ಇದು ವಿಶ್ವದ ದುಬಾರಿ ವಯಾಗ್ರ; ಹಿಮಾಲಯದಲ್ಲಿ ಸಿಗುವ ಈ ಔಷಧದ ಬೆಲೆ ಕೆಜಿಗೆ 20 ಲಕ್ಷ ರೂಪಾಯಿ
Himalayan Viagra: ಹಿಮಾಲಯನ್ ವಯಾಗ್ರ ಎಂಬುದು ಒಂದು ರೀತಿಯ ಶಿಲೀಂಧ್ರ. ಇಂಗ್ಲಿಷ್‌ನಲ್ಲಿ ಇದನ್ನು 'ಕ್ಯಾಟರ್ಪಿಲ್ಲರ್' ಎಂದು ಕರೆಯಲಾಗುತ್ತದೆ. ಚೀನಾದಲ್ಲಿ, ಈ ಗಿಡಮೂಲಿಕೆಯನ್ನು ಲೈಂಗಿಕ ಉತ್ತೇಜಕವಾಗಿ ಬಳಸಲಾಗುತ್ತದೆ.
ಲೈಂಗಿಕ ಪ್ರಚೋದನೆಗೆ ಅನೇಕರು ನಾನಾ ಔಷಧಗಳ ಮೊರೆ ಹೋಗುತ್ತಾರೆ. ಇದಕ್ಕಾಗಿ ಮಾರುಕಟ್ಟೆಗೆ ನಾನಾ ಪ್ರಾಡಕ್ಟ್ಗಳು ಕೂಡ ಬಂದಿವೆ. ಕೆಲ ನೈಸರ್ಗಿಕ ವಸ್ತುಗಳನ್ನು ಬಳಕೆ ಮಾಡಿಕೊಂಡು ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳುವ ಪದ್ದತಿ ಸಹ ಇಂದಿಗೂ ಬಳಕೆಯಲ್ಲಿದೆ. ಇದರಲ್ಲಿ ಹಿಮಾಲಯನ್ ವಯಾಗ್ರ ಕೂಡ ಒಂದು. ಇದು ವಿಶ್ವದ ಅತ್ಯಂತ ದುಬಾರಿಯ ವಯಾಗ್ರ ಎಂದು ಕರೆಯಲ್ಪಡುತ್ತದೆ. ಅಷ್ಟಕ್ಕೂ ಏನಿದರ ವೈಶಿಷ್ಟ್ಯ? ಎಷ್ಟಿದೆ ಇದರ ಬೆಲೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಹಿಮಾಲಯನ್ ವಯಾಗ್ರ ಎಂಬುದು ಒಂದು ರೀತಿಯ ಶಿಲೀಂಧ್ರ. ಇದರ ವೈಜ್ಞಾನಿಕ ಹೆಸರು ‘ಒಫಿಯೊಕಾರ್ಡಿಸೆಪ್ಸ್ ಸಿನೆನ್ಸಿಸ್’. ಇಂಗ್ಲಿಷ್‌ನಲ್ಲಿ ಇದನ್ನು ‘ಕ್ಯಾಟರ್ಪಿಲ್ಲರ್’ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಇದಕ್ಕೆ ‘ವರ್ಮ್ ಹರ್ಡ್’ ಎನ್ನುವ ಹೆಸರಿದೆ. ನೇಪಾಳ ಮತ್ತು ಚೀನಾದಲ್ಲಿ ಇದನ್ನು ಸ್ಥಳೀಯವಾಗಿ ‘ಯರ್ಸಗುಂಬಾ’ ಎಂದೂ ಕರೆಯುತ್ತಾರೆ.
ಹಿಮಾಲಯದಲ್ಲಿ ಇದು 3,500 ರಿಂದ 5,000 ಮೀಟರ್ ಎತ್ತರದಲ್ಲಿ ಕಂಡುಬರುತ್ತದೆ. ಭಾರತದಲ್ಲಿ, ಉತ್ತರಾಖಂಡದ ಪಿಥೋರಗಡ, ಚಮೋಲಿ ಮತ್ತು ಬಾಗೇಶ್ವರದಲ್ಲಿ ಕಾಣಸಿಗುತ್ತದೆ. ಭಾರತವನ್ನು ಹೊರತುಪಡಿಸಿ, ನೇಪಾಳ ಮತ್ತು ಚೀನಾದ ಗಡಿಯಲ್ಲಿರುವ ಹಿಮಾಲಯದಲ್ಲಿ, ಹಾಗೆಯೇ ಭೂತಾನ್ ಮತ್ತು ಟಿಬೆಟ್‌ನ ಪ್ರಸ್ಥಭೂಮಿ ಪ್ರದೇಶಗಳಲ್ಲಿ ಹಿಮಾಲಯನ್ ವಯಾಗ್ರ ಕಂಡುಬರುತ್ತದೆ.
ಹಿಮಾಲಯನ್ ವಯಾಗ್ರ ಹಿಮಾಲಯನ್ ವಯಾಗ್ರ ಗುಡ್ಡಗಾಡು ಪ್ರದೇಶದ ಜನರಿಗೆ ಜೀವನೋಪಾಯವಾಗಿದೆ. ಚಳಿಗಾಲದ ನಂತರ, ಹಿಮಾಲಯದ ಪ್ರಸ್ಥಭೂಮಿಗಳಲ್ಲಿ ಕಡಿಮೆ ಹಿಮ ಇದ್ದಾಗ, ಜನರು ಅವುಗಳನ್ನು ಸಂಗ್ರಹಿಸಲು ಅಲ್ಲಿಗೆ ಹೋಗುತ್ತಾರೆ. ಇವುಗಳನ್ನು ಸಂಗ್ರಹಿಸಿ ಕೆಳಗೆ ಹೋಗಿ ಅಲ್ಲಿನ ವ್ಯಾಪಾರಿಗಳಿಗೆ ಮಾರುತ್ತಾರೆ. ಇಲ್ಲಿ ಖರೀದಿಸುವ ವ್ಯಾಪಾರಿಗಳು ಇವುಗಳನ್ನು ದೊಡ್ಡ ಮಾರುಕಟ್ಟೆಗಳಿಗೆ ಮತ್ತು ವಿವಿಧ ದೇಶಗಳಿಗೆ ರಫ್ತು ಮಾಡುತ್ತಾರೆ. ಏಷ್ಯಾದಲ್ಲಿ ಪ್ರತಿ ವರ್ಷ ಹಿಮಾಲಯ ವಯಾಗ್ರದಿಂದ 100 ಕೋಟಿ ರೂ ವಹಿವಾಟು ಆಗುತ್ತದೆ ಎಂದು ಅಂದಾಜಿಸಲಾಗಿದೆ. ಇದು ತುಂಬಾ ಅಪರೂಪ ಮತ್ತು ತುಂಬಾನೇ ದುಬಾರಿಯಾಗಿದೆ.
ಹಿಮಾಲಯನ್ ವಯಾಗ್ರದ ಉಪಯೋಗಗಳು ಹಿಮಾಲಯನ್ ವಯಾಗ್ರ ಎಲ್ಲಕ್ಕಿಂತ ದುಬಾರಿ. ಇದರ ಬೆಲೆ ಚಿನ್ನಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ. ಇದು ರುಚಿಯಲ್ಲಿ ಸಿಹಿಯಾಗಿರುತ್ತದೆ. ಸುಮಾರು ಎರಡು ಇಂಚು ಉದ್ದವಿರುತ್ತದೆ. ಹಿಮಾಲಯನ್ ವಯಾಗ್ರ ವೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಯಕೃತ್ತಿಗೆ ಸಂಬಂಧಿಸಿದ ರೋಗಗಳ ಚಿಕಿತ್ಸೆಯಲ್ಲಿ ಇದು ಪರಿಣಾಮಕಾರಿಯಾಗಿದೆ. ಇದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಹ ಉಪಯುಕ್ತವಾಗಿದೆ ಎಂದು ತಿಳಿದುಬಂದಿದೆ. ಒಂದು ‘ಕ್ಯಾಟರ್ಪಿಲ್ಲರ್’ ಬೆಲೆ ರೂ. ಅಂದಾಜು 1,000 ರಿಂದ 2,000 ರವರೆಗೆ ಇರುತ್ತದೆ
ಲೈಂಗಿಕ ಪ್ರಚೋದನೆ ಹಿಮಾಲಯನ್ ವಯಾಗ್ರ ಬೆಲೆ ಹವಾಮಾನ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಕೆಲ ವರದಿಯ ಪ್ರಕಾರ, ಇದರ ಬೆಲೆ ಪ್ರತಿ ಕೆ.ಜಿ.ಗೆ 20 ಲಕ್ಷ ರೂ ಇದೆ. ಚೀನಾ ಮತ್ತು ಹಾಂಗ್ಕಾಂಗ್ನಂತಹ ದೇಶಗಳಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಚೀನಾದಲ್ಲಿ, ಈ ಗಿಡಮೂಲಿಕೆಯನ್ನು ಲೈಂಗಿಕ ಉತ್ತೇಜಕವಾಗಿ ಬಳಸಲಾಗುತ್ತದೆ. ಕ್ರೀಡಾಪಟುಗಳು ಇದನ್ನು ಸ್ಟೀರಾಯ್ಡ್ ರೀತಿಯಲ್ಲಿ ಬಳಸುತ್ತಾರೆ.
ಸರ್ಕಾರದ ಅನುಮತಿ ಭಾರತದ ಹೆಚ್ಚಿನ ಭಾಗಗಳಲ್ಲಿ ಹಿಮಾಲಯನ್ ಶಿಲೀಂಧ್ರಗಳ ಸಂಗ್ರಹವು ಕಾನೂನುಬದ್ಧವಾಗಿದೆ. ಆದರೆ ವ್ಯಾಪಾರ ಮಾಡುವುದು ಕಾನೂನುಬಾಹಿರವಾಗಿದೆ. ಈ ಹಿಂದೆ ನೇಪಾಳದಲ್ಲಿ ಇದನ್ನು ನಿಷೇಧಿಸಲಾಗಿತ್ತು. ಆದರೆ ನಂತರ ಅದನ್ನು ತೆಗೆದುಹಾಕಲಾಯಿತು. ‘ಕ್ಯಾಟರ್ಪಿಲ್ಲರ್’ ಮೂಲಿಕೆಯ ಲಭ್ಯತೆಯು ವೇಗವಾಗಿ ಕ್ಷೀಣಿಸುತ್ತಿದೆ. ಕಳೆದ 15 ವರ್ಷಗಳಲ್ಲಿ ಇದರ ಲಭ್ಯತೆ ಶೇ 30ರಷ್ಟು ಕುಸಿದಿದೆ.
ಇದನ್ನೂ ಓದಿ: ಮಿತಿಮೀರಿದ ಮಾನವ ಚಟುವಟಿಕೆ ತಾಳಿಕೊಳ್ಳುವ ಶಕ್ತಿ ಹಿಮಾಲಯದ ಮಣ್ಣಿಗಿಲ್ಲ | ಉಷಾ ಕಟ್ಟೆಮನೆ ಬರಹ
Published On - 9:35 pm, Tue, 9 March 21