India vs England: ಇಂಗ್ಲೆಂಡ್‌ ಕ್ರಿಕೆಟ್​ನಲ್ಲಿ​ ಮೋರ್ಗನ್​ಗಿರುವಷ್ಟು ಸ್ವಾತಂತ್ರ್ಯ ರೂಟ್​ಗಿಲ್ಲ! ಹಾಗಾಗಿ ಟೆಸ್ಟ್​ ಸರಣಿ ಸೋಲಬೇಕಾಯ್ತು..!

India vs England: ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ದುರ್ಬಲ ತಂಡವನ್ನು ಆಡಿಸಿತು ಎಂದು ವಾಘನ್ ತಮ್ಮ ಟೆಲಿಗ್ರಾಫ್ ಅಂಕಣದಲ್ಲಿ ಬರೆದುಕೊಂಡಿದ್ದಾರೆ.

India vs England: ಇಂಗ್ಲೆಂಡ್‌ ಕ್ರಿಕೆಟ್​ನಲ್ಲಿ​ ಮೋರ್ಗನ್​ಗಿರುವಷ್ಟು ಸ್ವಾತಂತ್ರ್ಯ ರೂಟ್​ಗಿಲ್ಲ! ಹಾಗಾಗಿ ಟೆಸ್ಟ್​ ಸರಣಿ ಸೋಲಬೇಕಾಯ್ತು..!
ಸರಣಿ ಸೋತ ಇಂಗ್ಲೆಂಡ್​
Follow us
ಪೃಥ್ವಿಶಂಕರ
|

Updated on: Mar 10, 2021 | 12:59 PM

ನಾಲ್ಕು ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ 3-1ರಿಂದ ಭಾರತದೆದೂರು ಸೋಲೊಪ್ಪಿಕೊಂಡಿತ್ತು. ಆದರೆ ಸರಣಿ ಆರಂಭದಲ್ಲಿ ಇಂಗ್ಲೆಂಡ್‌ ತಂಡ ಗೆಲುವಿನೊಂದಿಗೆ ಸರಣಿಯನ್ನು ಪ್ರಾರಂಭಿಸಿತು. ಆದರೆ ಇದರ ನಂತರ, ಆಂಗ್ಲರ ತಂಡವು ಸ್ಪಿನ್ ನೆರವಿನ ಪಿಚ್‌ಗಳಲ್ಲಿ ಪಂದ್ಯವನ್ನ ಗೆಲ್ಲುವಲ್ಲಿ ವಿಫಲವಾಯಿತು. ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ನಾಲ್ಕನೇ ದಿನದವರೆಗೂ ಪಂದ್ಯ ನಡೆಯಲಿಲ್ಲ. ಭಾರತ ವಿರುದ್ಧ ಟೆಸ್ಟ್ ಸರಣಿಯನ್ನು ಕಳೆದುಕೊಂಡ ನಂತರ ಇಂಗ್ಲೆಂಡ್ ಕ್ರಿಕೆಟ್‌ ಮೇಲೆ ಹಲವು ಆರೋಪಗಳು ಕೇಳಿಬರುತ್ತಿವೆ.ತಂಡದ ಆಟಗಾರರ ಆಯ್ಕೆಯಲ್ಲಿ ಟೆಸ್ಟ್ ತಂಡದ ನಾಯಕ ಜೋ ರೂಟ್‌ಗೆ, ಏಕದಿನ-ಟಿ 20 ನಾಯಕ ಇಯಾನ್​ ಮಾರ್ಗನ್​ಗಿರುವಷ್ಟು ಸ್ವಾತಂತ್ರ್ಯ ಇಲ್ಲ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾಘನ್ ಹೇಳಿದ್ದಾರೆ.

ಇಂಗ್ಲೆಂಡ್ ದುರ್ಬಲ ತಂಡವನ್ನು ಆಡಿಸಿತು.. ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ದುರ್ಬಲ ತಂಡವನ್ನು ಆಡಿಸಿತು ಎಂದು ವಾಘನ್ ತಮ್ಮ ಟೆಲಿಗ್ರಾಫ್ ಅಂಕಣದಲ್ಲಿ ಬರೆದುಕೊಂಡಿದ್ದಾರೆ. ಜೋಸ್ ಬಟ್ಲರ್ ಮತ್ತು ಮೊಯಿನ್ ಅಲಿಯಂತಹ ಆಟಗಾರರು ಸರಣಿಯ ಮಧ್ಯದಲ್ಲಿಯೇ ದೇಶಕ್ಕೆ ವಾಪಾಸ್ಸಾದರು. ಆದರೆ ಸೀಮಿತ ಓವರ್‌ಗಳ ಸರಣಿಗೆ ತಂಡದೊಂದಿಗೆ ಮತ್ತೆ ಭಾರತಕ್ಕೆ ಮರಳಲ್ಲಿದ್ದಾರೆ.

ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ಯಾರಿಗೆ ಹೆಚ್ಚಿನ ಅಧಿಕಾರ ಇದೆ ಎಂಬುದು ಬಹಳ ಸ್ಪಷ್ಟವಾಗಿದೆ. ಇಯಾನ್​ ಮೋರ್ಗನ್​ಗೆ ಹೋಲಿಸಿದರೆ ತಂಡವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಜೋ ರೂಟ್ ಬಳಿ ಇಲ್ಲ ಎಂದಿದ್ದಾರೆ. ಅಕ್ಟೋಬರ್​ನಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ (ಟಿ 20) ಗಾಗಿ ತಂಡವನ್ನು ಭದ್ರ ಮಾಡಿಕೊಳ್ಳುವ ಸಲುವಾಗಿ ಇಯಾನ್​ ಮಾರ್ಗನ್​, ಸೆಲೆಕ್ಟರ್ಸ್ ಮತ್ತು ಆಶ್ಲೇ ಗೈಲ್ಸ್ ಅವರ ಬಳಿ ಅವರಿಗೆ ಬೇಕಾದ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ವಾಘನ್ ಆರೋಪಿಸಿದರು.

ರೋಟೆಷನ್​ ಪಾಲಿಸಿಯ ಬಗ್ಗೆ ಯಾವುದೇ ಅಸಮಾದಾನವಿಲ್ಲ.. ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶ ಪಡೆಯಲು ಸರಣಿಯನ್ನು 3-1ರಿಂದ ಗೆದ್ದುಕೊಂಡಿತು. ಆಶಸ್ ಪ್ರಶಸ್ತಿಯನ್ನು ಗೆದ್ದ ಮಾಜಿ ನಾಯಕ ವಾಘನ್​ ಹೇಳಿಕೆ ಪ್ರಕಾರ, ನನಗೆ ರೋಟೆಷನ್​ ಪಾಲಿಸಿಯ ಬಗ್ಗೆ ಯಾವುದೇ ಅಸಮಾದಾನವಿಲ್ಲ. ಜೊತೆಗೆ ಆಟಗಾರರಿಗೆ ಬಯೋ-ಬಬಲ್ ನಿಯಮದಿಂದ ವಿರಾಮ ಬೇಕು ಎಂಬುದನ್ನು ಸಹ ಯಾರೂ ವಿರೋಧಿಸುವುದಿಲ್ಲ. ಆದರೆ ಕ್ರಿಕೆಟ್​ನಲ್ಲಿ ಟೆಸ್ಟ್​ ಸರಣಿಯ ಅಭಿಮಾನಿಯಾಗಿರುವ ನನಗೆ, ನಮ್ಮ ಟೆಸ್ಟ್ ತಂಡ ದುರ್ಬಲವಾಗಿರುವುದನ್ನು ಕಂಡು ನಿರಾಶೆಗೊಂಡಿದ್ದೇನೆ. ಆದರೆ ನಮ್ಮ ಟಿ20 ತಂಡ ಅತ್ಯಂತ ಬಲಶಾಲಿಯಾಗಿದೆ ಎಂದರು.

ಮೋರ್ಗನ್ ಈ ವರ್ತನೆಗೆ ವಾಘನ್ ಆತಂಕ.. ಮೋರ್ಗನ್, ಇಂಗ್ಲೆಂಡ್‌ ಕ್ರಿಕೆಟ್​ ಮಂಡಳಿಯಲ್ಲಿ ಹೆಚ್ಚು ಪ್ರಾಬಲ್ಯ ಸಾಧಿಸುತ್ತಿರುವುದರ ಬಗ್ಗೆ ವಾಘನ್ ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ಒಬ್ಬ ಆಟಗಾರನಿಗೆ ಇಷ್ಟು ಪ್ರಾಧನ್ಯತೆ ನೀಡುವುದು ಅಪಾಯಕಾರಿ. ಏಕೆಂದರೆ, ಆತ ವಿವಿಧ ಪರಿಸ್ಥಿತಿಯಲ್ಲಿ ವಿಶಾಲವಾಗಿ ಚಿಂತಿಸುವುದಿಲ್ಲ. ಮೋರ್ಗನ್ ಒಬ್ಬ ಉತ್ತಮ ಕ್ಯಾಪ್ಟನ್. ಆದರೆ ಅವರಿಗೆ ಬೇಕಾದ ಹಾಗೇ ಮಂಡಳಿಯನ್ನು ಬಳಸಿಕೊಳ್ಳುತ್ತಿರುವುದು ತಪ್ಪು. ಈ ರೀತಿಯ ವರ್ತನೆ ಅವರಿಗೆ, ಅವರ ತಂಡಕ್ಕೆ ಮಾತ್ರ ಆದ್ಯತೆಯಾಗಿದೆ. ಹೀಗಾಗಿ ಮೋರ್ಗನ್​ಗೆ ಹೆಚ್ಚಿನ ಆಧ್ಯತೆ ನೀಡುತ್ತಿರುವುದು ಇತರ ವಿಷಯಗಳಿಗೆ ಹಾನಿಯನ್ನುಂಟು ಮಾಡುತ್ತದೆ ಎಂಬ ಸಂದೇಶವನ್ನು ರವಾನಿಸುತ್ತದೆ ಎಂದರು.

ಇದನ್ನೂ ಓದಿ: India vs England: ಕುಣಿಲಾಗದವರು ನೆಲ ಡೊಂಕು ಎಂದರು.. ಚೆನ್ನೈ ಪಿಚ್ ಟೀಕಿಸಿದವರ ವಿರುದ್ಧ ಗಾವಸ್ಕರ್​ ಗರಂ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ