ಸಚಿವ ಸ್ಥಾನ ಕಳೆದುಕೊಂಡ ರಮೇಶ್ ಜಾರಕಿಹೊಳಿಗೆ ಎದುರಾಯಿತು ಮತ್ತೊಂದು ಸಂಕಷ್ಟ
ರಮೇಶ್ ಜಾರಕಿಹೊಳಿ ವಿರುದ್ದ ಸುಮೋಟೋ ಕೇಸ್ ದಾಖಲಾಗಿದ್ದು, ದೂರುಗಳ ಅನ್ವಯ ಸುಮೋಟೋ ಕೇಸ್ ದಾಖಲು ಮಾಡಿಕೊಂಡಿರುವುದಾಗಿ ರಾಜ್ಯ ಮಹಿಳಾ ಆಯೋಗದ ಆಧ್ಯಕ್ಷೆ ಪ್ರಮೀಳಾ ನಾಯ್ಡು ಹೇಳಿದ್ದಾರೆ.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಹಿರಂಗವಾಗುತ್ತಿದ್ದಂತೆ ರಾಜ್ಯದಾದ್ಯಂತ ಸಂಚಲನ ಉಂಟಾಗಿದ್ದು, ಅಶ್ಲೀಲ ಸಿಡಿ ಹೊರಬಂದ ನಂತರ ರಮೇಶ್ ಸಂದಿಗ್ಧ ಪರಿಸ್ಥಿತಿ ಎದುರಿಸಿದ್ದು, ರಾಜೀನಾಮೆ ಕೂಡ ನೀಡಿದ್ದಾರೆ. ಸದ್ಯ ರಮೇಶ್ ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ಸುಮೋಟೋ ಕೇಸ್ ದಾಖಲಾಗಿದೆ.
ಕನ್ನಡ ರಕ್ಷಣಾ ವೇದಿಕೆ ಹಾಗೂ ವಕೀಲರು ನೀಡಿದ್ದ ಎರಡು ದೂರುಗಳನ್ನು ಆಧರಿಸಿ ಸುಮೋಟೋ ಕೇಸ್ ದಾಖಲಿಸಿಕೊಳ್ಳಲಾಗಿದ್ದು, ಸಂತ್ರಸ್ತೆಯನ್ನು ಕರೆದು ಹೇಳಿಕೆಯನ್ನ ಪಡೆಯುತ್ತೇವೆ. ಪೊಲೀಸ್ ತನಿಖೆ ನಡೆಸಲಿ, ನಾವು ಪೊಲೀಸರಿಗೆ ಸಹಕರಿಸುತ್ತೇವೆ. ಸಂತ್ರಸ್ತೆ ಭಯಪಡಬೇಕಿಲ್ಲ, ರಾಜ್ಯ ಮಹಿಳಾ ಆಯೋಗ ಆಕೆಯ ಪರವಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಆಧ್ಯಕ್ಷೆ ಪ್ರಮೀಳಾ ನಾಯ್ಡು ಹೇಳಿದ್ದಾರೆ.
ಇದನ್ನೂ ಓದಿ: ಅಣ್ಣನ ಸಿಡಿ ಬಗ್ಗೆ ಮೌನ ಮುರಿದ ಸಹೋದರ ಲಖನ್ ಜಾರಕಿಹೊಳಿ ಹೇಳಿದ್ದೇನು?