ಕೃಷಿ ರಾಯಭಾರಿಯಾಗಿ ನಟ ದರ್ಶನ್‌ ಅಧಿಕಾರ ಸ್ವೀಕಾರ; ದರ್ಶನ್ ಒಬ್ಬ ಹೃದಯ ಶ್ರೀಮಂತಿಕೆಯ ವ್ಯಕ್ತಿ- ಬಿ.ಸಿ ಪಾಟೀಲ್​

ವಿಕಾಸಸೌಧದಲ್ಲಿ ಕೃಷಿ ರಾಯಭಾರಿಯಾಗಿ ನಟ ದರ್ಶನ್‌ ಅಧಿಕಾರ ಸ್ವೀಕರಿಸಿದರು. ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಸಮ್ಮುಖದಲ್ಲಿ ನಟ ದರ್ಶನ್​ ನೂತನ ರಾಯಭಾರಿಯಾಗಿ ನೇಮಕಗೊಂಡರು.

ಕೃಷಿ ರಾಯಭಾರಿಯಾಗಿ ನಟ ದರ್ಶನ್‌ ಅಧಿಕಾರ ಸ್ವೀಕಾರ; ದರ್ಶನ್ ಒಬ್ಬ ಹೃದಯ ಶ್ರೀಮಂತಿಕೆಯ ವ್ಯಕ್ತಿ- ಬಿ.ಸಿ ಪಾಟೀಲ್​
ಕೃಷಿ ರಾಯಭಾರಿಯಾದ ನಟ ದರ್ಶನ್​
Follow us
| Updated By: ಸಾಧು ಶ್ರೀನಾಥ್​

Updated on: Mar 05, 2021 | 4:39 PM

ಬೆಂಗಳೂರು: ವಿಕಾಸಸೌಧದಲ್ಲಿ ಕೃಷಿ ರಾಯಭಾರಿಯಾಗಿ ನಟ ದರ್ಶನ್‌ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಹಸಿರು ಶಾಲು ಹೊದಿಸಿ, ಮೈಸೂರು ಪೇಟಾ, ನೇಗಿಲು ಕೊಟ್ಟು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಸನ್ಮಾನ ಮಾಡಿದರು. ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಸಮ್ಮುಖದಲ್ಲಿ ನಟ ದರ್ಶನ್​ ನೂತನ ರಾಯಭಾರಿಯಾಗಿ ನೇಮಕಗೊಂಡರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಯಾವುದೇ ಸಂಭಾವನೆ ಪಡೆಯದೇ ನಟ ದರ್ಶನ್​ ರಾಯಭಾರಿಯಾಗಿದ್ದಾರೆ. ಬೇರೆ ನಟರುಗಳಾಗಿದ್ದರೆ ಕೋಟಿ ಕೋಟಿ ಹಣ ಪಡೆದು ಕಂಪನಿಗಳ ರಾಯಭಾರಿಯಾಗುತ್ತಿದ್ದರು. ಇಲ್ಲಿಯವರೆಗೆ ಕೃಷಿ ಇಲಾಖೆಯಲ್ಲಿ ಕಂಡು ಕೇಳರಿಯದ ಕಾರ್ಯಕ್ರಮವಿದು ಎಂದರು.

b c patil

ಕೃಷಿ ಇಲಾಖೆ ಸಚಿವ ಬಿ.ಸಿ ಪಾಟೀಲ್​

ಮುಖ್ಯಮಂತ್ರಿ ಯಡಿಯೂರಪ್ಪ  ಅವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಖುಷಿಯಾಗಿದೆ. ಇನ್ನು, ನಟ ದರ್ಶನ್​ ಕುರಿತಾಗಿ ಹೇಳುವುದಾದರೆ ಕೃಷಿ ಹಾಗೂ ಪಶುಸಂಗೋಪನೆಯಲ್ಲಿ ದರ್ಶನ್ ತೊಡಗಿಸಿಕೊಂಡವರು. ದರ್ಶನ್ ಒಬ್ಬ ಹೃದಯ ಶ್ರೀಮಂತಿಕೆಯ ವ್ಯಕ್ತಿ. ಬಡವರು, ರೈತರ ಎಂಬುದರ ಬಗ್ಗೆ ನಟ ದರ್ಶನ್‌ಗೆ ತುಂಬಾ ಕಳಕಳಿ ಇದೆ. ಒಂದೂವರೆ ತಿಂಗಳ ಹಿಂದೆ ಅವರ ಫಾರ್ಮ್‌ಹೌಸ್‌ಗೆ ನಾನು ಹೋಗಿದ್ದೆ. ಫಾರ್ಮ್‌ಹೌಸ್‌ ಒಂದು ರೀತಿಯ ಮಿನಿ ಝೂ ನಂತೆ ಇದೆ. ಸುಮಾರು 150 ಜನರಿಗೆ ಕೆಲಸ ಕೊಟ್ಟಿದ್ದಾರೆ. ದರ್ಶನ್ ಕಷ್ಟದ ಜೀವನ ನಡೆಸಿ ಉನ್ನತ ಸ್ಥಾನಕ್ಕೆ ಬಂದಿದ್ದಾರೆ ಎಂದುಅಭಿಮಾನದಿಂದ ನುಡಿದರು.

bsy

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ

ಇವತ್ತು ರಾಬರ್ಟ್ ಸಿನಿಮಾಕ್ಕೆ ಎರಡೂವರೆಯಿಂದ ಮೂರು ಲಕ್ಷ ಜನ ಸೇರಿದ್ದರು. ಆದರೆ ನಾವೂ ಕಾರ್ಯಕ್ರಮವನ್ನ ಮಾಡಬೇಕೆಂದರೆ ಜನರನ್ನ ಕರೆದುಕೊಂಡು ಬರಬೇಕು. ದರ್ಶನ್​ ಕಾರ್ಯಕ್ರಮ ಅಂದ್ರೆ ಜನರೇ ಸ್ವಇಚ್ಛೆಯಿಂದ ಬರುತ್ತಾರೆ. ಅವರು ಪರಕಾಯ ಪ್ರವೇಶ ಮಾಡಿ ಅದ್ಭುತವಾಗಿ ನಟನೆ ಮಾಡ್ತಾರೆ. ಅವರ ರಾಬರ್ಟ್ ಸಿನಿಮಾ ಶತಕ ಬಾರಿಸಲಿ ಅಂತಾ ನಮ್ಮ ಕೃಷಿ ಇಲಾಖೆಯಿಂದ ಹರಿಸುತ್ತೇವೆ ಎಂದು ದರ್ಶನ್​ ಕುರಿತಾಗಿ ಹೇಳಿದರು.

ಇದನ್ನೂ ಓದಿ: D Boss Darshan: ಸಂಭಾವನೆ ಪಡೆಯದೆ ಕರ್ನಾಟಕ ಕೃಷಿ ಇಲಾಖೆ ರಾಯಭಾರಿಯಾದ ದರ್ಶನ್​

ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ