Bigg Boss Kannada: ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಆತಂಕಕಾರಿ ವೈರಸ್​? ನಿರ್ಮಲಾ ಚೆನ್ನಪ್ಪ ಅಸ್ವಸ್ಥ

ವೈರಸ್​ ಎಂಬ ಪದ ಕೇಳಿದರೆ ಎಲ್ಲರೂ ಒಂದು ಕ್ಷಣ ಕಂಗಾಲಾಗುತ್ತಾರೆ. ಈಗ ಬಿಗ್​ ಬಾಸ್​ ಮನೆಯೊಳಗಿನ ಸ್ಪರ್ಧಿಗಳಿಗೂ ಅದೇ ಆತಂಕ ಶುರು ಆಗಿದೆ. ದೊಡ್ಮನೆಯೊಳಗೆ ವೈರಸ್​ ಕಾಲಿಟ್ಟಿದೆ.

Bigg Boss Kannada: ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಆತಂಕಕಾರಿ ವೈರಸ್​? ನಿರ್ಮಲಾ ಚೆನ್ನಪ್ಪ ಅಸ್ವಸ್ಥ
ನಿರ್ಮಲಾ ಚೆನ್ನಪ್ಪ ಬಿಗ್​ ಬಾಸ್​
Follow us
ಮದನ್​ ಕುಮಾರ್​
|

Updated on: Mar 09, 2021 | 3:13 PM

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ದಿನದಿನವೋ ರೋಚಕತೆ ಹೆಚ್ಚುತ್ತಿದೆ. ಇಷ್ಟು ದಿನ ಪ್ರೀತಿ-ಪ್ರೇಮ, ಕಾಮಿಡಿ-ಜಗಳ ಮಾಡಿಕೊಂಡಿದ್ದ ಸ್ಪರ್ಧಿಗಳಿಗೆ ಸವಾಲೊಡ್ಡಲು ಈಗ ವೈರಸ್​ ಬಂದಿದೆ. ಮನೆಯೊಳಗೆ ವೈರಸ್​ ಎಂಟ್ರಿ ಆಗುತ್ತಿದ್ದಂತೆಯೇ ಎಲ್ಲರ ವರ್ತನೆ ಬದಲಾಗಿದೆ. ಆಟದ ಶೈಲಿಯೂ ಬೇರೆ ಸ್ವರೂಪ ಪಡೆದುಕೊಂಡಿದೆ.

‘ಕಲರ್ಸ್​ ಕನ್ನಡ’ ವಾಹಿನಿಯು ತನ್ನ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ಪ್ರೋಮೋಗಳಲ್ಲಿ ಈ ವೈರಸ್​ ವಿಚಾರ ಬಯಲಾಗಿದೆ. ‘ಇಡೀ ಜಗತ್ತು ವೈರಸ್​ ದಾಳಿಯಿಂದ ಕಂಗಾಲಾಗಿದ್ದನ್ನು ನೀವೆಲ್ಲರೂ ನೋಡಿದ್ದೀರಿ. ಈ ಮನೆ ಕೂಡ ಈಗ ವೈರಸ್​ ಜೊತೆಗಿನ ಹೋರಾಟಕ್ಕೆ ಸಿದ್ಧವಾಗಬೇಕಿದೆ. ಈ ದಾಳಿಯಿಂದ ತಪ್ಪಿಸಿಕೊಳ್ಳಲು ಮನುಷ್ಯರು ಎಚ್ಚರವಾಗಿರಬೇಕು’ ಎಂಬ ಬಿಗ್​ ಬಾಸ್​ ಧ್ವನಿ ಮನೆಯೊಳಗೆ ಕೇಳಿಸಿದೆ!

ವೈರಸ್​ ಎಂದರೆ ಇದು ನಿಜವಾದ ಕೊರೊನಾ ವೈರಸ್​ ಅಲ್ಲ. ಕೊರೊನಾ ವೈರಸ್​ ರೀತಿಯ ಥೀಮ್​ನಲ್ಲಿ ಒಂದು ಗೇಮ್​ ಆಡಿಸಲಾಗಿದೆ. ಅದರಲ್ಲಿ ಎಲ್ಲರೂ ಹೆಚ್ಚು ಆಕ್ರಮಣಕಾರಿಯಾಗಿ ಭಾಗವಹಿಸಿದ್ದಾರೆ. ಆ ಮೂಲಕ ಮನೆಯೊಳಗೆ ಟೆನ್ಷನ್​ ಸೃಷ್ಟಿ ಆಗಿದೆ. ತಮ್ಮ ತಮ್ಮ ಉಳಿವಿಗಾಗಿ ಎಲ್ಲರೂ ತೀವ್ರವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಏನು ಈ ಆಟದ ಅಸಲಿಯತ್ತು ಎಂಬುದು ಮಂಗಳವಾರದ (ಮಾ.9) ಎಪಿಸೋಡ್​ನಲ್ಲಿ ಬಯಲಾಗಲಿದೆ.

ವೈರಸ್​ ಥೀಮ್​ನ ಈ ಆಟ ಎಷ್ಟೊಂದು ತೀವ್ರವಾಗಿದೆ ಎಂದರೆ, ಇದರಲ್ಲಿ ಭಾಗವಹಿಸಿದ ವೇಳೆ ನಿರ್ಮಲಾ ಚೆನ್ನಪ್ಪ ಅವರಿಗೆ ಪೆಟ್ಟಾಗಿದೆ! ನೋವಿನಿಂದ ಅವರು ಬಳಲಿದ್ದಾರೆ. ಅಸ್ವಸ್ಥಗೊಂಡ ಅವರ ಸ್ಥಿತಿ ನೋಡಿ ಎಲ್ಲರೂ ಆತಂಕಗೊಂಡಿದ್ದಾರೆ. ನಿರ್ಮಲಾ ಅವರಿಗೆ ಆಗಿರುವ ನೋವಿನ ತೀವ್ರತೆ ಏನು? ಮನೆಯಲ್ಲೇ ಅವರು ಸರಿ ಆಗುತ್ತಾರಾ ಅಥವಾ ವೈದ್ಯರ ಬಳಿಗೆ ಅವರನ್ನು ಕರೆದುಕೊಂಡು ಹೋಗಲಾಗುತ್ತದೆಯಾ? ಈ ತುರ್ತು ಸ್ಥಿತಿಯಲ್ಲಿ ಅವರು ಮನೆಯೊಂದ ಹೊರಗೆ ಬರಬೇಕಾಗುತ್ತಾ ಎಂಬೆಲ್ಲ ಪ್ರಶ್ನೆಗಳಿಗೆ ಮಾ.9ರ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

ಇದನ್ನೂ ಓದಿ: Bigg Boss Kannada: ಮಂಜುಗೆ ‘ಐ ಲವ್​ ಯೂ’ ಎಂದ ದಿವ್ಯಾ ಉರುಡುಗ! ಬಿಗ್​ ಬಾಸ್​ನಲ್ಲಿ ಏನು ನಡೀತಾ ಇದೆ?

ಬಿಗ್​ ಬಾಸ್​ನಲ್ಲಿ ನಿರ್ಮಲಾ ಚೆನ್ನಪ್ಪ ವಿಚಿತ್ರ ವರ್ತನೆಗೆ ಕಾರಣ ತಿಳಿಸಿದ ಪತಿ ಸರ್ದಾರ್​ ಸತ್ಯ!

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್