ಒಂದೇ ವಾರಕ್ಕೆ 5 ಕೆಜಿ ತೂಕ ಕಳೆದುಕೊಂಡೆ, ಜ್ಯಾಕ್​ ಲೀಚ್​ ಹೊಟ್ಟೆ ಕೆಟ್ಟು ಟಾಯ್ಲೆಟ್​ನಲ್ಲೇ ಇರುತ್ತಿದ್ದರು: ಬೆನ್​ ಸ್ಟೋಕ್ಸ್​

ನಮ್ಮ ತಂಡದಲ್ಲಿ ಅನೇಕರು ಯಂಗ್​ಸ್ಟರ್​ಗಳಿದ್ದರು. ಅವರದ್ದು ಭಾರತಕ್ಕೆ ಮೊದಲ ಪ್ರವಾಸ. ಹೀಗಾಗಿ, ಅವರಿಗೆ ನಿದ್ದೆ ಸಮಸ್ಯೆಯೂ ಕಾಡಿತ್ತು ಎಂದು ಬೆನ್​ ಸ್ಟೋಕ್ಸ್​ ಅಭಿಪ್ರಾಯಪಟ್ಟಿದ್ದಾರೆ.

ಒಂದೇ ವಾರಕ್ಕೆ 5 ಕೆಜಿ ತೂಕ ಕಳೆದುಕೊಂಡೆ, ಜ್ಯಾಕ್​ ಲೀಚ್​ ಹೊಟ್ಟೆ ಕೆಟ್ಟು ಟಾಯ್ಲೆಟ್​ನಲ್ಲೇ ಇರುತ್ತಿದ್ದರು: ಬೆನ್​ ಸ್ಟೋಕ್ಸ್​
ಜ್ಯಾಕ್ ಲೀಚ್ ಮತ್ತು ಜೋ ರೂಟ್
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 09, 2021 | 8:36 PM

ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಟೆಸ್ಟ್​​ನಲ್ಲಿ ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್​ ತಂಡ ಹೀನಾಯವಾಗಿ ಸೋತಿತ್ತು. ಈ ಮೂಲಕ ವಿರಾಟ್​ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್​ ತಂಡ 3-1 ಅಂತರದಲ್ಲಿ ಟೆಸ್ಟ್​​ ಸರಣಿಯನ್ನು ತನ್ನದಾಗಿಸಿಕೊಂಡಿತ್ತು. ಅಚ್ಚರಿ ಎಂದರೆ, ಫೈನಲ್​ ಟೆಸ್ಟ್​ನಲ್ಲಿ ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಒಂದೇ ವಾರದಲ್ಲಿ 5 ಕೆಜಿ ತೂಕ ಕಳೆದುಕೊಂಡಿದ್ದಾರಂತೆ.

ನಾಲ್ಕನೇ ಟೆಸ್ಟ್​ನಲ್ಲಿ ಮೊದಲು ಬ್ಯಾಟ್​ ಮಾಡಿದ್ದ ಇಂಗ್ಲೆಂಡ್​ 205 ರನ್​ ಕಲೆ ಹಾಕಿತ್ತು. ಇದನ್ನು ಬೆನ್ನು ಹತ್ತಿದ್ದ ಭಾರತ 365 ರನ್​ ಗಳಿಸಿತ್ತು. ಈ ಮೂಲಕ 160ರನ್​ಗಳ ಲೀಡ್​ ಲೀಡ್​ ಕಾಪಾಡಿಕೊಂಡಿತ್ತು. ಆದರೆ, ಈ ಗುರಿ ಮುಟ್ಟಲಾರದೆ ಇಂಗ್ಲೆಂಡ್​ ಇನ್ನೂ 25 ರನ್​ ಬೇಕಿರುವಾಗಲೇ ತನ್ನೆಲ್ಲ ವಿಕೆಟ್​ ಕಳೆದುಕೊಂಡಿತ್ತು. ಈ ಸೋಲಿನ ಬಗ್ಗೆ ಬೆನ್​ ಸ್ಟೋಕ್ಸ್​ ಮಾತನಾಡಿದ್ದಾರೆ.

ಕೊನೆಯ ಟೆಸ್ಟ್ ಪಂದ್ಯ ನಡೆಯುತ್ತಿದ್ದ ದಿನಗಳಲ್ಲಿ ನಾನು ಐದು ಕೆಜಿ ಕಳೆದುಕೊಂಡಿದ್ದೇನೆ. ಡಾಮ್​ ಸಿಬ್ಲೆ 4 ಕೆಜಿ, ಆ್ಯಂಡ್ರ್ಯೂಸನ್​ 3 ಕೆಜಿ ಕಳೆದುಕೊಂಡಿದ್ದರು. ಹೀಗೆ ಅನೇಕ ಆಟಗಾರರ ತೂಕ ಇಳಿದಿದೆ. ಇಲ್ಲಿಯ ಬಿಸಿಲು ಇದಕ್ಕೆ ಕಾರಣ ಇರಬಹುದು. ಇನ್ನು, ಜ್ಯಾಕ್​ ಲೀಚ್​ ಹೊಟ್ಟೆ ನೋವಿಗೆ ತುತ್ತಾಗಿ ಹೆಚ್ಚು ಸಮಯವನ್ನು ಟಾಯ್ಲೆಟ್​ನಲ್ಲೇ ಕಳೆಯುತ್ತಿದ್ದರು ಎಂದು ಸ್ಟೋಕ್ಸ್​ ಬೇಸರ ಹೊರ ಹಾಕಿದ್ದಾರೆ.

ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಅದೇ ರೀತಿ ನಮ್ಮ ತಂಡ ಕೂಡ ಭಾರತಕ್ಕೆ ಟಫ್​ ಪ್ರದರ್ಶನ ನೀಡಲು ಪ್ರಯತ್ನಿಸಿದೆ. ಆದರೆ, ಅದು ವ್ಯರ್ಥವಾಯಿತು ಎಂದು ಹೇಳಿದ್ದಾರೆ. ನಮ್ಮ ತಂಡದಲ್ಲಿ ಅನೇಕರು ಯಂಗ್​ಸ್ಟರ್​ಗಳಿದ್ದರು. ಅವರದ್ದು ಭಾರತಕ್ಕೆ ಮೊದಲ ಪ್ರವಾಸ. ಹೀಗಾಗಿ, ಅವರಿಗೆ ನಿದ್ದೆ ಸಮಸ್ಯೆಯೂ ಕಾಡಿತ್ತು. ಇದು ಕೂಡ ಸೋಲಲು ಕಾರಣವಿರಬಹುದು ಎಂದು ಬೆನ್​ ಸ್ಟೋಕ್ಸ್​ ಅಭಿಪ್ರಾಯಪಟ್ಟಿದ್ದಾರೆ.

ಮಾರ್ಚ್​ 12ರಿಂದ ಟಿ-20 ಪಂದ್ಯ ಆರಂಭವಾಗಲಿದೆ. ಐದೂ ಮ್ಯಾಚ್​ಗಳು ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ನಡೆಯಲಿದೆ. 12,14,16,18,20ರಂದು ಟಿ-20 ಪಂದ್ಯಗಳು ಆರಂಭಗೊಳ್ಳಲಿವೆ.

ಇದನ್ನೂ ಓದಿ: Virat Kohli: ವಿರಾಟ್​ ಕೊಹ್ಲಿಯನ್ನು ನೋಡಲು 1800 ಕಿ.ಮೀ. ಪ್ರಯಾಣಿಸಿದ ಅಭಿಮಾನಿ!

Published On - 8:35 pm, Tue, 9 March 21

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ