India vs England: ಕುಣಿಲಾಗದವರು ನೆಲ ಡೊಂಕು ಎಂದರು.. ಚೆನ್ನೈ ಪಿಚ್ ಟೀಕಿಸಿದವರ ವಿರುದ್ಧ ಗಾವಸ್ಕರ್​ ಗರಂ

India vs England: ಇಂಗ್ಲೆಂಡ್‌ನಲ್ಲಿ ಸೀಮಿಂಗ್ ಪಿಚ್​ಗಳು ಇವೆ. ಆಸ್ಟ್ರೇಲಿಯಾ ತಂಡವನ್ನು 46 ರನ್​ ಗಳಿಗೆ ಆಲ್​ಔಟ್ ಆಗುವಾಗ ಯಾರೂ ಸಹ ಅದರ ಬಗ್ಗೆ ಮಾತನಾಡುವುದಿಲ್ಲ. ಆದರೆ ಯಾವಾಗಲೂ ಭಾರತೀಯ ಪಿಚ್‌ಗಳ ಬಗ್ಗೆ, ಮತ್ತು ಚೆಂಡು ತಿರುಗಲು ಪ್ರಾರಂಭಿಸಿದಾಗ, ಜನರು ಈ ರೀತಿಯ ಟೀಕೆಗಳನ್ನು ಮಾಡುತ್ತಾರೆ

India vs England: ಕುಣಿಲಾಗದವರು ನೆಲ ಡೊಂಕು ಎಂದರು.. ಚೆನ್ನೈ ಪಿಚ್ ಟೀಕಿಸಿದವರ ವಿರುದ್ಧ ಗಾವಸ್ಕರ್​ ಗರಂ
ಸುನಿಲ್ ಗವಾಸ್ಕರ್
Follow us
ಪೃಥ್ವಿಶಂಕರ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 15, 2021 | 6:24 PM

ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಿಚ್‌ನ ಗುಣಮಟ್ಟವನ್ನು ಪ್ರಶ್ನಿಸಿದವರನ್ನು ಭಾರತದ ಮಾಜಿ ನಾಯಕ ಮತ್ತು ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗರಾದ ಮೈಕೆಲ್ ವಾಘನ್ ಮತ್ತು ಮ್ಯಾಟ್ ಪ್ರಿಯರ್ ಅವರು ಚೆನ್ನೈ ಪಿಚ್ ಅನ್ನು ‘ರ್ಯಾಂಕ್ ಟರ್ನರ್’ ಮತ್ತು ‘ಡಸ್ಟ್‌ಬೌಲ್’ ಎಂದು ತೀವ್ರವಾಗಿ ಟೀಕಿಸಿದ್ದರು.

ಪಂದ್ಯದ ಮೊದಲ ದಿನದಿಂದಲೂ ಪಿಚ್​ ಸ್ಪಿನ್ನರ್‌ಗಳಿಗೆ ನೆರವಾಗಿದ್ದೆ ಇವರ ಟೀಕೆಗೆ ಕಾರಣವಾಗಿದೆ. ರೋಹಿತ್ ಶರ್ಮಾ ಅವರ 161 ರನ್‌ಗಳ ಭರ್ಜರಿ ಆಟದ ನೆರವಿನಿಂದಾಗಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 329 ರನ್ ಗಳಿಸಿದರೆ, ಇಂಗ್ಲೆಂಡ್ ತಂಡವನ್ನು ಭಾರತೀಯ ಸ್ಪಿನ್ನರ್‌ಗಳು ಬಹುಬೇಗನೇ ಆಲ್​ಔಟ್​ ಮಾಡುವಲ್ಲಿ ಯಶಸ್ವಿಯಾದರು.

ಭಾರತೀಯ ಪಿಚ್‌ಗಳೇ ಇತರರ ಕೆಂಗಣ್ಣೆಗೆ ಗುರಿಯಾಗುತ್ತವೆ.. ಚೆನ್ನೈ ಪಿಚ್ ಬಗ್ಗೆ ವಿಮರ್ಶಕರನ್ನು ತರಾಟೆಗೆ ತೆಗೆದುಕೊಂಡ ಗಾವಸ್ಕರ್, ಪಿಚ್​ ಮೊದಲನೇ ದಿನದಿಂದಲೂ ಟರ್ನ್​ ಪಡೆಯಲೂ ಪ್ರಾರಂಭಿಸಿದರೆ ಮೊದಲು ಭಾರತೀಯ ಪಿಚ್‌ಗಳೆ ಇತರರ ಕೆಂಗಣ್ಣಿಗೆ ಗುರಿಯಾಗುತ್ತವೆ. ಅದೇ ಇಂಗ್ಲೆಂಡ್‌ನಲ್ಲಿ ಸೀಮಿಂಗ್ ಪಿಚ್‌ಗಳನ್ನು ಸಿದ್ಧಪಡಿಸುವಾಗ ಯಾರ ಕಣ್ಣಿಗೂ ಸಹ ಇದು ಕಾಣಿಸುವುದಿಲ್ಲ ಎಂದರು.

ಇಂಗ್ಲೆಂಡ್‌ನಲ್ಲಿ ಸೀಮಿಂಗ್ ಪಿಚ್​ಗಳು ಇವೆ. ಆಸ್ಟ್ರೇಲಿಯಾ ತಂಡವನ್ನು 46 ರನ್​ಗಳಿಗೆ ಆಲ್​ಔಟ್ ಮಾಡಿದಾಗ ಯಾರೂ ಸಹ ಅದರ ಬಗ್ಗೆ ಮಾತನಾಡುವುದಿಲ್ಲ. ಆದರೆ ಯಾವಾಗಲೂ ಭಾರತದ ಪಿಚ್‌ಗಳ ಬಗ್ಗೆ ಮತ್ತು ಚೆಂಡು ತಿರುಗಲು ಪ್ರಾರಂಭಿಸಿದಾಗ, ಜನರು ಈ ರೀತಿಯ ಟೀಕೆಗಳನ್ನು ಮಾಡುತ್ತಾರೆ ಎಂದು ಖಾರವಾಗಿಯೇ ಉತ್ತರಿಸಿದರು.

ಇದು ಸವಾಲಿನ ಪಿಚ್, ಆಡಲಾಗದಂತಹ ಪಿಚ್ ಏನಲ್ಲಾ. ಕ್ರಿಕೆಟ್​ನಲ್ಲಿ ಇಂಥದ್ದೆಲ್ಲಾ ಇರಬೇಕು. ಮೊದಲ ಟೆಸ್ಟ್​ನ ಮೊದಲ ಎರಡು ದಿನಗಳಲ್ಲಿ ಏನೂ ಆಗದಿದ್ದಾಗ ಜನರು ಹೇಳುತ್ತಿದ್ದರು, ಇದು ನೀರಸ, ಏನೂ ಆಗುತ್ತಿಲ್ಲ. ಬ್ಯಾಟಿಂಗ್ ಮಾಡುವುದು ತುಂಬಾ ಸುಲಭ ಎಂದು. ಆದ್ದರಿಂದ, ಹೇಳುವ ವಿಷಯಗಳ ನಡುವೆ ಸ್ವಲ್ಪ ಸಮತೋಲನ ಇರಬೇಕು. ನೀವು ಎಲ್ಲ ಸಮಯದಲ್ಲೂ ದೂರಲು ಸಾಧ್ಯವಿಲ್ಲ ಎಂದು ಭಾರತದ ಮಾಜಿ ನಾಯಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ