AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಬಜೆಟ್ ಗಾತ್ರ ಎಷ್ಟು? ಇಲ್ಲಿದೆ ಕುತೂಹಲಕಾರಿ ತುಲನೆ

Budget size comparison of Karnataka and other major Indian states: ಕರ್ನಾಟಕದ ಬಜೆಟ್ ಗಾತ್ರ 2026-27ನೇ ಸಾಲಿನಲ್ಲಿ 4.48 ಲಕ್ಷ ಕೋಟಿ ರೂ ಇದೆ. ಕಳೆದ ವರ್ಷದಲ್ಲಿ ಇದರ ಬಜೆಟ್ ಗಾತ್ರ 4.09 ಲಕ್ಷ ಕೋಟಿ ರೂ ಇತ್ತು. ಈ ಬಾರಿ ಶೇ. 10ರಷ್ಟು ಬಜೆಟ್ ಗಾತ್ರ ಹೆಚ್ಚಿದೆ. ಭಾರತದಲ್ಲಿ ಅತಿದೊಡ್ಡ ಬಜೆಟ್ ಮಂಡಿಸಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ 4 ಅಥವಾ 5ನೇ ಸ್ಥಾನ ಪಡೆಯುತ್ತದೆ.

ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಬಜೆಟ್ ಗಾತ್ರ ಎಷ್ಟು? ಇಲ್ಲಿದೆ ಕುತೂಹಲಕಾರಿ ತುಲನೆ
ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 06, 2026 | 3:22 PM

Share

ಬೆಂಗಳೂರು, ಮಾರ್ಚ್ 6: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ದಾಖಲೆಯ 4.48 ಲಕ್ಷ ಕೋಟಿ ರೂ ಗಾತ್ರದ ಬಜೆಟ್ (Karnataka Budget) ಮಂಡಿಸಿದ್ದಾರೆ. ದೇಶದ ಅತಿದೊಡ್ಡ ಬಜೆಟ್ ಮಂಡಿಸಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕವೂ ಇದೆ. ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ ದಾಟಿರುವ ಆರು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಉತ್ತರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡಿನ ನಂತರ ಕರ್ನಾಟಕವೇ ಅತಿ ದೊಡ್ಡ ಗಾತ್ರದ ಬಜೆಟ್ ಮಂಡಿಸಿರುವುದು.

ಅತಿದೊಡ್ಡ ಬಜೆಟ್ ಮಂಡಿಸಿರುವ ಪ್ರಮುಖ ರಾಜ್ಯಗಳಿವು

  1. ಉತ್ತರಪ್ರದೇಶ: 9.12 ಲಕ್ಷ ಕೋಟಿ ರೂ (2026-27)
  2. ಮಹಾರಾಷ್ಟ್ರ: 7 ಲಕ್ಷ ಕೋಟಿ ರೂ (2025-26)
  3. ರಾಜಸ್ಥಾನ: 6.11 ಲಕ್ಷ ಕೋಟಿ ರೂ (2026-27)
  4. ಕರ್ನಾಟಕ: 4.48 ಲಕ್ಷ ಕೋಟಿ ರೂ (2026-27)
  5. ತಮಿಳುನಾಡು: 4.39 ಲಕ್ಷ ಕೋಟಿ ರೂ (2025-26)
  6. ಗುಜರಾತ್: 4.08 ಲಕ್ಷ ಕೋಟಿ ರೂ (2026-27)
  7. ಪಶ್ಚಿಮ ಬಂಗಾಳ: 4.06 ಲಕ್ಷ ಕೋಟಿ ರೂ (2026-27 ಮಧ್ಯಂತರ ಬಜೆಟ್)
  8. ಆಂಧ್ರಪ್ರದೇಶ: 3.32 ಲಕ್ಷ ಕೋಟಿ ರೂ (2026-27)
  9. ಬಿಹಾರ್: 3.47 ಲಕ್ಷ ಕೋಟಿ ರೂ (2026-27)
  10. ಒಡಿಶಾ: 2.90 ಲಕ್ಷ ಕೋಟಿ ರೂ (2025-26)

ಇದನ್ನೂ ಓದಿ: Karnataka Budget 2026: ಬಜೆಟ್​ನಲ್ಲಿ ಇಲಾಖಾವಾರು ಹಣ ಹಂಚಿಕೆ: ಯಾವ ಕ್ಷೇತ್ರಕ್ಕೆ ಎಷ್ಟು ಪಾಲು?

ಇಲ್ಲಿ ಮೇಲಿನ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಆದರೆ, ತಮಿಳುನಾಡಿನ ಬಜೆಟ್ ಗಾತ್ರ 2025-26ರ ಸಾಲಿನದ್ದು. ಈ ವರ್ಷ ಅದರ ಬಜೆಟ್ ಗಾತ್ರ 4.50 ಲಕ್ಷ ಕೋಟಿ ರೂ ದಾಟುವ ಸಾಧ್ಯತೆ ಇದೆ. ಹೀಗಾಗಿ, ಅತಿದೊಡ್ಡ ಬಜೆಟ್ ಗಾತ್ರ ಹೊಂದಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಐದನೇ ಸ್ಥಾನ ಪಡೆಯಬಹುದು.

ಉತ್ತರಪ್ರದೇಶವು ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಒಂದೆನಿಸಿದೆಯಾದರೂ ಅದರ ಭೌಗೋಳಿಕ ಗಾತ್ರ ವಿಶಾಲವಾಗಿದೆ. ಹೀಗಾಗಿ, ಅದರ ಜಿಡಿಪಿಯೂ ಕೂಡ ಅತಿದೊಡ್ಡದು. ಸಹಜವಾಗಿ ಅದರ ಬಜೆಟ್ ಗಾತ್ರವೂ ಹೆಚ್ಚಿದೆ. ಆದರೆ, ಗಮನಾರ್ಹ ಸಂಗತಿ ಎಂದರೆ, ಜಿಡಿಪಿ ಗಾತ್ರಕ್ಕೆ ಬಜೆಟ್ ಗಾತ್ರವನ್ನು ಹೋಲಿಸಿದಾಗ ಉತ್ತರಪ್ರದೇಶ ವಿಶೇಷವಾಗಿ ನಿಲ್ಲುತ್ತದೆ. ಅದರ ಬಜೆಟ್ ಗಾತ್ರವು ರಾಜ್ಯ ಜಿಡಿಪಿ ಶೇ. 25ಕ್ಕಿಂತಲೂ ಹೆಚ್ಚಿದೆ. ಇದಕ್ಕೆ ಹೋಲಿಸಿದರೆ, ಕರ್ನಾಟಕದ ಬಜೆಟ್ ಗಾತ್ರವು ಶೇ. 15ರ ಆಸುಪಾಸಿನಷ್ಟಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸೈನ್ಸ್ ಸಿಟಿ, ಎಲ್ಲಾ ಜಿಲ್ಲೆಗಳಲ್ಲಿ ಸೈನ್ಸ್ ಸೆಂಟರ್, 11 ಜಿಲ್ಲೆಗಳಲ್ಲಿ ಪ್ಲಾನಿಟೇರಿಯಂ ಸ್ಥಾಪನೆ: ಸಿದ್ದರಾಮಯ್ಯ

ಉತ್ತಮ ಆರ್ಥಿಕತೆ ಹೊಂದಿರುವ ರಾಜ್ಯಗಳ ಬಜೆಟ್ ಗಾತ್ರ ಸಾಮಾನ್ಯವಾಗಿ ಶೇ. 15ಕ್ಕಿಂತ ಕಡಿಮೆ ಇರುತ್ತದೆ. ಹಿಂದುಳಿದ ರಾಜ್ಯಗಳಿಗೆ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದಿಂದ ಹೆಚ್ಚು ಹೂಡಿಕೆ ಬೇಕಾಗುತ್ತದೆ. ಅಂಥ ರಾಜ್ಯಗಳಲ್ಲಿ ಬಜೆಟ್ ಗಾತ್ರ ಶೇ. 15ಕ್ಕಿಂತಲೂ ಹೆಚ್ಚಿರುತ್ತದೆ ಎಂಬುದು ಆರ್ಥಿಕ ತಜ್ಞರ ಅನಿಸಿಕೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us