಮೋಷನಲ್ ಅಲ್ಲ, ಅದು ಬ್ಲಡ್​ ರಿಲೇಷನ್ – ನಟ ದರ್ಶನ್​ ಕೃಷಿ ಇಲಾಖೆ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದ ನಟ ದರ್ಶನ್​ ಮಾತನಾಡಿ, ಮೊದಲನೆಯದಾಗಿ, ಬಿ.ಸಿ. ಪಾಟೀಲ್ ಪೊಲೀಸ್ ಆಗಿದ್ದರು. ನಂತರ ಸಿನಿಮಾಗೆ ಬಂದ್ರು, ಅವರು ಈಗ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅವರಿಗೆ ಧನ್ಯವಾದಗಳು. ನಾನು ಹೆಚ್ಚು ಏನು ಮಾಡ್ತಾ ಇಲ್ಲ. ರೈತರ ಸವಲತ್ತುಗಳನ್ನು ಜನರಿಗೆ ಆ್ಯಡ್ ಮೂಲಕ ತಿಳಿಸುತ್ತಾ ಇದ್ದೇನೆ ಅಷ್ಟೇ. ನಮ್ಮದು, ರೈತರದ್ದು ಎಮೋಷನಲ್ ಅಲ್ಲ, ಅದು ಬ್ಲಡ್​ ರಿಲೇಷನ್. ರೈತರು ಅನ್ನ ಕೊಟ್ಟರೆ ತಾನೆ ನಮಗೆ ರಕ್ತ ಎಂದು ಮಾತನಾಡಿದರು.

ಇದನ್ನೂ ಓದಿ: ಕೃಷಿ ರಾಯಭಾರಿಯಾಗಿ ನಟ ದರ್ಶನ್‌ ಅಧಿಕಾರ ಸ್ವೀಕಾರ; ದರ್ಶನ್ ಒಬ್ಬ ಹೃದಯ ಶ್ರೀಮಂತಿಕೆಯ ವ್ಯಕ್ತಿ- ಬಿ.ಸಿ ಪಾಟೀಲ್​

ಇದನ್ನೂ ಓದಿ: D Boss Darshan: ಸಂಭಾವನೆ ಪಡೆಯದೆ ಕರ್ನಾಟಕ ಕೃಷಿ ಇಲಾಖೆ ರಾಯಭಾರಿಯಾದ ದರ್ಶನ್​

Published On - 5:06 pm, Fri, 5 March 21