Ravichandran Ashwin Centuary | ಚೆನ್ನೈನಲ್ಲಿ ಐದನೇ ಶತಕ ಬಾರಿಸಿದ ಅಶ್ವಿನ್​: ಆ ಅದ್ಭುತ ಸೆಂಚುರಿ ಹಿಂದಿದೆ ಈ ಟ್ರಿಕ್​?

Ravichandran Ashwin Centuary | ಅಶ್ವಿನ್​ ಓರ್ವ ಅದ್ಭುತ ಸ್ಪಿನ್ನರ್​. ಹೀಗಾಗಿ, ಎದುರಾಳಿ ಹಾಕುವ ಬೌಲ್​ ಯಾವ ರೀತಿ ಬೀಳುತ್ತದೆ ಎಂಬುದನ್ನು ಗಮನಿಸುವ ಕಲೆ ಅಶ್ವಿನ್​ಗೆ ಕರಗತವಾಗಿದೆ.

Ravichandran Ashwin Centuary | ಚೆನ್ನೈನಲ್ಲಿ ಐದನೇ ಶತಕ ಬಾರಿಸಿದ ಅಶ್ವಿನ್​: ಆ ಅದ್ಭುತ ಸೆಂಚುರಿ ಹಿಂದಿದೆ ಈ ಟ್ರಿಕ್​?
ಶತಕ ಬಾರಿಸಿದ ಆರ್​ ಅಶ್ವಿನ್​
Follow us
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​

Updated on: Feb 15, 2021 | 5:43 PM

ಟೀಂ ಇಂಡಿಯಾದ ಆಲ್​ ರೌಂಡರ್​ ಅಶ್ವಿನ್​ ಇಂಗ್ಲೆಂಡ್​ ವಿರುದ್ಧದ ಎರಡನೇ ಟೆಸ್ಟ್​​ನ ಎರಡನೇ ಇನ್ನಿಂಗ್ಸ್​ನಲ್ಲಿ ಶತಕ ಬಾರಿಸಿದ್ದಾರೆ. ಕೇವಲ 135 ಬಾಲ್​ಗಳಲ್ಲಿ ಶತಕ ಬಾರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.  ಜೊತೆಗೆ, ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹಾಗಾದರೆ, ಅಶ್ವಿನ್​ ಶತಕದ ಹಿಂದಿನ ರಹಸ್ಯವೇನು? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್​ ಸ್ಪಿನ್ನರ್​​ಗಳು ಮೋಡಿ ಮಾಡಿದ್ದಾರೆ. ಜಾಕ್​ ಲೀಚ್​ ಹಾಗೂ ಮೋಯಿನ್​ ಅಲಿ ತಲಾ ನಾಲ್ಕು ವಿಕೆಟ್​ ಕಿತ್ತಿದ್ದಾರೆ. ಸ್ಪಿನ್ನರ್​ ದಾಳಿಗೆ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಅವರಂತಹ ಅನುಭವಿ ಆಟಗಾರರು ತತ್ತರಿಸಿ, ವಿಕೆಟ್​ ಒಪ್ಪಿಸಿ ಶರಣಾಗಿದ್ದಾರೆ. ಆದರೆ, ಅಶ್ವಿನ್​ ಮಾತ್ರ ಇವರ ಬೌಲಿಂಗ್​ ದಾಳಿಗೆ ತತ್ತರಿಸದೆ ಆಟವಾಡಿದ್ದಾರೆ. ಅಶ್ವಿನ್​ ಈ ಸಾಧನೆ ಮಾಡಿರುವುದಕ್ಕೂ ಒಂದು ಕಾರಣವಿದೆ.

ಅಶ್ವಿನ್​ ಓರ್ವ ಅದ್ಭುತ ಸ್ಪಿನ್ನರ್​. ಹೀಗಾಗಿ, ಎದುರಾಳಿ ಮಾಡುವ ಬೌಲಿಂಗ್​ ಯಾವ ರೀತಿ ಟರ್ನ್​ ಆಗುತ್ತದೆ ಎಂಬುದನ್ನು ಗಮನಿಸುವ ಕಲೆ ಅಶ್ವಿನ್​ಗೆ ಕರಗತವಾಗಿದೆ. ಇದೇ ಕಾರಣಕ್ಕೆ ಇಂಗ್ಲೆಂಡ್​ ಸ್ಪಿನ್ನರ್​ಗಳ ಲಯವನ್ನು ಕರಾರುವಕ್ಕಾಗಿ ಗಮನಿಸಿ, ಆ ಲಯಕ್ಕೆ ತಕ್ಕಂತೆ ಆಡಿದ್ದರು ಅಶ್ವಿನ್​. ಅವರು ಸೆಂಚುರಿ ಬಾರಿಸಿದ ಹಿಂದಿನ ಕಾರಣ ಇದುವೇ ಎನ್ನಲಾಗುತ್ತಿದೆ.

ಇದನ್ನೂ ಓದಿ:  ಮೂರನೇ ದಿನ ಭಾರತದ ಸಂಪೂರ್ಣ ಮೇಲುಗೈ, ಅಶ್ವಿನ್ ಶತಕ

ಇನ್ನು, ಚೆನ್ನೈ ಮೈದಾನ ಅಶ್ವಿನ್​ಗೆ ಹೋಂ ಪಿಚ್​. ಹೋಂ ಪಿಚ್​ನಲ್ಲಿ ಸಾಮಾನ್ಯವಾಗಿ ಎಲ್ಲಾ ಆಟಗಾರರು ಅದ್ಭುತವಾಗಿ ಆಡುತ್ತಾರೆ. ಪಿಚ್​ ಹೇಗೆ ವರ್ತಿಸುತ್ತದೆ ಎಂಬುದು ಅವರಿಗೆ ಕರಗತವಾಗಿರುತ್ತದೆ. ಇದೇ ಕಾರಣಕ್ಕೆ ಅಶ್ವಿನ್​ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ