Virat Kohli: ವಿರಾಟ್​ ಕೊಹ್ಲಿಯನ್ನು ನೋಡಲು 1800 ಕಿ.ಮೀ. ಪ್ರಯಾಣಿಸಿದ ಅಭಿಮಾನಿ!

ಮಾರ್ಚ್​ 12ರಿಂದ ಟಿ20 ಪಂದ್ಯ ಆರಂಭವಾಗಲಿದೆ. ಐದೂ ಮ್ಯಾಚ್​ಗಳು ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ಏರ್ಪಡುತ್ತಿವೆ.

Virat Kohli: ವಿರಾಟ್​ ಕೊಹ್ಲಿಯನ್ನು ನೋಡಲು 1800 ಕಿ.ಮೀ. ಪ್ರಯಾಣಿಸಿದ ಅಭಿಮಾನಿ!
ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ
Follow us
ರಾಜೇಶ್ ದುಗ್ಗುಮನೆ
|

Updated on:Mar 09, 2021 | 7:53 PM

ಅಭಿಮಾನಕ್ಕೋಸ್ಕರ ಫ್ಯಾನ್ಸ್​ಗಳು ಏನು ಬೇಕಾದರೂ ಮಾಡುತ್ತಾರೆ. ಸಾವಿರಾರು ಕಿ.ಮೀ ಚಲಿಸಿ ತಮ್ಮಿಷ್ಟದ ನಟ-ನಟಿ ಅಥವಾ ಕ್ರೀಡಾಪಟುಗಳನ್ನು ಭೇಟಿ ಮಾಡುತ್ತಾರೆ. ಕನ್ನಡದ ಸ್ಟಾರ್​ ನಟ ಯಶ್​ ಅವರನ್ನು ಭೇಟಿ ಮಾಡಲು ಫಿಲಿಫೈನ್​ ದೇಶದಿಂದ ಬೆಂಗಳೂರಿಗೆ ಅಭಿಮಾನಿಯೋರ್ವ ಬಂದಿದ್ದ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅದೇ ರೀತಿ, ಈಗ ವಿರಾಟ್​ ಕೊಹ್ಲಿ ಅವರನ್ನು ಭೇಟಿ ಮಾಡಲೆಂದು ಅಭಿಮಾನಿಯೋರ್ವ 1800 ಕಿ.ಮೀ ಪ್ರಯಾಣ ಬೆಳೆಸಿದ್ದಾನೆ.

ಇಂಗ್ಲೆಡ್​ ವಿರುದ್ಧ ನಾಲ್ಕು ಟೆಸ್ಟ್​ ಸರಣಿಯಲ್ಲಿ ಟೀಂ ಇಂಡಿಯಾ 3 ಮ್ಯಾಚ್​​ಗಳನ್ನು ಗೆದ್ದು ಸರಣಿ ತನ್ನದಾಗಿಸಿಕೊಂಡಿತ್ತು. ಆದರೆ, ನಾಯಕ ವಿರಾಟ್​ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ದು ಮಾತ್ರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಅವರ ಬ್ಯಾಟ್​ನಿಂದ ಶತಕ ಸಿಡಿಯದೇ 500 ದಿನಗಳ ಮೇಲಾಗಿದೆ. ಹೀಗಾಗಿ, ಟೆಸ್ಟ್​ ಪಂದ್ಯದಲ್ಲಿ ಅವರು ಶತಕ ಬಾರಿಸೋದು ಖಚಿತ ಎಂದು ಹೇಳಲಾಗುತ್ತಿತ್ತು. ಆದರೆ, ಅವರು ಎರಡು ಬಾರಿ ಡಕ್​ಗೆ ಔಟ್​ ಆಗಿದ್ದರು. ಇದು ಭಾರೀ ನಿರಾಸೆ ಮೂಡಿಸಿತ್ತು.

ಈಗ ಮಾರ್ಚ್​ 12ರಿಂದ ಟಿ20 ಪಂದ್ಯ ಆರಂಭವಾಗಲಿದೆ. ಐದೂ ಮ್ಯಾಚ್​ಗಳು ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ಏರ್ಪಡುತ್ತಿವೆ. ಟಿ-20ಯಲ್ಲಿಯಾದರೂ ವಿರಾಟ್​ ಕೊಹ್ಲಿ ಅಬ್ಬರದ ಆಟ ಪ್ರದರ್ಶನ ಮಾಡಲಿದ್ದಾರೆಯೇ ಎನ್ನುವ ಕುತೂಹಲ ಅಭಿಮಾನಿಗಳದ್ದು.

ಇದೇ ನಂಬಿಕೆ ಇಟ್ಟುಕೊಂಡು ವಿರಾಟ್​ ಕೊಹ್ಲಿ ಅಭಿಮಾನಿಯೋರ್ವ ಚೆನ್ನೈನಿಂದ ಗುಜರಾತ್​ಗೆ ತೆರಳಿದ್ದಾನೆ. ಮಾರ್ಚ್​ 14ರಂದು ನಡೆಯಲಿರುವ ಎರಡನೇ ಟಿ-20 ಪಂದ್ಯಕ್ಕೆ ತಮಿಳುನಾಡಿನ ಅಭಿಮಾನಿಯೋರ್ವ ಟಿಕೆಟ್​ ಖರೀದಿ ಮಾಡಿದ್ದಾನೆ. ಅಷ್ಟೇ ಅಲ್ಲ, ಈ ಬಗ್ಗೆ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾನೆ.

ವಿರಾಟ್​ ಕೊಹ್ಲಿಯನ್ನು ನೋಡಲು 1839 ಕಿ.ಮೀ ಚಲಿಸುತ್ತಿದ್ದೇನೆ. ನಿರಾಸೆ ಮಾಡಬೇಡಿ ಎಂದು ಧನುಷ್​ ಎಂಬ ಅಭಿಮಾನಿ ಬರೆದುಕೊಂಡಿದ್ದಾನೆ. ಇದಕ್ಕೆ ಅನೇಕರು ಖುಷಿ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ವಿರಾಟ್​ ಕೊಹ್ಲಿ ಡಕ್​ ಬೀಳುವುದನ್ನು ನೋಡಲು ಅಲ್ಲಿವರೆಗೆ ಏಕೆ ತೆರಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: India vs England: ಶೂನ್ಯಕ್ಕೆ ಔಟಾದ ಕೊಹ್ಲಿ! ಈ ಕೆಟ್ಟ ದಾಖಲೆಯಲ್ಲೂ ಧೋನಿಯನ್ನ ಸರಿಗಟ್ಟಿದ ಶೂನ್ಯ ಸಂಪಾದಕ ವಿರಾಟ್

Published On - 7:48 pm, Tue, 9 March 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ