AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: T20 ಸರಣಿ ಆರಂಭಕ್ಕೂ ಮುನ್ನ ಕೊಹ್ಲಿಗೆ ಎದುರಾಯ್ತು ಆಟಗಾರರ ಆಯ್ಕೆ ಸಮಸ್ಯೆ.. ವಿರಾಟ್​ ಯಾರ ಕೈಹಿಡಿಯಲ್ಲಿದ್ದಾರೆ?

India vs England: ತಂಡದಲ್ಲಿ ಸ್ಥಾನ ಪಡೆಯಲು ಹಲವು ಯುವ ಆಟಗಾರರು ದೇಶಿ ಕ್ರಿಕೆಟ್​ನಲ್ಲಿ ಮಿಂಚು ಹರಿಸಿ, ಟೀಂ ಇಂಡಿಯಾದ ಕದ ತಟ್ಟಲು ಕಾತುರದಿಂದಿದ್ದಾರೆ. ಹೀಗಾಗಿ ಅನುಭವಿ ಆಟಗಾರರಲ್ಲಿ ನಡುಕ ಶುರುವಾಗಿದ್ದು, ತಂಡದಲ್ಲಿ ಸ್ಥಾನ ಪಡೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ.

India vs England: T20 ಸರಣಿ ಆರಂಭಕ್ಕೂ ಮುನ್ನ ಕೊಹ್ಲಿಗೆ ಎದುರಾಯ್ತು ಆಟಗಾರರ ಆಯ್ಕೆ ಸಮಸ್ಯೆ.. ವಿರಾಟ್​ ಯಾರ ಕೈಹಿಡಿಯಲ್ಲಿದ್ದಾರೆ?
ವಿರಾಟ್ ಕೊಹ್ಲಿ
ಪೃಥ್ವಿಶಂಕರ
|

Updated on: Mar 10, 2021 | 12:34 PM

Share

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮಾರ್ಚ್ 12 ರಿಂದ ಪ್ರಾರಂಭವಾಗಲಿದೆ. ಆದರೆ, ಈ ಸರಣಿಯ ಆರಂಭಕ್ಕೂ ಮೊದಲು ವಿರಾಟ್ ಕೊಹ್ಲಿಗೆ ಹಲವು ಸಮಸ್ಯೆಗಳು ಎದುರಾಗಿವೆ. ತಂಡದಲ್ಲಿ ಸ್ಥಾನ ಪಡೆಯಲು ಹಲವು ಯುವ ಆಟಗಾರರು ದೇಶಿ ಕ್ರಿಕೆಟ್​ನಲ್ಲಿ ಮಿಂಚು ಹರಿಸಿ, ಟೀಂ ಇಂಡಿಯಾದ ಕದ ತಟ್ಟಲು ಕಾತುರದಿಂದಿದ್ದಾರೆ. ಹೀಗಾಗಿ ಅನುಭವಿ ಆಟಗಾರರಲ್ಲಿ ನಡುಕ ಶುರುವಾಗಿದ್ದು, ತಂಡದಲ್ಲಿ ಸ್ಥಾನ ಪಡೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಹಾಗೆಯೇ ಯುವ ಆಟಗಾರರು ಸಹ ತಂಡದಲ್ಲಿ ಸ್ಥಾನ ಸಿಕ್ಕೆ ಸಿಗಬಹುದೆಂಬ ಮಹದಾಸೆಯೊಂದಿಗೆ ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ. ಆದರೆ ಇವೆಲ್ಲವುಗಳ ನಡುವೆ ನಾಯಕ ಕೊಹ್ಲಿಗೆ ತಂಡದಲ್ಲಿ ಯಾರ್ಯಾರಿಗೆ ಸ್ಥಾನ ಕೊಡಬೇಕೆಂಬ ದೊಡ್ಡ ತಲೆನೋವು ಶುರುವಾಗಿದೆ.

ಇನ್ನಿಂಗ್ಸ್ ಆರಂಭಿಸುವವರು ಯಾರು? ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಪರ ಆರಂಭಿಕರನ್ನಾಗಿ ಯಾರನ್ನು ಕಳಿಸುವುದು ಎಂಬುದರ ಬಗ್ಗೆ ಕೊಹ್ಲಿ ತೀವ್ರವಾಗಿ ತಲೆಕೇಡಿಸಿಕೊಂಡಿದ್ದಾರೆ. ಏಕೆಂದರೆ ಆರಂಭಿಕ ಸ್ಥಾನಕ್ಕೆ 3 ಮಧ್ಯೆ ಫೈಪೋಟಿ ಎದುರಾಗಿದ್ದು, ಆರಂಭಿಕ ಸ್ಥಾನಕ್ಕೆ ರೋಹಿತ್​, ಧವನ್​ ಮತ್ತು ರಾಹುಲ್​ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ವಿರಾಟ್ ಕೆ. ಎಲ್ ರಾಹುಲ್ ಜೊತೆಗೆ ಧವನ್​ ಅವರನ್ನು ಕಣಕ್ಕಿಳಿಸಲಿದ್ದಾರೆಯೇ? ಅಥವಾ ರೋಹಿತ್ ಧವನ್ ಜೋಡಿ ಇನ್ನಿಂಗ್ಸ್​ ಆರಂಭಿಸಲಿದೇಯಾ? ಅಥವಾ ರೋಹಿತ್ ಮತ್ತು ರಾಹುಲ್ ಜೋಡಿಗೆ ಕೊಹ್ಲಿ ಅಸ್ತು ಎನ್ನುತ್ತಾರಾ? ಎಂಬ ಪ್ರಶ್ನೆಗಳು ಉದ್ಭವಿಸಿವೆ.

4 ನೇ ಕ್ರಮಾಂಕದಲ್ಲಿ ಆಡುವವರು ಯಾರು? 4ನೇ ಕ್ರಮಾಂಕದಲ್ಲಿ ಆಡಲು ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ನಡುವೆ ಫೈಪೋಟಿ ಆರಂಭವಾಗಿದೆ. ಆದರಿಂದ ಈಗ ವಿರಾಟ್ ಶ್ರೇಯಸ್ ಅಯ್ಯರ್​ಗೆ ಮಣೆ ಹಾಕಲಿದ್ದಾರಾ ಅಥವಾ ದೇಶಿ ಕ್ರಿಕೆಟ್​ನಲ್ಲಿ ಅಬ್ಬರಿಸಿರುವ ಸೂರ್ಯಕುಮಾರ್ ಯಾದವ್​ಗೆ ಮೊದಲ ಅವಕಾಶ ನೀಡಲಿದ್ದಾರಾ ಕಾದು ನೋಡಬೇಕಿದೆ.

ಸ್ಪಿನ್ ವಿಭಾಗಕ್ಕೆ ಹೆಚ್ಚಿದ ಫೈಪೋಟಿ ಚಹಲ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್​ ಸ್ಪಿನ್​ ವಿಭಾಗದಲ್ಲಿ ಕಣಕ್ಕಿಳಿಯಲು ಕಾತುರರಾಗಿದ್ದಾರೆ. ಈಗ ಕ್ಯಾಪ್ಟನ್ ಕೊಹ್ಲಿ, ಮಿಸ್ಟರಿ ಮ್ಯಾನ್ ವರುಣ್ ಚಕ್ರವರ್ತಿ ಹಾಗೂ ಯುಜ್ವೇಂದ್ರ ಚಾಹಲ್​ಗೆ ತಂಡದಲ್ಲಿ ಸ್ಥಾನ ನೀಡುತ್ತಾರಾ ? ಅಥವಾ ವಾಷಿಂಗ್ಟನ್ ಸುಂದರ್‌,ಚಹಲ್‌ ಜೋಡಿ ಮೋಡಿ ಮಾಡಲಿದೇಯಾ? ಅಥವಾ ಅಕ್ಷರ್ ಪಟೇಲ್ ಮತ್ತೆ ಟಿ20 ಸರಣಿಗೆ ಬರಲಿದ್ದಾರಾ? ಎಂಬ ಕುತೂಹಲ ಹೆಚ್ಚಾಗಿದೆ.

ಭುವನೇಶ್ವರ್​ ಜೊತೆ ಹೊಸಬರ ಕದನ.. ಗಾಯದಿಂದ ಚೇತರಿಸಿಕೊಂಡ ನಂತರ ಹಿರಿಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ ತಂಡಕ್ಕೆ ಮರಳಿದ್ದಾರೆ. ಆದರೆ 31 ವರ್ಷದ ಭುವಿ, ಚಹರ್, ಶಾರ್ದುಲ್ ಮತ್ತು ಸೈನಿ ಜೊತೆ ಟಿ20 ಇಲೆವೆನ್​ನಲ್ಲಿ ಸ್ಥಾನ ಪಡೆಯಲು ಫೈಪೋಟಿ ನಡೆಸಬೇಕಿದೆ.

ವಿಕೆಟ್ ‌ಕೀಪರ್ ಮತ್ತು ಆಲ್‌ರೌಂಡರ್‌.. ರಿಷಭ್ ಪಂತ್ ಅವರೊಂದಿಗೆ ಇಶಾನ್ ಕಿಶನ್ ಸಹ ಕೀಪರ್ ಬ್ಯಾಟ್ಸ್‌ಮನ್ ಆಗಿ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಹೀಗಾಗಿ ಈ ಇಬ್ಬರಲಿ ಕೊಹ್ಲಿ ಗಮನ ಯಾರ ಕಡೆಗೆ? ಅಲ್ಲದೆ ಹಾರ್ದಿಕ್ ಪಾಂಡ್ಯ ಸಹ ಯುವ ಆಟಗಾರನಾದ ರಾಹುಲ್​ ತಿವಾಟಿಯಾ ಜೊತೆ ತಂಡದಲ್ಲಿ ಸ್ಥಾನಕ್ಕಾಗಿ ಜಿದ್ದಿಗೆ ಬಿದ್ದಿದ್ದಾರೆ. ಹೀಗಾಗಿ ಈ ಆಟಗಾರರಲ್ಲಿ ಯಾರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೆಂಬ ಸಮಸ್ಯೆ ಕಿಂಗ್​ ಕೊಹ್ಲಿಗೆ ಎದುರಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಕೊಹ್ಲಿ ಹೇಗೆ ನಿಭಾಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Virat Kohli: ವಿರಾಟ್​ ಕೊಹ್ಲಿಯನ್ನು ನೋಡಲು 1800 ಕಿ.ಮೀ. ಪ್ರಯಾಣಿಸಿದ ಅಭಿಮಾನಿ!

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ